ADVERTISEMENT

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಬಲ ಸಂತಸ ತರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಏಪ್ರಿಲ್ 2024, 0:19 IST
Last Updated 7 ಏಪ್ರಿಲ್ 2024, 0:19 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕಳೆದುಹೋಗಿದ್ದ, ಹಳೆಯ ನೆನಪುಗಳನ್ನು ಹೊಂದಿರುವ ವಸ್ತು ಪುನಃ ಕೈ ಸೇರುತ್ತದೆ. ಮನೋವಿಜ್ಞಾನದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಎದುರು ನೋಡಬಹುದು. ಕಾಲಮಿತಿಯೊಳಗೆ ಕರ್ತವ್ಯ ಪಾಲಿಸಿ.
  • ವೃಷಭ
  • ನಿಮ್ಮ ಸುತ್ತಮುತ್ತಲ ಜನರೊಂದಿಗಿನ ಬಾಂಧವ್ಯವು ಉತ್ತಮಗೊಳ್ಳುವುದು. ವೈದ್ಯರು ಅಭ್ಯಾಸದಲ್ಲಿ ತೋರಿದ ಬೇಜವಬ್ದಾರಿತನದಿಂದ ಪ್ರಾಣಾಪಾಯ ಸಂಭವಿಸಬಹುದು. ಕಥೆ-ಕಾದಂಬರಿಯ ಬಗ್ಗೆ ಆಸಕ್ತಿ ಮೂಡಲಿದೆ.
  • ಮಿಥುನ
  • ಈ ದಿನದ ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಮನೆಯಲ್ಲಿ ಮಕ್ಕಳಿಂದ ಸಂಭ್ರಮದ ವಾತಾವರಣ ಮೂಡುವುದು. ಗಂಟಲು ಬೇನೆ ಎದುರಾದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ.
  • ಕರ್ಕಾಟಕ
  • ಸದಾಕಾಲ ಪಕ್ಕದಲ್ಲಿಯೇ ಇರುವ ಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ, ಖಂಡಿತವಾಗಿ ನೀವೇ ಜಯಶಾಲಿಯಾಗುವಿರಿ. ಇಂದು ದೈಹಿಕ ಶ್ರಮವು ಜಾಸ್ತಿಯಾದರೂ ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
  • ಸಿಂಹ
  • ವ್ಯವಹಾರದಲ್ಲಿ ಎಲ್ಲಾ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರಿದರೂ, ಮೋಸ ಹೋಗುವ ಸಂಭವವಿದೆ. ಜಾಗ್ರತರಾಗಿರಿ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
  • ಕನ್ಯಾ
  • ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಇಂಟೀರಿಯರ್ ಡೆಕೊರೇಟರ್ಸ್‌ಗಳಿಗೆ ಅಧಿಕ ವರಮಾನ ಇರಲಿದ್ದು, ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು.
  • ತುಲಾ
  • ವ್ಯಕ್ತಿಯನ್ನು ಅವರ ಮೊದಲ ಭೇಟಿಯಲ್ಲಿ ನೋಡಿದ ಸ್ವಭಾವವೆಂದು ತೂಕಹಾಕಿ ತೀರ್ಮಾನಿಸಬೇಡಿ. ಸ್ನೇಹಿತರಲ್ಲಿ ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಇತರರನ್ನು ಗೌರವದಿಂದ ನೋಡಿ.‌
  • ವೃಶ್ಚಿಕ
  • ಅವಿವಾಹಿತರಿಗೆ ಕಂಕಣ ಬಲ ಸಂತಸ ತರಲಿದೆ. ಸರಕು ಸಾಗಾಣಿಕೆದಾರರಿಗೆ, ಮತ್ತು ಬಂದರು ಕಾರ್ಮಿಕರಿಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ಮಹಿಳೆಯರಿಗೆ ಆಭರಣ ಕೊಳ್ಳುವಂತಹ ಇಷ್ಟಾರ್ಥ ಸಿದ್ಧಿಯಾಗಲಿದೆ.
  • ಧನು
  • ಧಾರ್ಮಿಕವಾಗಿ ಇರುವವರಿಗೆ, ವೇದಾಧ್ಯಯನದಲ್ಲಿರುವವರಿಗೆ ಮಂತ್ರಸಿದ್ಧಿ ಆಗಬಹುದು. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ. ಮಕ್ಕಳಿಂದ ಅನಾವಶ್ಯಕ ಖರ್ಚು ಸಂಭವಿಸಲಿದೆ.
  • ಮಕರ
  • ನೀವು ಹಿಂದೆ ಮಗನ ಒಳಿತಿಗಾಗಿ, ಅಭ್ಯುದಯಕ್ಕಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸಬಹುದಾಗಿದೆ. ಸಂಪರ್ಕ ಸಾರಿಗೆಯಲ್ಲಿ ಸೇವೆ ಸಲ್ಲಿಸುವವರಿಗೆ ಲಾಭವಾಗುವುದು.
  • ಕುಂಭ
  • ಗೃಹದಲ್ಲಿ ಸಂತೋಷ ತರುವಂಥ ಶುಭ ಸಮಾರಂಭಗಳು ನಡೆಯುವವು. ನೀವು ಎಲ್ಲವನ್ನೂ ಕಷ್ಟಪಟ್ಟು ಅಥವಾ ಇತರರ ಸಹಾಯದಿಂದ ಸಂಪಾದಿಸಿಕೊಳ್ಳಬೇಕಾಗುತ್ತದೆ. ಮಾನಸಿಕ ಖಿನ್ನತೆಯನ್ನು ದೂರಮಾಡಿ.
  • ಮೀನ
  • ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಆರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ನಿಮ್ಮ ಮಿತ್ರರೊಬ್ಬರು ನಿಮಗೆ ಎಲ್ಲ ವಿಧದಲ್ಲಿಯೂ ನಿಮಗೆ ಸಹಾಯ ಮಾಡಲಿದ್ದಾರೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.