ADVERTISEMENT

ದಿನಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರದಲ್ಲಿ ನಷ್ಟವಾಗಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
   
ಮೇಷ
  • ಆಕಸ್ಮಿಕವಾಗಿ ಹಳೆಯ ಗೆಳೆಯನ ಭೇಟಿಯಾಗಲಿದೆ. ಆತಂಕವಿಲ್ಲದೆ ಕೆಲಸ ಕಾರ್ಯಗಳು ಸಾಗುವುದು. ಆಹಾರ ಸೇವನೆಯ ವಿಷಯದಲ್ಲಿ ಆದಷ್ಟು ಜಾಗೃತರಾಗಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
  • ವೃಷಭ
  • ನಿಮ್ಮ ಚಟುವಟಿಕೆಯಲ್ಲಿ ಟೀಕೆಗಳಿಗೆ ಕಿವಿಯೊಡ್ಡಿದರೆ ಯಾವುದೇ ಉಪಯೋಗವಾಗುವುದಿಲ್ಲ, ಕೇವಲ ಸಮಯ ಮಾತ್ರಾ ಹಾಳಾಗುವುದು ಎಂದು ತಿಳಿದಿರಲಿ. ವಾಹನಗಳಿಂದ ಆದಾಯವನ್ನು ನಿರೀಕ್ಷಿಸಬಹುದು.
  • ಮಿಥುನ
  • ಸ್ನೇಹಿತರು ನಿಮ್ಮ ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ಜವಳಿ ವ್ಯಾಪಾರಿಗಳು ವಿಶೇಷ ರಿಯಾಯಿತಿಯಂತಹ ಮಾರಾಟಗಳಿಂದ ಹೆಚ್ಚಿನ ಲಾಭವು ಉಂಟಾಗುವುದು.
  • ಕರ್ಕಾಟಕ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ರಾಸಾಯನಿಕ ಶಾಸ್ತ್ರದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಬೇಕಾಗುವುದು. ನಿಮ್ಮ ಆಲಸ್ಯದಿಂದಾಗಿ ಅಧಿಕಾರ ಹೋಗುವ ಪರಿಸ್ಥಿತಿ ಉಂಟಾಗುವುದು. ಎಚ್ಚರದಿಂದಿರಿ.
  • ಸಿಂಹ
  • ಹಿಂದೆ ಯಾವುದೋ ದಿನ ಮಾಡಿದ ಕೆಲಸದ ಫಲವಾಗಿ ಈ ದಿನ ಅದರ ಲಾಭ ಬಂದು ಕೈ ಸೇರಿದ ಸಂತಸ ಆಗಲಿದೆ. ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆಯಲಿದೆ. ಭಿನ್ನಾಭಿಪ್ರಾಯಗಳು ದೂರಾಗುವವು.
  • ಕನ್ಯಾ
  • ಭೂಸಂಬಂಧಿ ಅದರಲ್ಲೂ ಕೃಷಿ ಭೂಮಿ ವ್ಯವಹಾರದಲ್ಲಿರುವವರಿಗೆ ಧನಲಾಭವಾಗುವುದು. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಮಸ್ಯೆಗೆ ಸಿಕ್ಕಿಕೊಳ್ಳಬೇಡಿ.
  • ತುಲಾ
  • ವಿಶೇಷವಾದ ತಿಂಡಿ-ತಿನಿಸುಗಳು ಪ್ರಾಪ್ತಿಯಾಗಿ ಸಂತೋಷ ಉಂಟಾಗುತ್ತದೆ. ಹಳೆಯ ಜವಾಬ್ದಾರಿ ಬದ್ಧತೆ ಇವುಗಳಿಂದ ಈ ದಿನ ಮುಕ್ತಿಯನ್ನು ಹೊಂದಬಹುದು. ಮಹಾಗಣಪತಿಯನ್ನು ಆರಾಧಿಸಿ.
  • ವೃಶ್ಚಿಕ
  • ಈ ದಿನದ ಅಂತ್ಯದಲ್ಲಿ ನಾಳೆಯ ದಿನದ ಕೆಲಸಗಳ ಬಗ್ಗೆ ಗಮನಹರಿಸಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದರಿಂದ ನಾಳೆ ಸುಲಭವಾಗುತ್ತದೆ. ನಿಮ್ಮ ಈ ದಿನದ ಕೆಲಸದಿಂದ ನಿಮ್ಮ ಬದುಕಿಗೆ ಅರ್ಥ ಸಿಗುವಂತಾಗಲಿದೆ.
  • ಧನು
  • ಚರ್ಚೆ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿರಿ. ಸಾಂಸಾರಿಕ ವಿಚಾರಕ್ಕೆ ಸಂಬಂಧಿಸದಂತೆ ಈ ದಿನ ಆತುರದಿಂದ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಕೆಂಪು ಶುಭ ತರುವುದು.
  • ಮಕರ
  • ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ. ನಿಮ್ಮ ಸ್ವಾರ್ಥದ ಬದುಕಿಗಾಗಿ ಇನ್ನೊಬ್ಬರ ಭಾವನೆಗಳನ್ನು ಒಡೆಯಬೇಡಿ. ಸ್ನೇಹಿತರೊಂದಿಗೆ ಅಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ.
  • ಕುಂಭ
  • ಅನಿವಾರ್ಯದಿಂದ ಅಥವಾ ಬೇಜವಾಬ್ದಾರಿಯಿಂದ ಅವಶ್ಯಕತೆಗಿಂತ ಹೆಚ್ಚಾಗಿ ಹಣ ವ್ಯಯವಾಗುವುದು. ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಿ.
  • ಮೀನ
  • ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಹೃದಯ ಸಂಬಂಧವಾದ ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಷೇರು ವ್ಯವಹಾರದಲ್ಲಿ ನಷ್ಟವಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.