ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ರಾಜಕೀಯ ಸ್ಥಾನ ಸಿಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಸೆಪ್ಟೆಂಬರ್ 2024, 23:02 IST
Last Updated 21 ಸೆಪ್ಟೆಂಬರ್ 2024, 23:02 IST
ಮೇಷ
ಸ್ವಂತ ಉದ್ಯೋಗ ಮಾಡುವವರಿಗೆ ವರಮಾನದಲ್ಲಿ ಉತ್ತಮಸುಧಾರಣೆಯಾಗುವುದು. ದಂತ ವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ. ಧರ್ಮ ಕಾರ್ಯಗಳಲ್ಲಿ ಭಾಗಿಯಾಗಿ.
ವೃಷಭ
ಸತ್ಯನಾರಾಯಣ ಸ್ವಾಮಿಯ ಸೇವೆಯನ್ನು ಮಾಡುವುದರಿಂದ ನಿಮ್ಮ ಜಟಿಲ ಸಮಸ್ಯೆಗಳು ಕೂಡ ಸೌಹಾರ್ದಯುತವಾಗಿ ಬಗೆಹರಿಯಲಿದೆ. ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸಬೇಕಾಗಬಹುದು.
ಮಿಥುನ
ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ವ್ಯವಹಾರದಲ್ಲಿ ಸೋದರನನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸುವಿರಿ. ನಿಶ್ಚಿತ ರೂಪದಲ್ಲಿ ಕೆಲಸಗಳು ಜರುಗಲಿವೆ.
ಕರ್ಕಾಟಕ
ಹಿರಿಯರಿಂದ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿದೆ. ಯಾರ ನೆರವೂ ಇಲ್ಲದೆ ನಿಮ್ಮೆಲ್ಲ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವುದು ಉತ್ತಮ. ಯೋಗಾಭ್ಯಾಸ ಮನಸ್ಸಿಗೆ ಹಿತವೆನಿಸುವುದು.
ಸಿಂಹ
ವ್ಯಾಪಾರ, ವ್ಯವಹಾರಗಳಲ್ಲಿ ತೀವ್ರವಾದ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ. ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಅಗತ್ಯ.
ಕನ್ಯಾ
ದಿನದ ಪ್ರಾರಂಭದಲ್ಲಿ ಕೆಲಸಗಳು ಕುಂಠಿತವಾಗಿ ಸಾಗಿದರೂ ಉತ್ತರಾರ್ಧದ ವೇಳೆಗೆ ತೃಪ್ತಿ ಉಂಟಾಗಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು.
ತುಲಾ
ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ. ಕೆಲಸದ ಸರಿ ತಪ್ಪುಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿ. ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ.
ವೃಶ್ಚಿಕ
ಕೆಲವು ಸವಾಲುಗಳನ್ನು ಎದುರಿಸುವ ಸಂದರ್ಭಗಳು ಎದುರಾಗಬಹುದು ಮತ್ತು ಅದರಲ್ಲಿ ಸಮ್ಮಿಶ್ರ ಫಲಿತಾಂಶ
ಪಡೆಯುವಂತಾಗಲಿದೆ. ಮನೆ ದೇವರಿಗೆ ಪೂಜೆ ಸಲ್ಲಿಸುವಿರಿ.
ಧನು
ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಂಡಲ್ಲಿ ಖಂಡಿತವಾಗಿ ಯಶಸ್ವಿಯಾಗುವಿರಿ. ಅನಿರೀಕ್ಷಿತವಾಗಿ ರಾಜಕೀಯದಲ್ಲಿ ಸ್ಥಾನ ದೊರೆತು ರಾಜಕೀಯ ರಂಗದ ಉದ್ದ ಅಗಲದ ಅರಿವಾಗುತ್ತದೆ.
ಮಕರ
ಬಿಡುವಿಲ್ಲದ ಕೆಲಸ ಮತ್ತು ಮೇಲಾಧಿಕಾರಿಗಳ ಹೆಚ್ಚಿನ ಒತ್ತಡಗಳಿಂದಾಗಿ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಲು ಸಮಯವಿಲ್ಲದಂತಾಗುವುದು.
ಕುಂಭ
ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದುಕೊಡುವುದು. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಆರಂಭಗೊಳ್ಳಲಿದೆ. ಕಬ್ಬಿಣ ಅಥವಾ ಗ್ಲಾಸ್‌ನಿಂದ ಗಾಯಗಳಾಗಬಹುದು.
ಮೀನ
ಸಿನಿಮಾ ನಟ,ನಟಿಯರಿಗೆ ಉತ್ತಮ ಅವಕಾಶದ ಶುಭ ಸುದ್ಧಿ ಸಿಗುವುದು. ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ. ತಂದೆಯವರ ಮಾತಿನಿಂದ ಅತೃಪ್ತಿಯ ವಾತಾವರಣ ಮೂಡಿ ಬರಲಿದೆ.