ADVERTISEMENT

ದಿನ ಭವಿಷ್ಯ: ಈ ರಾಶಿಯವರು ಮಾಡಬೇಕಾದ ಕೆಲಸಗಳನ್ನು ತುರಾತುರಿಯಿಂದ ಮುಗಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಮೇ 2024, 0:44 IST
Last Updated 2 ಮೇ 2024, 0:44 IST
   
ಮೇಷ
  • ಎಂದೋ ಹುಡುಗಾಟಿಕೆಯಲ್ಲಿ ಮಾಡಿಕೊಂಡ ಕೆಲವು ಕಾರ್ಯಗಳು ಬಹುವಾಗಿ ಕಾಡುವ ಸಾಧ್ಯತೆ ಇದೆ. ತಿಳಿವಳಿಕೆ ಇಲ್ಲದವರಂತೆ ವರ್ತಿಸಿ ಮೂರ್ಖರೆನ್ನಿಸಬೇಡಿ. ಆದಾಯ ಎಂದಿನಂತೆ ಇರುತ್ತದೆ.
  • ವೃಷಭ
  • ಅಗತ್ಯಕ್ಕಿಂತ ಹೆಚ್ಚು ಅಲಂಕಾರವನ್ನು ಮಾಡಿಕೊಂಡು ಬರುವ ನಿಮ್ಮನ್ನು ಕಂಡು ಆಡಿಕೊಳ್ಳುವ ಜನರಿರುವರು, ಗಮನವಿರಲಿ. ಮುಕ್ತ ಮಾತುಕತೆಯಿಂದ ಕಾರ್ಮಿಕರ ಸಮಸ್ಯೆಗಳನ್ನು ಪೂರ್ಣಗೊಳಿಸಿ.
  • ಮಿಥುನ
  • ಸಭೆಯಲ್ಲಿ ಮಾತನಾಡುವಾಗ ದಾಕ್ಷಿಣ್ಯ ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದ ಮತ್ತು ಮನಸ್ಸಿನ ಆಲೋಚನೆಯಂತೆ ಮಾತನಾಡಿದಲ್ಲಿ ಬೇಕಾದ ಸೌಲಭ್ಯಗಳು ದೊರೆಯಲಿವೆ. ಪ್ರಯಾಣ ಮಾಡಬೇಕಾಗಬಹುದು.
  • ಕರ್ಕಾಟಕ
  • ಸಂಗ್ರಹಿಸಿದ ಸಂತ್ರಸ್ತರ ನಿಧಿಯು ಉತ್ತಮವಾಗಿ ವಿನಿಯೋಗವಾಗುವುದು ಹಾಗೂ ಅಭಿನಂದನಾರ್ಹವಾಗಿರುವುದು. ಮನೆಗೆ ಬರುವ ಅತಿಥಿಗಳು ಸತ್ಕಾರದಿಂದ ಸಂತೃಪ್ತಿ ಹೊಂದುವರು.
  • ಸಿಂಹ
  • ವಿದ್ಯಾರ್ಥಿಗಳು ಶಿಕ್ಷಕರ ಒತ್ತಾಯಕ್ಕಾಗಿ ಕಾಟಾಚಾರಕ್ಕೆ ಶಾಲಾ ಕಾಲೇಜುಗಳ ಕೆಲಸಗಳನ್ನು ಮಾಡುವುದು ಬೇಡ. ಸಿಹಿ ಖಾದ್ಯ ತಯಾರಕರಿಗೆ ಬೇಡಿಕೆಗಳು ಹೆಚ್ಚಲಿವೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಉತ್ತಮ ದಿನ.
  • ಕನ್ಯಾ
  • ಸ್ನೇಹಿತನ ಮಾತನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕೇಳುವುದರಿಂದ ಆಜ್ಞಾನುವರ್ತಿಯನ್ನಾಗಿಸಬಹುದು. ಹೊಸ ದಾರಿಯನ್ನು ಹಿಡಿಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಗ್ರಹಗತಿಯ ಬೆಂಬಲ ಇದೆ.
  • ತುಲಾ
  • ಮಾಡಬೇಕಾದ ಕೆಲಸಗಳನ್ನು ತುರಾತುರಿಯಿಂದ ಮುಗಿಸಿದಲ್ಲಿ ಬೇಕಾದ ಫಲಿತಾಂಶ ಸಿಗದಿರಬಹುದು. ಸಾವಕಾಶವಾಗಿ ವ್ಯವಹರಿಸಿ. ಕರಿದ ತಿಂಡಿಗಳು ಹಾಗೂ ನಂಜಿನ ಪದಾರ್ಥಗಳಿಂದ ದೂರವಿರಿ.
  • ವೃಶ್ಚಿಕ
  • ವೃತ್ತಿಗೆ ಸಂಬಂಧಪಟ್ಟಂತೆ ಎಷ್ಟೇ ಎಚ್ಚರವಹಿಸಿ ವ್ಯಕ್ತಿಗಳನ್ನು ನಂಬಿದರೂ ಕಡಿಮೆಯಾಗುತ್ತದೆ. ಮಾತೃ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತನ ಮೊರೆ ಹೋಗಬೇಕಾಗುವುದು.
  • ಧನು
  • ಹರಡುತ್ತಿರುವ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಇಂದು ನಡೆಯುವ ಘಟನೆಯಿಂದ ನಿಮ್ಮ ಸಂಗಾತಿಗೆ ಸಂತೋಷವಾಗುವುದು. ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ.
  • ಮಕರ
  • ಸಾಧನೆಯ ಪರ್ವತದ ಶೃಂಗದಲ್ಲಿರುವವರು ಅನಿವಾರ್ಯ ಕಾರಣಗಳಿಂದ ಅಭಿನಂದನಾ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ನಿಯತ್ತಿನ ಮುಂದೆ ಯಾರ ಕುತಂತ್ರಗಳು ನಡೆಯುವುದಿಲ್ಲ.
  • ಕುಂಭ
  • ಕುಟುಂಬದಲ್ಲಿ ನಡೆಯುವ ಶುಭಕಾರ್ಯಗಳು ಸಂಭ್ರಮವನ್ನು ಉಂಟುಮಾಡುತ್ತದೆ. ಬ್ಯಾಂಕ್ ಸಂಬಂಧಿ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆಯೇ ಇರಬಹುದು. ಎಚ್ಚರವಿರಲಿ.
  • ಮೀನ
  • ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ನಿಮ್ಮ ಮಾತಿನಿಂದ ದೊಡ್ಡ ಪ್ರಮಾಣದ ಜಗಳ ನಿಂತು ಹೋಗುತ್ತದೆ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಆತ್ಮತೃಪ್ತಿ ದೊರೆಯುತ್ತದೆ. ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.