ADVERTISEMENT

ದಿನ ಭವಿಷ್ಯ: ಈ ರಾಶಿಯ ಔಷಧ ವ್ಯಾಪಾರಿಗಳಿಗೆ ಲಾಭದ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಮಾರ್ಚ್ 2024, 22:32 IST
Last Updated 24 ಮಾರ್ಚ್ 2024, 22:32 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಔಷಧ ವ್ಯಾಪಾರಿಗಳಿಗೆ ಲಾಭದ ದಿನ. ಆಟಿಕೆಗಳ ಅಥವಾ ಕ್ರೀಡಾ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಆಂಜನೇಯನ ಅನುಗ್ರಹ ಪಡೆದಲ್ಲಿ ಮಾನಸಿಕ ಧೈರ್ಯ ಹೆಚ್ಚಾಗುವುದು.
  • ವೃಷಭ
  • ಮಕ್ಕಳ ವಿಷಯದಲ್ಲಿ ಕಾಳಜಿಯನ್ನು ತೋರಿದಲ್ಲಿ ಭವಿಷ್ಯ ಉತ್ತಮಗೊಳ್ಳಲಿದೆ. ಕ್ರೀಡಾಸಕ್ತರಿಗೆ ಉತ್ತಮ ಸಮಯ ಮತ್ತು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಮಯ ಕೂಡಿಬರಲಿದೆ.
  • ಮಿಥುನ
  • ಆಪ್ತರ ಸಲಹೆ ತೆಗೆದುಕೊಂಡು ಮಾಡಿದ ಕೆಲಸ ಸಮಸ್ಯೆ ಇಲ್ಲದೆ ಮುಕ್ತಾಯ ಹಂತ ತಲುಪುವುದು. ತಾಂತ್ರಿಕ ಕ್ಷೇತ್ರದಲ್ಲಿ ನೂತನ ಉದ್ಯೋಗ ಸಂಪಾದನೆಗೆ ಹೊರಟಂಥ ವ್ಯಕ್ತಿಗಳಿಗೆ ಈ ದಿನ ಅಭಿವೃದ್ಧಿದಾಯಕ ಅನಿಸಲಿದೆ.
  • ಕರ್ಕಾಟಕ
  • ಜಮೀನು ಖರೀದಿ ಅಥವಾ ಜಮೀನಿನ ಗುತ್ತಿಗೆಯಂಥ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸುವುದು ಅಗತ್ಯವಾಗುತ್ತದೆ.
  • ಸಿಂಹ
  • ನೀರಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳುವ ಹಂತಕ್ಕೆ ಬರ ಲಿದೆ. ಸವಾಲೊಡ್ಡುವ ಸನ್ನಿವೇಶಗಳು ಸಹೋದರಿ ಅಥವಾ ಭಾವನ ಬಳಿಯಲ್ಲಿ ಎದುರಾಗಬಹುದು. ಹೈನು ಉತ್ಪನ್ನಗಳಿಂದ ಆದಾಯ ಪಡೆಯುವಿರಿ.
  • ಕನ್ಯಾ
  • ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಸಹೋದರರಿಗೋಸ್ಕರವಾಗಿ ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಋಣಾತ್ಮಕವಾಗಿ ಚಿಂತಿಸದಿರಿ.
  • ತುಲಾ
  • ಬತ್ತದ ಉತ್ಸಾಹ, ಹುಮ್ಮಸ್ಸಿನಿಂದ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕೃಷಿ ಕೆಲಸದಲ್ಲಿನ ಆಯುಧಗಳನ್ನು ಬಳಸುವಾಗ ಅತ್ಯಂತ ಜಾಗ್ರತೆಯಿಂದ ಕೆಲಸ ಮಾಡಿ.
  • ವೃಶ್ಚಿಕ
  • ತಾಯಿಯ ಅಥವಾ ಬಾಳ ಸಂಗಾತಿಯ ಮಾತನ್ನು ಮೀರದಿರುವುದು ಲೇಸು. ಉದ್ಯೋಗದಲ್ಲಿ ಎದುರಾಗುವ ಆಯ್ಕೆಯಂಥ ಸಮಸ್ಯೆಗೆ ಈ ದಿನ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟಕರವೆನಿಸುವುದು.
  • ಧನು
  • ವ್ಯವಹಾರಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೃಧು ಧೋರಣೆಯಿಂದ ಕೆಲವು ಮಂದಿ ನಿಮ್ಮ ವಿರುದ್ಧ ಧ್ವನಿ ಎತ್ತುವ ಸಾಧ್ಯತೆ ಇದೆ. ಮನೆಯಲ್ಲಿ ಗುರು-ಹಿರಿಯರ ಶುಭ ಆಶೀರ್ವಾದದಿಂದ ಮಂಗಳ ಕೆಲಸ ನಡೆಯಲಿದೆ.
  • ಮಕರ
  • ಹೊಸ ಮನೆಯನ್ನು ಕೊಳ್ಳುವ ಬಗ್ಗೆ ದಲ್ಲಾಳಿಗಳೊಂದಿಗೆ ಮಾತುಕತೆ ನಡೆಸಬಹುದು. ಕೌಟುಂಬಿಕವಾಗಿ ಕೆಟ್ಟುಹೋದಂತಹ ಸಂಬಂಧಗಳು ಇಂದು ಮತ್ತೆ ಮರಳಿ ಸರಿಯಾಗಬಹುದು. ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
  • ಕುಂಭ
  • ಅಬಕಾರಿ ಮತ್ತು ಕಂದಾಯ ಇಲಾಖೆಯವರಿಗೆ ಉದ್ಯೋಗದಲ್ಲಿ ಹೆಸರು, ಕೀರ್ತಿಗಳನ್ನು ಕಾಪಾಡಿಕೊಳ್ಳಲು ಕಷ್ಟವಾಗಲಿದೆ. ವಿದ್ಯುತ್‌ ಸ್ಥಾವರದ ಕಾರ್ಮಿಕರು ವಿದ್ಯುತ್ ಶಕ್ತಿಯ ಬಳಕೆ ಮಾಡುವಾಗ ಗಮನವಿರಲಿ.
  • ಮೀನ
  • ಯಶಸ್ಸಿಗೆ ಕಾರಣರಾದವರನ್ನು ಮತ್ತು ಹೆಗಲು ಕೊಟ್ಟವರನ್ನು ಕಾರ್ಯ ಮುಗಿಯುವವರೆಗೆ ಜತೆಯಲ್ಲಿಯೆ ಇರಿಸಿಕೊಳ್ಳಿ. ಅಧಿಕವಾದ ಪ್ರಯತ್ನದಿಂದ ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.