ADVERTISEMENT

ದಿನ ಭವಿಷ್ಯ: ಡಿ. 8 – ಈ ರಾಶಿಯವರಿಗೆ ಶುಭ ಕಾರ್ಯಗಳಿಗೆ ಹಣ ವಿನಿಯೋಗವಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಡಿಸೆಂಬರ್ 2023, 23:08 IST
Last Updated 7 ಡಿಸೆಂಬರ್ 2023, 23:08 IST
   
ಮೇಷ
  • ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಅವನತಿಯ ಹಂತವನ್ನು ಹೊಂದುವ ಪರಿಸ್ಥಿತಿ ನಿಮ್ಮ ಗೋಚರಕ್ಕೆ ಬರಬಹುದು, ಜಾಗ್ರತೆ ವಹಿಸಿ. ಕಬ್ಬಿಣ ದಾಸ್ತಾನು ಹೊಂದಿದವರಿಗೆ ತಕ್ಕ ಮಟ್ಟಿಗೆ ಉತ್ತಮ ಆದಾಯ ಸಿಗಲಿದೆ.
  • ವೃಷಭ
  • ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಯವನ್ನು ದೂರಪಡಿಸಿಕೊಂಡು ಉತ್ತಮ ಕೆಲಸಗಳನ್ನು ಮಾಡುವಲ್ಲಿ ಮುಂದಾಗುವಿರಿ. ಪತ್ರಿಕಾ ವರದಿಗಾರರಿಗೆ ಕೆಲಸದಲ್ಲಿನ ದಕ್ಷತೆಯಿಂದ ಹೆಚ್ಚಿನ ಯಶಸ್ಸನ್ನು ಕಾಣುವರು.
  • ಮಿಥುನ
  • ರೈತಾಪಿವರ್ಗದವರು ತಮ್ಮ ವೃತ್ತಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿಯನ್ನು ನೋಡಬಹುದು. ಗುರಿ ಸಾಧನೆಗಳ ಬಗ್ಗೆ ಲಕ್ಷ್ಯವಿರಿಸಲು ಮಕ್ಕಳಿಗೆ ಬುದ್ಧಿವಾದ ಹೇಳುವುದು ಒಳ್ಳೆಯದು.
  • ಕರ್ಕಾಟಕ
  • ಕೈಗೆಟಕುವ ಕಾರ್ಯವೊಂದು ನಿಮ್ಮ ಸತತ ಪ್ರಯತ್ನದಿಂದ ಆಶ್ಚರ್ಯಕರ ರೀತಿಯಲ್ಲಿ ಥಟ್ಟನೆ ಸಿದ್ಧಿಸಬಹುದು. ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಎದುರಾಗುವುದು.
  • ಸಿಂಹ
  • ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿದರೆ ಭಿನ್ನಾಭಿಪ್ರಾಯ ಮೂಡುವ ಅವಕಾಶ ತಪ್ಪುವುದು. ಕೋರ್ಟಿನ ವ್ಯವಹಾರಗಳು ಸಿಹಿ-ಕಹಿಯ ಮಿಶ್ರಫಲದಲ್ಲಿ ಇತ್ಯರ್ಥವಾಗಲಿದೆ. ಅನುಕಂಪಕ್ಕೆ ಅರ್ಹರಲ್ಲದವರಿಗೆ ಸಹಾಯ ಹಸ್ತ ಚಾಚಬೇಡಿ.
  • ಕನ್ಯಾ
  • ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮದ ಜೊತೆಯಲ್ಲಿ ಬುದ್ಧಿವಂತಿಕೆಯೂ ಬಹುಮುಖ್ಯವಾಗುವುದೆಂದು ತಿಳಿದುಬರುವುದು. ತಂದೆ ತಾಯಿಯ ಇಷ್ಟಾರ್ಥಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನಹರಿಸಿ.
  • ತುಲಾ
  • ಕಾರ್ಯರಂಗದಲ್ಲಿ ಪರಿವರ್ತನೆ ಕಂಡು ಬರುವುದರಿಂದ ದುಡುಕದೆ ಕೆಲವೊಂದು ವಿಚಾರಗಳ ಬಗ್ಗೆ ಮತ್ತೆ ಮತ್ತೆ ಆಲೋಚನೆ ಮಾಡುವುದು ಉತ್ತಮ. ನಿಮ್ಮ ಪರಿಶ್ರಮದಿಂದ ಆರ್ಥಿಕ ಸ್ಥಿತಿ ಕ್ರಮೇಣವಾಗಿ ಉತ್ತಮಗೊಳ್ಳಲಿದೆ.
  • ವೃಶ್ಚಿಕ
  • ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಅದರ ಸೇವೆಯಿಂದ ಹೆಚ್ಚಿನ ಲಾಭ ಪಡೆಯುವಿರಿ. ಏಕಮುಖಿ ನಿರ್ಧಾರಗಳಿಂದ ಕತ್ತರಿಗೆ ಸಿಲುಕುವ ಸ್ಥಿತಿ ಎದುರಾಗಬಹುದು. ಬ್ಯಾಂಕ್ ಅಧಿಕಾರಿಗಳಿಗೆ ವರ್ಗಾವಣೆಯ ಸಂಭವವಿದೆ.
  • ಧನು
  • ಈ ದಿನ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ನೀವು ಸಂಪೂರ್ಣವಾಗಿ ಅವಲೋಕಿಸಿ ನಿಮ್ಮ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಶುಭ ಕಾರ್ಯಗಳಿಗೆ ಹೆಚ್ಚು ಹಣ ವಿನಿಯೋಗವಾಗುವುದು.
  • ಮಕರ
  • ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣವನ್ನು ಕಾಣುವಿರಿ. ದಿಟ್ಟತನದ ಜೊತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟವಾಗುವುದಿಲ್ಲ.
  • ಕುಂಭ
  • ವ್ಯಾಪಾರ ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತ. ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮತ್ತು ರಿಪೇರಿಯಿಂದ ಆದಾಯ ಹೆಚ್ಚುವುದು. ಮನೆಗೆ ಹೊಸ ವಸ್ತುಗಳನ್ನು ಕೊಳ್ಳುವ ಯೋಗವಿದೆ.
  • ಮೀನ
  • ನಿಮ್ಮ ಒಳ್ಳೆಯ ಸ್ನೇಹಪರ ವರ್ತನೆಯಿಂದ ಅಕ್ಕ ಪಕ್ಕದವರಲ್ಲಿ ಬಾಂಧವ್ಯ ಬೆಳೆಯಲಿದೆ. ಭೂ ಸಂಬಂಧದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸುವುದು ಉತ್ತಮ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.