ದಿನ ಭವಿಷ್ಯ | ಸೆಪ್ಟೆಂಬರ್ 20: ಈ ರಾಶಿಯವರ ಸ್ವತ್ತು ವಿವಾದಗಳಲ್ಲಿ ಜಯ ಸಿಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಸೆಪ್ಟೆಂಬರ್ 2024, 23:11 IST
Last Updated 19 ಸೆಪ್ಟೆಂಬರ್ 2024, 23:11 IST
ಮೇಷ
ವಿದೇಶದಲ್ಲಿ ಶಿಕ್ಷಣ ಪಡೆಯಲು ಪ್ರಯತ್ನಿಸಿದರೆ ಅವಕಾಶಗಳು ಪ್ರಾಪ್ತಿಯಾಗಲಿವೆ. ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವ ಮನಸ್ಸಾಗಲಿದೆ. ಕೃಷಿ ಕ್ಷೇತ್ರದವರಿಗೆ ಕೆಲಸ ಅಧಿಕವಾಗಿರುವುದು.
ವೃಷಭ
ಕಷ್ಟದ ದಿನಗಳಲ್ಲಿ ಸಹಕರಿಸಿದವರೊಂದಿಗೆ ನಮ್ರತೆಯಿಂದ, ವಿನಯದಿಂದ ಇರುವುದನ್ನು ಮರೆಯಬೇಡಿ. ಕಲಾವಿದರು ಸಿಕ್ಕ ಅವಕಾಶವನ್ನು ತಿರಸ್ಕರಿಸಬೇಡಿ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಲಿದೆ.
ಮಿಥುನ
ನಿಮ್ಮ ಆಶ್ವಾಸನೀಯ ವರ್ತನೆಯು ಅನುಯಾಯಿಗಳಿಗೆ ಸಂತಸ ತರಲಿದೆ. ಹೋಮ-ಹವನಾದಿ ಧಾರ್ಮಿಕ ಕೆಲಸದಲ್ಲಿ ಪಾಲ್ಗೊಳ್ಳುವ ಸದವಕಾಶ ಸಿಗಲಿದೆ. ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ.
ಕರ್ಕಾಟಕ
ಮಹಿಳೆಯರಿಗೆ ಗೌರವ ಹೆಚ್ಚಲಿದ್ದು ರಾಜಕೀಯ ಲಾಭ ಸಿಗಲಿದೆ. ನಿಮ್ಮ ವರ್ಚಸ್ಸಿನ ಪ್ರಭಾವದಿಂದ ನೂತನ ಅವಕಾಶಗಳು ದೊರೆಯಲಿವೆ. ಧ್ಯಾನ ಪ್ರವಚನ ಕೇಳುವುದರತ್ತ ಮನಸ್ಸು ಹರಿಯಲಿದೆ.
ಸಿಂಹ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರ ಜತೆ ಚರ್ಚಿಸಬೇಕಾದ ಸಂದರ್ಭ ಬರಲಿದೆ. ಪ್ರವಾಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಗೃಹ ತಾಪತ್ರಯಗಳಿಂದ ಮುಕ್ತರಾಗಿ ನಿಶ್ಚಿಂತೆಯಾಗುತ್ತದೆ.
ಕನ್ಯಾ
ಲಾರಿ, ಟ್ಯಾಂಕರ್‌ನಂತಹ ಭಾರಿ ವಾಹನಗಳ ಮಾಲೀಕರಿಗೆ ಇಂದು ಒಳ್ಳೆಯ ದಿನ. ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ತುಲಾ
ಧನಾಗಮನಕ್ಕೆ ಹಲವು ದಾರಿ ಇದ್ದರೂ, ಸರಿಯಾದ ದಾರಿ ಆರಿಸಿಕೊಳ್ಳು ವುದು ನಿಮ್ಮ ವಿವೇಚನೆಗೆ ಬಿಟ್ಟದ್ದು. ಕಬ್ಬಿಣ, ಸಿಮೆಂಟ್ ವ್ಯಾಪಾರಿಗಳಿಗೆ ಸಾಧಾರಣ ಲಾಭವಿರುವುದು. ಸ್ವತ್ತು ವಿವಾದಗಳಲ್ಲಿ ಜಯ ಸಿಗಲಿದೆ.
ವೃಶ್ಚಿಕ
ಚಿತ್ರಕಲೆ ಕುರಿತಾದ ಆಸಕ್ತಿಯಿಂದ ಹೆಚ್ಚಿನ ಕಲಿಕೆಗೆ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ಬಟ್ಟೆ ಉದ್ಯಮದವರಿಗೆ ಈ ದಿನ ಹೆಚ್ಚಿನ ಲಾಭವಾಗಲಿದೆ.
ಧನು
ತೆರೆಮರೆಯಲ್ಲಿ ನಡೆಸಿದ ಪ್ರಯತ್ನಗಳಿಂದ ಉನ್ನತ ಅಧಿಕಾರ ಪಡೆಯುವಿರಿ. ಮಕ್ಕಳ ವೃತ್ತಿಯ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳುವಿರಿ. ಕೆಲಸದ ಬಗ್ಗೆ ವಿಮರ್ಶಿಸಿ ನಂತರದಲ್ಲಿ ಕಾರ್ಯರೂಪಕ್ಕೆ ತನ್ನಿರಿ.
ಮಕರ
ಗೃಹ ನಿರ್ಮಾಣದಂತಹ ಕೆಲಸಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸುವಿರಿ. ಪುಸ್ತಕ ಪ್ರಕಾಶಕರಿಗೆ ನೂತನ ಕಾರ್ಯಭಾರ ಒದಗಲಿದೆ. ಹೊಸ ಮನೆಯನ್ನು ಭೋಗ್ಯಕ್ಕೆ ಕೊಡಲು ಮಾತುಕತೆ ನಡೆಯುವುದು.
ಕುಂಭ
ಸಹೋದರ ಸಹೋದರಿಯರ ಬಾಂಧವ್ಯ ಗಟ್ಟಿಯಾಗುವಂತಹ ಘಟನೆ ನೆಡೆಯಲಿದೆ. ಮೊಬೈಲ್ ಫೋನ್‌ಗಳ ಮಾರಾಟಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಹೆಚ್ಚಿನ ಲಾಭವಾಗಲಿದೆ.
ಮೀನ
ಬಿಡುವಿಲ್ಲದ ಕೆಲಸದಿಂದ ಬಳಲಿದ ನಿಮಗೆ ವಿಶ್ರಾಂತಿಗೆ ಸಮಯ ಸಿಗಲಿದೆ. ಕುಟುಂಬದಲ್ಲಿ ಹಂತ ಹಂತವಾಗಿ ಸುಖ ಶಾಂತಿ ಹೆಚ್ಚಲಿದೆ. ಸಹೋದರಿಯರೊಂದಿಗಿನ ಬಾಂಧವ್ಯವನ್ನು ಉತ್ತಮ ಪಡಿಸಿಕೊಳ್ಳಿ.