ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಮೇಲಾಧಿಕಾರಿಗಳು ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜೂನ್ 2024, 23:42 IST
Last Updated 15 ಜೂನ್ 2024, 23:42 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿಮ್ಮ ಆತ್ಮ ವಿಶ್ವಾಸವನ್ನು ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಗಮನಹರಿಸಿ. ನಿಮ್ಮ ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ. ವ್ಯಾಪಾರದಲ್ಲಿ ಮೋಸ ಹೋಗದೆ ಬುದ್ಧಿವಂತಿಕೆ ತೋರಿ.
  • ವೃಷಭ
  • ಅಡುಗೆ ಕೆಲಸ ಮಾಡುವವರಿಗೆ ಈ ದಿನ ಹೆಚ್ಚಿನ ಕೆಲಸ, ಬೇಡಿಕೆ ಹಾಗೂ ಲಾಭವಿರುವುದು. ಕುಟುಂಬದ ಸದಸ್ಯರ ಮಾತುಗಳನ್ನು ತಾಳ್ಮೆಯಿಂದ ಕೇಳಿರಿ. ಮಂದಿರದ ಭೇಟಿ ಹಾಗೂ ದೇವರ ದರ್ಶನವನ್ನು ಮಾಡುವಿರಿ.
  • ಮಿಥುನ
  • ವಿವಾಹ ವಯಸ್ಕ ಮಗಳಿಗೆ ಅನುರೂಪ ವರ ದೊರೆತು ನೆಮ್ಮದಿ ಕಂಡು ಬರುವುದು. ನಿಮ್ಮ ಮನೋಭಿಲಾಷೆಯನ್ನು ಸಿದ್ಧಿಸಿಕೊಳ್ಳಲಿಕ್ಕಾಗಿ ಇತರರಿಗೆ ಮಾರಕವಾಗುವ ಮಾರ್ಗವನ್ನು ಆರಿಸಿಕೊಳ್ಳಬೇಡಿ.
  • ಕರ್ಕಾಟಕ
  • ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರಿಗಳು ವ್ಯಾಪಾರ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿ. ನೀವು ಅಪೇಕ್ಷೆಪಟ್ಟಿದ್ದ ಹೊಸ ಉದ್ಯೋಗವನ್ನು ಸಂಪಾದಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮೂಲಕ ಯಶಸ್ಸು ಗಳಿಸುವಿರಿ.
  • ಸಿಂಹ
  • ನಿಮ್ಮ ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಕುಟುಂಬ ನಿರ್ವಹಣೆಗೆ ಒಡಹುಟ್ಟಿದವರಿಂದ ಕೊಡುಗೆ ಅಪಾರವಾಗಿರಲಿದೆ. ಆರೋಗ್ಯದ ಮೇಲೆ ವಿಶೇಷ ಗಮನವಿಡಿ.
  • ಕನ್ಯಾ
  • ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಚಂಚಲ ಮನಸ್ಸು ಅಡ್ಡಿಮಾಡುವುದು. ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು. ಹವ್ಯಾಸಗಳಲ್ಲಿ ತೊಡಗುವುದಕ್ಕೆ ಸಮಯ ಸಿಗುವುದು.
  • ತುಲಾ
  • ಮೇಲಾಧಿಕಾರಿಗಳು ಹಾಗೂ ಹಿರಿಯರು ಕೆಲಸಗಳಲ್ಲಿ ನಿಮಗೆ ಸಹಕಾರ ನೀಡುತ್ತಾರೆ. ಮೇಲಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ಇಚ್ಛೆಗೆ ಬಿಡುವರು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
  • ವೃಶ್ಚಿಕ
  • ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು. ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
  • ಧನು
  • ಬಾಲ್ಯದಲ್ಲಿ ಕಲಿತ ಅಥವಾ ತಿಳಿದುಕೊಂಡಿದ್ದ ಕೆಲ ಇತರೆ ವಿಷಯಗಳು ವೃತ್ತಿಪರವಾಗಿ ಇಂದು ನಿಮಗೆ ಉಪಯೋಗಕ್ಕೆ ಬರಲಿದೆ. ಬಂಧುಗಳು ಮತ್ತು ಸ್ನೇಹಿತರಿಂದ ಮಾರ್ಗದರ್ಶನಕ್ಕೇನು ಕೊರತೆ ಇರದು.
  • ಮಕರ
  • ದಾಂಪತ್ಯದಲ್ಲಿ ಅನ್ಯೋನ್ಯತೆ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಯಾಗಿರುತ್ತದೆ. ವ್ಯವಹಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ. ತಂದೆ– ತಾಯಿಯ ಆರೋಗ್ಯದಲ್ಲಿ ಸಣ್ಣ-ಪುಟ್ಟ ಬದಲಾವಣೆಯಾಗಲಿದೆ.
  • ಕುಂಭ
  • ರುಚಿ ಭೋಜನದ ಹೆಸರಿನಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರವನ್ನು ಸೇವಿಸದಿರಿ. ಇಂದು ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ಮಕ್ಕಳ ಆರೋಗ್ಯದ ಕಡೆ ಗಮನ ಹರಸಿ.
  • ಮೀನ
  • ನೀವು ಗಳಿಸಿದ ಸಂಪಾದನೆಯಲ್ಲಿ ತೃಪ್ತಿ ಹೊಂದುವುದು ಅತ್ಯಂತ ಮುಖ್ಯವಾದ ವಿಚಾರವಾಗಿರುತ್ತದೆ. ಕರಕುಶಲ ವಸ್ತುಗಳ ತಯಾರಕರು ತಮ್ಮ ಉತ್ತಮವಾದ ಕೆಲಸಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.