ADVERTISEMENT

ದಿನ ಭವಿಷ್ಯ: ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಫೆಬ್ರುವರಿ 2026, 23:31 IST
Last Updated 24 ಫೆಬ್ರುವರಿ 2026, 23:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಸದುದ್ದೇಶ ಕಾರಣದಿಂದ  ಕೆಲಸವನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುವುದು.
  • ವೃಷಭ
  • ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕಬಹುದು.
  • ಮಿಥುನ
  • ಕೆಲಸಕ್ಕೆ ಇನ್ನೊಂದು ಕೆಲಸ ಜೊತೆ ಜೊತೆಗೂಡಿ ಮುಕ್ತಾಯದ ಹಂತ ತಲುಪಲು ಸಾಧ್ಯವಾಗುವುದಿಲ್ಲ. ಆತ್ಮೀಯರ ಮತ್ತು ಬಂಧುವರ್ಗದವರ ಸಹಾಯ ಸ್ವೀಕರಿಸಿ.
  • ಕರ್ಕಾಟಕ
  • ಬರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಷಯ. ಗೃಹ ಬಳಕೆಯ ಸಾಮಗ್ರಿ ಖರೀದಿಯಿಂದ ಸಂತಸವಾಗಲಿದೆ. ಮಕ್ಕಳಿಂದ ಸೌಖ್ಯವಿರುವುದು.
  • ಸಿಂಹ
  • ಈವರೆಗೂ ಕೂಡಿಟ್ಟ ಶ್ರಮದ ಠೇವಣಿ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬೇಕಾಗುವುದು. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
  • ಕನ್ಯಾ
  • ನಿಯಮ ಉಲ್ಲಂಘನೆ ಮಾಡುವ, ದಬ್ಬಾಳಿಕೆ ನಡೆಸುವ ರೀತಿನೀತಿಯನ್ನು ಬದಲಿಸಿಕೊಳ್ಳಿ. ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ.
  • ತುಲಾ
  • ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವ ತೀರ್ಮಾನ  ಅಭಿವೃದ್ಧಿಗೆ ಕಾರಣವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಕುಟುಂಬದವರೂ ಸಂತಸ ಪಡುತ್ತಾರೆ.
  • ವೃಶ್ಚಿಕ
  • ಇಬ್ಬನಿಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರ ಕೆಲವು ಕೆಲಸದ ಕಾರಣದಿಂದ ಜ್ವರ ಬರಬಹುದು. ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಿ.
  • ಧನು
  • ವ್ಯವಹಾರದಲ್ಲಿ ಅದರಲ್ಲೂ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ. ಯೋಗ ಹೇಳಿಕೊಡುವ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯವಾಗುತ್ತದೆ.
  • ಮಕರ
  • ಮನೆ ನಿರ್ಮಾಣದ ಕಾರ್ಯ ಅಡ್ಡಿ-ಆತಂಕಗಳಿಲ್ಲದೆ ಸರಾಗವಾಗಿ ನಡೆಯಲಿದೆ. ಯೋಚನೆಗಿಂತ ಅಧಿಕ ಮಟ್ಟದಲ್ಲಿ ಹಣ ವ್ಯಯವಾಗುತ್ತದೆ. ಕುಟುಂಬದ ಸದಸ್ಯರ ಜತೆ ಸಮಯ ಕಳೆಯಲಿದ್ದೀರಿ.
  • ಕುಂಭ
  • ಸ್ವಂತ ಉದ್ಯೋಗಿಗಳಿಗೆ ಬರುವ ನೂತನ ಯೋಚನೆಗಳನ್ನು ಕೈ ಬಿಟ್ಟು ಈಗಿನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ.ನಿಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುದು ತಿಳಿದು ಬರಲಿದೆ.
  • ಮೀನ
  • ಅನೇಕ ದಿನಗಳಿಂದ  ಸೇವಿಸುತ್ತಿರುವ ಅಪಥ್ಯದ ಆಹಾರದ ಪರಿಣಾಮವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲಿವೆ. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.