ADVERTISEMENT

ದಿನ ಭವಿಷ್ಯ: ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಿವಾಹ ವಿಚಾರದ ನಿರ್ಧಾರಗಳೆಲ್ಲವೂ ಅಡ್ಡಗೋಡೆಯ ಮೇಲಿನ ದೀಪದಂತೆ ಇರುವುದು ಅಸಮಾಧಾನವನ್ನು ಉಂಟುಮಾಡುತ್ತದೆ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು.
  • ವೃಷಭ
  • ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿದ್ದರೆ ಬಹುಮಾನವನ್ನು ನಿರೀಕ್ಷಿಸಬಹುದು. ದಂಪತಿಗಳು ಒಟ್ಟಾಗಿ ದೇವರ ದರ್ಶನ ಅಥವಾ ಹರಕೆ ತೀರಿಸುವಂಥ ಕೆಲಸಗಳನ್ನು ಮಾಡುವ ಯೋಗವಿದೆ. ಅಪೇಕ್ಷಿತ ಫಲ ಈಡೇರುವುದು. 
  • ಮಿಥುನ
  • ಸ್ನೇಹಿತರೊಂದಿಗೆ ಭೂಮಿ ಖರೀದಿಗಾಗಿ ನಡೆಸಿದ ಪ್ರಯತ್ನ  ಲಾಭ ತರಲಿದೆ. ಮಹಿಳೆಯರು ದೇಹದಲ್ಲಾಗುತ್ತಿರುವ ಅಸಮರ್ಪಕ ಬದಲಾವಣೆಗಳನ್ನು ಕಡೆಗಣಿಸದೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. 
  • ಕರ್ಕಾಟಕ
  • ಹಣವು ಕೈಸೇರಿತೆಂದಾದರು ದುಂದುವೆಚ್ಚ ಮಾಡದೆ ಹಣದ ಸದ್ವಿನಿಯೋಗ ಮಾಡಿ. ಮೈಮುರಿದು ಕೆಲಸ ಮಾಡುವ ಬದ್ಧತೆ  ನಿಲ್ಲಿಸಬೇಡಿ. ಅದು ಆರೋಗ್ಯವನ್ನು ಕಾಪಾಡುವುದು. 
  • ಸಿಂಹ
  • ಮಕ್ಕಳ ಏಳಿಗೆಯನ್ನು ಕಾಣಬೇಕೆಂದು ಬಯಸುವುದು ಅರಿವಿಗೆ ಬಾರದ ವಿಷಯವಾಗಿ ಉಳಿಯುತ್ತದೆ. ಬೇಸರ ಬೇಡ ಶ್ರೀ ಆಂಜನೇಯನ ದರ್ಶನದಿಂದ  ಅಸಾಧ್ಯ ಕಾರ್ಯಗಳು ನೆರವೇರಲಿವೆ. 
  • ಕನ್ಯಾ
  • ವ್ಯವಹಾರದಲ್ಲಿ ಎದುರಾಗುವ  ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ. ಕಥೆ ಕವನಗಳ ಬರವಣಿಗೆಯಲ್ಲಿ ಅಥವಾ ಪುಸ್ತಕಗಳ ಅಧ್ಯಯನದಲ್ಲಿ ಸಮಯ ಕಳೆಯುವಿರಿ. 
  • ತುಲಾ
  • ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಅಸೂಯೆ ಪಡುವ ಸಹೋದ್ಯೋಗಿ ಯಾರೆಂಬುವುದು ತಿಳಿಯುವುದು.   ಕೆಲಸಗಳಿಗೆ ಬೇರೆಯವರ ಅತಿಯಾದ ಅವಲಂಬನೆ ಬೇಡ. ಆತ್ಮಸ್ಥೈರ್ಯ ಹೆಚ್ಚಲಿದೆ. 
  • ವೃಶ್ಚಿಕ
  • ಅರ್ಧಕ್ಕೆ ನಿಂತ ಸ್ವಂತ ಕಾರ್ಯಗಳು ಪುನಃ ಚಾಲನೆ ದೊರೆಯಲಿದೆ. ವ್ಯವಹಾರದ ವಿಷಯಗಳಿಂದಾಗಿ ಬಿಡುವಿಲ್ಲದ ಕೆಲಸಗಳು ಎದುರಾಗುವುದು. ತಾಮಸ ಗುಣಗಳನ್ನು ಪ್ರದರ್ಶಿಸಿದರೆ ಘನತೆಗೆ ಧಕ್ಕೆ ಉಂಟಾಗುತ್ತದೆ.  
  • ಧನು
  • ಯಾತ್ರಿಕರಿಗೆ ದೇವರ ಕೃಪೆಯಿಂದಾಗಿ ಎಲ್ಲಾ ಒಳ್ಳೆಯ ವ್ಯವಸ್ಥೆ  ಪಡೆಯುವಿರಿ. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯ ಎಂಬ ನೆಪ ಮಾಡಿಕೊಂಡು ಪಾಠ ಪ್ರವಚನಗಳ ಮೇಲೆ ಗಮನ ಕಡಿಮೆಯಾದರೆ ಕಷ್ಟ  
  • ಮಕರ
  • ಜನರ ನಿಂದನೆಗಳು ಕಿವಿಗೆ ಬಿದ್ದು ವಾಸ್ತವತೆಯ ಬಗ್ಗೆ ಅವರಿಗೆ ಪರಿಚಯಿಸುವ ಹಠ ಮೂಡುತ್ತದೆ. ಸಾಮಾಜಿಕ ಜಾಲತಾಣಗಲ್ಲಿ  ವೀಕ್ಷಿಸಿದ ವ್ಯಕ್ತಿಯಿಂದ ಅನುಕೂಲಗಳಾಗುವ ಸಾಧ್ಯತೆ ಇದೆ. 
  • ಕುಂಭ
  • ಧನಲಾಭದಲ್ಲಿ ಒಂದು ರೀತಿಯ ಹೊಸ ಅನುಭವ ಹಾಗೂ ಅದೃಷ್ಟವನ್ನು ಕಾಣುವಿರಿ. ಗುರುವಿನ ಆಶೀರ್ವಾದವನ್ನು ಬೇಡಿ ನಿಮ್ಮ ಕೆಲಸವನ್ನು ಆರಂಭಿಸಿ. ಆದಾಯದಷ್ಟೇ ಖರ್ಚು ಇರಲಿದೆ. 
  • ಮೀನ
  • ಸಣ್ಣ-ಪುಟ್ಟ ಅನಾರೋಗ್ಯಕ್ಕೆ ಸ್ವಯಂಔಷಧ ಮಾಡಿಕೊಳ್ಳಬೇಡಿ. ವಸ್ತ್ರವಿನ್ಯಾಸಕರ ಹೊಸ ವಿನ್ಯಾಸಕ್ಕೆ ಬೇಡಿಕೆ ಬರುವುದು. ರಾಸಾಯನಿಕ ವಸ್ತುವಿನಿಂದ ಅಲರ್ಜಿಯಾಗುವ ಸಾಧ್ಯತೆಗಳಿದೆ.  
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.