ADVERTISEMENT

ದಿನ ಭವಿಷ್ಯ: ಈ ರಾಶಿಯ ಸ್ವಂತ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಜೂನ್ 2024, 0:19 IST
Last Updated 13 ಜೂನ್ 2024, 0:19 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಮಕ್ಕಳ ವಿಚಾರವಾಗಿ ಭಯದ ಭೀತಿ ತೋರಿಬಂದೀತು. ಸ್ವಂತ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಲಾಭ. ಫಲವನ್ನು ನಿರೀಕ್ಷಿಸಬೇಡಿ.
  • ವೃಷಭ
  • ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಅಗತ್ಯ ಚರ್ಚೆ ನಡೆಸಿ. ನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ಬಹುಜನರ ಒಡನಾಟದಿಂದ ವಿಶ್ವಾಸ, ಪ್ರೀತಿ ಪಡೆಯುವಂತಾಗುವುದು.
  • ಮಿಥುನ
  • ಬಂಧುಗಳ ಮೂಲಕ ಹೆಚ್ಚಿನ ಸಹಕಾರ ದೊರೆತು ವ್ಯಾಪಾರದಲ್ಲಿ ಅಧಿಕ ಧನಲಾಭ. ವಿದ್ಯಾರ್ಥಿಗಳಿಗೆ ಸ್ವಪ್ರಯತ್ನದ ಪರಿಶ್ರಮಕ್ಕೆ ತಕ್ಕಂಥ ಪ್ರತಿಫಲ ದೊರೆಯುತ್ತದೆ.
  • ಕರ್ಕಾಟಕ
  • ನಿಮ್ಮೊಳಗಿನ ಹಲವಾರು ವರ್ಷಗಳ ದುಃಖ ಹೊರಬರಲಿದೆ. ಅದು ಅಚ್ಚರಿಯನ್ನು ಉಂಟು ಮಾಡಬಹುದು. ಮಕ್ಕಳ ಮೇಲಿನ ಅತಿ ಮೋಹವು ಅವರ ಶ್ರೇಯೋಭಿವೃದ್ದಿಗೆ ತೊಡಕನ್ನು ಉಂಟುಮಾಡುವ ಸಾಧ್ಯತೆ ಇದೆ.
  • ಸಿಂಹ
  • ಸದಾಕಾಲ ಹಿತವನ್ನು ಬಯಸುವ ಕುಟುಂಬ ಸದಸ್ಯರನ್ನು ಹೊಂದಿರುವುದರಿಂದ ಮಾನಸಿಕ ಸ್ಥೈರ್ಯ ಸದೃಢವಾಗುವುದು. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ.
  • ಕನ್ಯಾ
  • ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ. ಸಹಿಯನ್ನು ನಕಲು ಪಡಿಸುವವರಿದ್ದಾರೆ. ಎಚ್ಚರವಾಗಿರಿ.
  • ತುಲಾ
  • ಜೀವನದ ನಡೆ-ನುಡಿಗಳು ಕಿರಿಯರ ಜೀವನಕ್ಕೆ ಮಾರ್ಗದರ್ಶನದಂತಾಗಿ ಸಹಕಾರಿಯಾಗುವುದು. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ.
  • ವೃಶ್ಚಿಕ
  • ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬವನ್ನು ಮಾಡದಿರಿ. ಪ್ರಯಾಣಕ್ಕೆ ಹೆಚ್ಚು ಧನ ವ್ಯಯ ಆಗುವುದು. ಗೃಹ ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆಗಳಿವೆ.
  • ಧನು
  • ಗ್ರಾಮ ಪಂಚಾಯ್ತಿಯಂಥ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚಿನ ಕಾರ್ಯಭಾರ ಹೊರಬೇಕಾಗುವುದು. ಉತ್ತಮ ಗುರುವಿನ ಪ್ರಾಪ್ತಿಯಿಂದಾಗಿ ನಿಮ್ಮ ಮನಸ್ಸಿನ ಆಧ್ಯಾತ್ಮಿಕವಾದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.
  • ಮಕರ
  • ಗುಪ್ತ ವಿಷಯಗಳನ್ನು ಕಂಡುಕೊಳ್ಳಲಿಕ್ಕಾಗಿ ಕಪಟವಾದ ಸ್ನೇಹವನ್ನು ಮಾಡುವವರು ಇರುತ್ತಾರೆ. ಮೊದಲು ಕೊಟ್ಟ ಮಾತಿನಂತೆಯೆ ನಡೆದುಕೊಳ್ಳಲು ಹರಸಹಾಸವನ್ನು ಪಡುವಂತಾಗಬಹುದು.
  • ಕುಂಭ
  • ಕಳೆದು ಹೋದಂಥ ವಸ್ತುವನ್ನು ಸಮಾಧಾನದ ಶೋಧನದಿಂದಾಗಿ ಪಡೆದುಕೊಳ್ಳುವಿರಿ. ಮಾತುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುವುದು. ವೃತ್ತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದುಡುಕಬೇಡಿ.
  • ಮೀನ
  • ಮೌಖಿಕವಾಗಿ ಬೆಳೆದ ಮಾತಿನಲ್ಲಿ ನಿಮ್ಮ ತರ್ಕಬದ್ಧವಾದ ಉತ್ತರಗಳಿಗೆ ಎಲ್ಲರೂ ಮಾರುಹೋಗುವರು. ಮಕ್ಕಳ ಆಟೋಪಚಾರವನ್ನು ಕಂಡು ಹರ್ಷಗೊಳ್ಳುವಿರಿ. ವ್ಯಾವಹಾರಿಕವಾದ ಕಲ್ಪನೆಗಳು ಗರಿಗೆದರುವುವು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.