ADVERTISEMENT

ದಿನ ಭವಿಷ್ಯ: ಮಹಿಳೆಯರಿಗೆ ಉನ್ನತ ಉದ್ಯೋಗ

ಪ್ರಜಾವಾಣಿ ವಿಶೇಷ
Published 29 ಸೆಪ್ಟೆಂಬರ್ 2023, 18:30 IST
Last Updated 29 ಸೆಪ್ಟೆಂಬರ್ 2023, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಶ್ರದ್ಧೆ ಮತ್ತು ಬುದ್ಧಿ ಬಲದಿಂದ ಪ್ರಯತ್ನಕ್ಕೆ ಯಾವುದೇ ರೀತಿ ಚ್ಯುತಿ ಬರುವುದಿಲ್ಲ. ವ್ಯವಹಾರದಲ್ಲಿ ಸಮಂಜಸ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗಮನಕೊಡಿ.
  • ವೃಷಭ
  • ಅಕ್ಕ-ಪಕ್ಕದವರ ಹಾವಭಾವಗಳಿಂದ ಬೇಸರಗೊಂಡು ಜೀವನದ ಪಾಠವನ್ನು ಕಲಿಯುವುದು ಅಗತ್ಯವೆನಿಸುವುದು. ಬಹಳ ದಿನದ ನಂತರದಲ್ಲಿ ಗುರು ಹಿರಿಯರ ದರ್ಶನ ಭಾಗ್ಯ ದೊರಕುತ್ತದೆ. ಸುಖ ಭೋಜನ ಇರುವುದು.
  • ಮಿಥುನ
  • ಮಹಿಳೆಯರಿಗೆ ಉನ್ನತ ಉದ್ಯೋಗ ಹಾಗೂ ಪ್ರಾಪ್ತವಯಸ್ಕರಿಗೆ ವಿವಾಹದ ಶುಭ ಫಲಗಳು ದೊರೆಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಕತ್ತಲೆಯ ಪ್ರಪಂಚದಲ್ಲಿರುವ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ.
  • ಕರ್ಕಾಟಕ
  • ವೃತ್ತಿಯಲ್ಲಿ ತಾತ್ಕಾಲಿಕ ಸಮಾಧಾನ ಹೊಂದಿರುವವರು ಕೆಲವು ಬದಲಾವಣೆ ಮಾಡಿಕೊಂಡರೆ ಸಮಾಧಾನ ಸಿಗುವಂತಾಗಲಿದೆ. ವಿವಾಹದ ವಿಚಾರದ ಕಾರ್ಯಗಳಲ್ಲಿನ ವಿಫಲತೆಯಿಂದ ಮನಸ್ಸಿಗೆ ಬೇಸರವಾಗಬಹುದು.
  • ಸಿಂಹ
  • ರಕ್ತ ಸಂಬಂಧಿ ಕಾಯಿಲೆಯನ್ನು ಹೊಂದಿದವರು ಅಥವಾ ಅಂಥ ಅನುಮಾನ ಇರುವವರು ಇಂದು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಈ ದಿನ ಎದುರಾಳಿಗಳೊಂದಿಗೆ ಸಂಧಾನ ಮಾಡಿಕೊಳ್ಳುವುದು ಸರಿಯಲ್ಲ.
  • ಕನ್ಯಾ
  • ಸ್ನೇಹಿತರಲ್ಲಿ ಮುಕ್ತವಾಗಿ ಮಾತನಾಡುವುದರಿಂದ ಮಾನಸಿಕ ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲಕರ ವಾತಾವರಣದ ಅನುಭವ ದೊರಕಲಿದೆ. ಶುಭ ಸಮಾರಂಭಕ್ಕಾಗಿ ವಸ್ತ್ರಾಭರಣ ಖರೀದಿ ಯೋಗ.
  • ತುಲಾ
  • ಬಹಳ ದಿನದಿಂದ ಇದ್ದಂತಹ ಶತ್ರು ಬಾಧೆ ದೇವತಾನುಗ್ರದಿಂದ ನಿವಾರಣೆ ಆಗಲಿದೆ. ಸರಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಾಲೆಡಗುವ ಪರಿಸ್ಥಿತಿ ನಿಮ್ಮದಾಗಲಿದೆ. ಮಕ್ಕಳಿಗೆ ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಲು ತಿಳಿಸಿ.
  • ವೃಶ್ಚಿಕ
  • ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ವ್ಯವಹಾರಕ್ಕೆ ಸಹಾಯವಾಗುವಂತಹ ವಾಹನ ಖರೀದಿಯ ಬಗ್ಗೆ ಗಮನಹರಿಸಿ. ವೈದ್ಯರು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು.
  • ಧನು
  • ಅಭಿವೃದ್ಧಿಯ ವಿಚಾರದಲ್ಲಿ ವದಂತಿಗಳಿಗೆ ಕಿವಿಗೊಡದೆ ಪ್ರಯತ್ನ ಮುಂದುವರಿಸಿ. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾ ಚರಣೆಗೆ ದೂರ ಸಂಚಾರ ಕಂಡುಬರಲಿದೆ. ಶೀತ ಬಾಧೆ ಉಂಟಾಗುವುದು.
  • ಮಕರ
  • ಎಲ್ಲಾ ಕಾರ್ಯದಲ್ಲೂ ಆತ್ಮ ವಿಶ್ವಾಸವಿರಲಿ . ಅತಿಯಾದ ಆತ್ಮ ವಿಶ್ವಾಸ ನಿಮ್ಮ ಜಯಕ್ಕೆ ಹೊಡೆತವನ್ನು ನೀಡುವುದು. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲ ಪಡೆಯುವಿರಿ. ಆಸ್ತಿ ಲಭ್ಯವಾಗಲಿದೆ.
  • ಕುಂಭ
  • ಪತ್ರಿಕೋದ್ಯಮಿಗಳಿಗೆ ಈ ದಿನದಲ್ಲಿ ಬಿಡುವಿಲ್ಲದ ಕೆಲಸಗಳು ಮತ್ತು ವಿಮರ್ಶಿಸಲು ಕಷ್ಟವಾಗುವಂಥ ಪರಿಸ್ಥಿತಿಗಳು ಎದುರಾಗುತ್ತವೆ. ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇದು ಸೂಕ್ತಕಾಲ. ಲಾಭ ಗಳಿಸುವಿರಿ.
  • ಮೀನ
  • ಮನೋಬಲದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ಭರವಸೆ ಮರೆಯದಿರಿ. ಧಾನ್ಯ ವರ್ತಕರಿಗೆ ನಿರೀಕ್ಷಿತ ಲಾಭ ಸಂಪಾದನೆ ಆಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.