ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜುಲೈ 2024, 18:30 IST
Last Updated 28 ಜುಲೈ 2024, 18:30 IST
ದಿನ ಭವಿಷ್ಯ
ಮೇಷ
ಕಾಗದ ಪತ್ರಗಳ ಬರವಣಿಗೆಗಾರರಿಗೆ ಮತ್ತು ಕಂಪ್ಯೂಟರ್ ಕೆಲಸಗಾ ರರಿಗೆ ತೃಪ್ತಿಕರ ದಿನ. ಬಾಲ್ಯದಲ್ಲಿ ಕಲಿತ ಕೆಲ ವಿಷಯಗಳು ಈಗ ಉಪಯೋಗಕ್ಕೆ ಬರಲಿವೆ. ಶುಭ ಕಾರ್ಯಗಳಿಗೆ ರಾಹುಕಾಲದ ನಂತರ ಪ್ರಯಾಣ ಬೆಳೆಸಿ.
ವೃಷಭ
ದಾಂಪತ್ಯದಲ್ಲಿ ತಗ್ಗಿ-ಬಗ್ಗಿ ನಡೆಯುವುದನ್ನು ಕಲಿಯಿರಿ. ಇಲ್ಲವಾದಲ್ಲಿ ವಿರಸಕ್ಕೆ ಕಾರಣವಾಗುವುದು. ಪೊಲೀಸ್ ಅಧಿಕಾರಿಗಳಿಗೆ ತುರ್ತು ಕೆಲಸ ಒದಗಿ ಬರುವುದು. ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ.
ಮಿಥುನ
ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ಸಿಗಲಿದೆ. ಹಣಕಾಸಿನ ತಾಪತ್ರಯಗಳು ಶೀಘ್ರ ಪರಿಹಾರ ವಾಗುವುದು. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು.
ಕರ್ಕಾಟಕ
ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಿ ಮುಂದಿನ ಹಂತವನ್ನು ಮುಟ್ಟುವಿರಿ. ಮನೆ ಕಟ್ಟುವ ಕೆಲಸ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಮುಂದುವರಿಯಲಿದೆ.
ಸಿಂಹ
ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಸಂತೋಷ ಉಂಟಾಗುವುದು. ಕೌಟುಂಬಿಕ ವಿಷಯಗಳತ್ತ ಹೆಚ್ಚು ಗಮನಹರಿಸ ಬೇಕಾಗುವುದು. ಹೊಸ ವಾಹನ ಖರೀದಿಸುವ ಬಯಕೆ ಈಡೇರಲಿದೆ.
ಕನ್ಯಾ
ಆಸಕ್ತಿಕರ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಹೊಸ ಯೋಜನೆಗಳಿಗೆ ಸಹಕಾರಿ. ಕುಟುಂಬದ ಹಿರಿಯರು ಮಾಡಿದ ಪುಣ್ಯದ ಫಲಗಳು ಸಿಗಲಿವೆ. ಹಳೆಯ ಯೋಜನೆಗಳಿಗೆ ಜೀವ ಕೊಡಲು ನಿಶ್ಚಯಿಸುವಿರಿ.
ತುಲಾ
ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ಸಹೋದರರ ಉತ್ತಮ ಸಹಕಾರ ದೊರೆಯುವುದು. ವಾದ ವಿವಾದಗಳು ನಡೆದರೂ ಕಾರ್ಯ ಸಾಧನೆಗೆ ಅಡ್ಡಿಯಾಗದು. ವಾಣಿಜ್ಯ ಬೆಳೆಗಾರರಿಗೆ ಉತ್ತಮ ಬೆಲೆ ದೊರಕಲಿದೆ.
ವೃಶ್ಚಿಕ
ಸದಾಕಾಲ ಕಾರ್ಯ ಪ್ರವೃತ್ತರಾಗಿ, ತಪ್ಪುಗಳನ್ನು ಮಾಡದೇ ಸರಿಯಾದ ದಾರಿಯಲ್ಲಿ ದುಡಿಯುವ ನಿಮಗೆ ಫಲಗಳು ಅನುಭವಕ್ಕೆ ಬರಲಿವೆ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
ಧನು
ಅಧ್ಯಾಪಕ ವರ್ಗದವರಿಗೆ ವಿದ್ಯಾರ್ಥಿಗಳ ಮೆಲುಗೈಯಿಂದ ಗೌರವ ಸಿಗುವುದು. ಮೇಲಧಿಕಾರಿಗಳಿಗೆ ಜವಾಬ್ದಾರಿಯುತ ನಡೆಯಿಂದಾಗಿ ನಂಬಿಕೆ ಹೆಚ್ಚಾಗಲಿದೆ. ಹಿರಿಯರ ಶುಶ್ರೂಷೆಯ ಬಗ್ಗೆ ಗಮನಹರಿಸಿ.
ಮಕರ
ನ್ಯಾಯಾಲಯದ ವಿಚಾರಗಳಲ್ಲಿ ಮಧ್ಯಸ್ಥಿಕೆ ಅಥವಾ ರಾಜಿಯ ಮನೋಭಾವ ಕಾರ್ಯದ ಅನುಕೂಲಕ್ಕೆ ಸಾಧಕ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ.
ಕುಂಭ
ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ಸ್ಥಿತಿ ಗತಿಗಳನ್ನು ನೋಡಿಕೊಂಡು ನಿವೇಶನವನ್ನು ಖರೀದಿಸುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಕುಟುಂಬದಲ್ಲಿ ಉಂಟಾಗಿದ್ದ ಕಲಹ ದೂರಾಗಲಿದೆ.
ಮೀನ
ಕಾರ್ಯ ನಿಮಿತ್ತ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ. ಪ್ರತಿಭೆಗೆ ತಕ್ಕಂಥ ಪ್ರತಿಫಲ ಸಿಗುವುದು.