ADVERTISEMENT

ದಿನ ಭವಿಷ್ಯ: ಸೆ.1 – ಈ ರಾಶಿಯವರು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಿರಿ

ಪ್ರಜಾವಾಣಿ ವಿಶೇಷ
Published 31 ಆಗಸ್ಟ್ 2023, 23:33 IST
Last Updated 31 ಆಗಸ್ಟ್ 2023, 23:33 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ರಾಜಕೀಯ ಧುರೀಣರ ಕೃಪಾಕಟಾಕ್ಷ ಪಡೆದುಕೊಳ್ಳ ಬೇಕಾಗುವುದು. ಮಗನಿಗೆ ಸದಸ್ಯತ್ವದ ಸಂಸ್ಥೆ ವತಿಯಿಂದ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು.
  • ವೃಷಭ
  • ನಿಮ್ಮ ವೃತ್ತಿಕ್ಷೇತ್ರದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು.
  • ಮಿಥುನ
  • ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಸ್ವಂತವಾಗಿ ವ್ಯವಹಾರ ಮಾಡುವವರು, ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು.
  • ಕರ್ಕಾಟಕ
  • ತೆರೆಮರೆಯಲ್ಲಿ ನಡೆಯುತ್ತಿರುವ ನಿಮ್ಮ ವಿರುದ್ಧದ ಸಂಚನ್ನು, ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರ ಮೂಲಕವಾಗಿ ತಿಳಿದುಕೊಳ್ಳುವಿರಿ. ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
  • ಸಿಂಹ
  • ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಎಂದಿಗೂ ಮರೆಯಲಾಗದ ಒಂದು ಕಹಿ ಘಟನೆ ನಡೆಯಬಹುದು. ಕಣ್ಣಿನ ದೃಷ್ಟಿ ದೋಷ ಸರಿಪಡಿಸಿಕೊಳ್ಳಲು ವೈದ್ಯರನ್ನು ಭೇಟಿಮಾಡಿ. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
  • ಕನ್ಯಾ
  • ಸೋದರರೊಡನೆ ಆಥವಾ ದಾಯಾದಿಗಳೊಡನೆ ಇದ್ದ ಕಲಹಗಳು ಈ ದಿನಾಂತ್ಯದಲ್ಲಿ ನಿರ್ಮೂಲವಾಗಿ ಶುಭವಾಗಲಿದೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತಾಗಲಿದೆ. ಅತಿಯಾದ ಆಲಸ್ಯ ನಿಮ್ಮನ್ನು ಕಾಡಲಿದೆ
  • ತುಲಾ
  • ಗುರುವಿನ ಮಾರ್ಗದರ್ಶನದಂತೆ ನಡೆಯುವ ಈ ದಿನದ ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿ ಹೊಂದುವಿರಿ. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನ ಹೆಚ್ಚಿಸಿಕೊಳ್ಳುವಿರಿ.
  • ವೃಶ್ಚಿಕ
  • ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ವಕೀಲೀ ವೃತ್ತಿಯನ್ನು ಅಭ್ಯಾಸಿಸುವವರಿಗೆ ಪಾಪ-ಪ್ರಜ್ಞೆಯು ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
  • ಧನು
  • ಪ್ರಭಾವಿತ ವ್ಯಕ್ತಿಗಳಿಂದ ಸಿಕ್ಕ ಸಹಕಾರ ಈ ಸಮಯದಲ್ಲಿ ಸಹಾಯಕ್ಕೆ ಬರಲಿದೆ. ವಿರೋಧಿಗಳು ರಾಜಿಯಾಗಲು ಬರುವಂಥ ಸನ್ನಿವೇಶಗಳು ನಡೆಯಬಹುದು. ಪತ್ನಿಯ ಆರೋಗ್ಯವು ಸುಧಾರಿಸುವುದು.
  • ಮಕರ
  • ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ ವಿಚಾರ. ಮೇಲಧಿಕಾರಿಗಳಿಂದ ನೀವು ಅಪೇಕ್ಷಿಸುವ ಸಹಕಾರಗಳು ದೊರೆಯಲಿದೆ.
  • ಕುಂಭ
  • ವಿದೇಶಿ ವ್ಯವಹಾರಗಳು ಈ ದಿನ ಕೈಗೂಡಲಿದೆ. ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು. ಸರ್ಕಾರಿ ನೌಕರರಿಗೆ ನಾನಾ ರೀತಿಯಲ್ಲಿ ಅಡ್ಡಿ- ಆತಂಕಗಳು ಕಾಡಬಹುದು.
  • ಮೀನ
  • ಬಹಳ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿಯು ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕುವಲ್ಲಿ ವ್ಯತ್ಯಾಸಗಳಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.