ADVERTISEMENT

ದಿನ ಭವಿಷ್ಯ: ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಜನವರಿ 2026, 0:08 IST
Last Updated 31 ಜನವರಿ 2026, 0:08 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅನಿವಾರ್ಯ ಕಾರಣದಿಂದ ಬಹು ಮುಖ್ಯ ಕೆಲಸದಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ. ಅನಾರೋಗ್ಯದಿಂದ ವೈದ್ಯರ ಭೇಟಿ ಮಾಡುವಿರಿ.
  • ವೃಷಭ
  • ಸಹೋದರರ ಜೊತೆ ತಾಳ್ಮೆ ಕಳೆದುಕೊಂಡು ಕಲಹಗಳನ್ನು ಮಾಡುವಿರಿ. ಮನಸ್ತಾಪಗಳು ಕ್ರಮೇಣ ಬಗೆಹರಿದು ನೆಮ್ಮದಿ ಕಾಣುವಿರಿ. ಮನೆಯಲ್ಲಿ ಪತ್ನಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
  • ಮಿಥುನ
  • ಹಳೆಯ ಕೆಲಸವನ್ನೆ ಹೊಸ ಹಾಗೂ ಗ್ರಾಹಕರನ್ನು ಸೆಳೆಯುವಂಥ ನಿಯಮಗಳನ್ನು ಹಾಕಿಕೊಂಡು ಪುನಃ ಪ್ರಾರಂಭ ಮಾಡುವಿರಿ. ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಕೋಪದ ಮೇಲೆ ನಿಯಂತ್ರಣವಿರಲಿ.
  • ಕರ್ಕಾಟಕ
  • ಪ್ರತಿ ವೈಯಕ್ತಿಕ ಕೆಲಸಗಳಿಗೂ ಅನಾರೋಗ್ಯದ ಕಾರಣ ಬೇರೆಯವರ ನೆರವು ಬೇಕಾಗುತ್ತದೆ. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದರೂ ಅದೃಷ್ಟವು ಕೈ ಕೊಡಲಿದೆ.
  • ಸಿಂಹ
  • ಜೀವನವು ಮೇಲ್ನೋಟಕ್ಕೆ ಎಲ್ಲರ ಕಣ್ಣಿಗೂ ಉತ್ತಮವಾಗಿ ಕಂಡುಬಂದರೂ ಒಳಗಿನ ಸತ್ಯಾಂಶ ತೋರುವುದು. ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕೆ ಸಾಹಸ ಪಡಬೇಕಾಗುವುದು.
  • ಕನ್ಯಾ
  • ಅತಿ ಹಣಕಾಸಿನ ವ್ಯಾಮೋಹದಿಂದ ಪಶ್ಚಾತ್ತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಬಂದ ಹೊಸ ಜವಾಬ್ದಾರಿಯಲ್ಲಿ ಜನಾನುರಾಗ ಹೆಚ್ಚಿಸಿಕೊಳ್ಳುವುದು ಅನಿವಾರ್ಯ.
  • ತುಲಾ
  • ನಿಮ್ಮ ಕ್ಷೇತ್ರದಲ್ಲಿ ಶ್ರೇಯಸ್ಸನ್ನು ಪಡೆಯಲು ಉಪಯೋಗಿಸಿದ ತಂತ್ರಗಳು ಈ ಬಾರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ದೂರದ ಪ್ರಯಾಣದ ಮೊದಲು ಅಲ್ಲಿಯ ಸ್ಥಿತಿಗತಿಗಳನ್ನು ಬಲ್ಲವರಿಂದ ವಿಚಾರಿಸಿ.
  • ವೃಶ್ಚಿಕ
  • ಜರುಗಲಿರುವ ಸಂಗತಿ ಗಾಢ ಪರಿಣಾಮ ಬೀರಿ ವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಹೊಸ ಸ್ಥಳದಲ್ಲಿ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ.
  • ಧನು
  • ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಾಗುತ್ತಿರುವವರು ಯಾವುದೇ ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಕೆಲಸಕ್ಕೆ ಅನಿರೀಕ್ಷಿತ ಬದಲಾವಣೆಗಳು ಬರಬಹುದು. ವಾತದ ಬಾಧೆ ಉಪಶಮನವಾಗುವುದು.
  • ಮಕರ
  • ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಮುಖ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಕೆಲಸದಲ್ಲಿ ವಿಘ್ನ ಇರಲಿದೆ. ಲಕ್ಷ್ಮಿ ವೆಂಕಟೇಶ್ವರನನ್ನು ಭಕ್ತಿಯಿಂದ ಆರಾಧಿಸಿ. ಸಾಮಾಜಿಕವಾಗಿ ಗೌರವವು ಇಮ್ಮಡಿಗೊಳ್ಳಲಿದೆ.
  • ಕುಂಭ
  • ಪತಿ–ಪತ್ನಿಯರ ನಡುವೆ ಪರಸ್ಪರ ಸಮರ್ಪಣಾ ಭಾವವಿದ್ದಲ್ಲಿ ಉತ್ತಮವಾಗಿ ಇರುತ್ತದೆ. ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘಕಾಲೀನ ಬದಲಾವಣೆಗಳಾಗಬಹುದು. ಅಧಿಕ ಕೊಬ್ಬಿನ ಅಂಶದ ಆಹಾರವನ್ನು ತ್ಯಜಿಸಿ.
  • ಮೀನ
  • ದುಡಿಮೆ ಎಷ್ಟು ಮುಖ್ಯವೋ ಅಷ್ಟೇ ವಿಶ್ರಾಂತಿಯೂ ಮುಖ್ಯ ಎಂಬುದನ್ನು ಕಂಡುಕೊಳ್ಳಿರಿ. ನೇರ ನಡೆ-ನುಡಿಯು ವ್ಯವಹಾರವನ್ನು ಕುಂಠಿತಗೊಳಿಸಬಹುದು. ಕ್ರಿಮಿಕೀಟಗಳಿಂದ ತೊಂದರೆಗೆ ಒಳಗಾಗುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.