ದಿನ ಭವಿಷ್ಯ: ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವವಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಸೆಪ್ಟೆಂಬರ್ 2025, 18:30 IST
Last Updated 23 ಸೆಪ್ಟೆಂಬರ್ 2025, 18:30 IST
ದಿನ ಭವಿಷ್ಯ
ಮೇಷ
ಕೆಲವು ವಿಚಾರಗಳಲ್ಲಿ ಧೈರ್ಯವು ಕಡಿಮೆಯಾಗುವುದು. ತರಕಾರಿ ಹಾಗೂ ಹಣ್ಣಿನ ಬೆಳೆಯಿಂದ ಲಾಭ ಹೊಂದುವಿರಿ. ನಿದ್ದೆಯ ಸಮಯವನ್ನು ಬೇಗ ಮಾಡಿಕೊಂಡರೆ ಲವಲವಿಕೆ ಹೊಂದಬಹುದು.
ವೃಷಭ
ನೀರಿಗೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗಿನ ಸಮಸ್ಯೆಗಳು ನಿವಾರಣೆಗೊಳ್ಳಲಿವೆ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದ ನಂತರವಷ್ಟೇ ಹೂಡಿಕೆಯನ್ನು ಮಾಡಿ.
ಮಿಥುನ
ಅತಿಯಾದ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಒಮ್ಮೆ ಗಮನಿಸಿ. ವೃದ್ಧಾಶ್ರಮವಾಸಿಗಳಿಗೆ ಹೆಚ್ಚಿನ ಸಹಾಯ ಮತ್ತು ಸಿಹಿತಿನಿಸುಗಳು ಸಿಗಲಿವೆ.
ಕರ್ಕಾಟಕ
ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿದ ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆಯನ್ನು ಕೈ ಬಿಡಬೇಕಾಗುವುದು. ಮೊಮ್ಮಕ್ಕಳು ಸಂತೋಷಕ್ಕೆ ಕಾರಣವಾಗಲಿದ್ದಾರೆ.
ಸಿಂಹ
ವ್ಯಾವಹಾರಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೃಧು ಧೋರಣೆಯಿಂದ ಕೆಲವು ಮಂದಿ ವಿರುದ್ಧ ಧ್ವನಿ ಎತ್ತುವ ಸಾಧ್ಯತೆ ಇದೆ. ಈ ಕಾರಣದಿಂದ ದಿನದಿಂದ ದಿನಕ್ಕೆ ಬದಲಾಗಬೇಕಾಗುತ್ತದೆ.
ಕನ್ಯಾ
ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಬಹುದು. ಕಾರ್ಯವು ನಿರ್ವಿಘ್ನವಾಗಿ ನೆರವೇರಲು ವಿಘ್ನೇಶ್ವರನ ಸ್ತೋತ್ರ ಪಠಿಸಿ. ಪಾದರಕ್ಷೆಯ ಮಾರಾಟಗಾರರಿಗೆ ಲಾಭ ಉಂಟಾಗುವುದು.
ತುಲಾ
ತಾಂತ್ರಿಕ ಕ್ಷೇತ್ರದಲ್ಲಿ ನೂತನ ಉದ್ಯೋಗ ಸಂಪಾದನೆಗೆ ಹೊರಟಂಥ ವ್ಯಕ್ತಿಗಳಿಗೆ ಅಭಿವೃದ್ಧಿದಾಯಕವೆಂದು ಅನಿಸಲಿದೆ. ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು.
ವೃಶ್ಚಿಕ
ಅಣ್ಣ–ತಂಗಿಯರ ನಡುವೆ ಸಂಬಂಧಗಳು ಗಟ್ಟಿಯಾಗುವಂಥ ವಿಶೇಷ ವಿಚಾರಗಳು ನಡೆಯುವ ಸಾಧ್ಯತೆಗಳಿವೆ. ಸಣ್ಣಮಟ್ಟದ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳು ದೊರೆಯುವ ಸಂಭವವಿದೆ.
ಧನು
ಸಾಲದ ರೂಪದಲ್ಲಿ ಸ್ನೇಹಿತರಿಗೆ ನೀಡಿದ ಹಣವು ಹಿಂದಿರುಗಿ ಕೈಸೇರಲಿದೆ. ವೃತ್ತಿರಂಗದಲ್ಲಿ ನೂತನ ಸ್ಥಾನಮಾನ ದೊರೆತು ಸಂತಸವಾಗುತ್ತದೆ. ಇದು ಆನಂದವನ್ನು ಹೆಚ್ಚಿಸುತ್ತದೆ.
ಮಕರ
ವಿದೇಶದಲ್ಲಿರುವ ಮಕ್ಕಳ ಅಥವಾ ಬಂಧುಮಿತ್ರರ ಆಗಮನ ಮನಸ್ಸಿಗೆ ಸಂತೋಷ ಕೊಡುತ್ತದೆ. ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುವ ಬಗ್ಗೆ ಅರಿವಾಗುವುದು, ಸರಿಪಡಿಸುವ ಮಾರ್ಗವನ್ನು ಕಂಡುಕೊಳ್ಳಿರಿ.
ಕುಂಭ
ಮಕ್ಕಳ ವಿಷಯದಲ್ಲಿ ಕಾಳಜಿಯನ್ನು ತೋರಿದಲ್ಲಿ ಅವರ ಭವಿಷ್ಯ ಉತ್ತಮವಾಗುವುದು. ಕ್ರೀಡಾಸಕ್ತರಿಗೆ ಉತ್ತಮ ಸಮಯ ಮತ್ತು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಮಯ ಕೂಡಿಬರಲಿದೆ.
ಮೀನ
ಧಾರ್ಮಿಕ ವಿಚಾರಗಳಲ್ಲಿ ಸಾಧನೆ ಮಾಡುವವರಿಗೆ ಈ ದಿನವು ಸುಸಮಯವಾಗಲಿದೆ. ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವವಿದೆ. ಹಣ್ಣು , ತರಕಾರಿ ವ್ಯಾಪಾರದಿಂದ ಬಹಳಷ್ಟು ಲಾಭ ಬರುವುದು.