ADVERTISEMENT

ದಿನ ಭವಿಷ್ಯ: ಈ ರಾಶಿಯ ಲೋಹದ ವಸ್ತುಗಳ ವ್ಯಾಪಾರಸ್ಥರು ದುಪ್ಪಟ್ಟು ಲಾಭ ಪಡೆಯಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಆಗಸ್ಟ್ 2024, 0:11 IST
Last Updated 13 ಆಗಸ್ಟ್ 2024, 0:11 IST
   
ಮೇಷ
  • ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿಗಳ ಮಾತಿನಂತೆ ಧಾರ್ಮಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರೊಂದಿಗೆ ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಚರ್ಚೆ ನಡೆಯಲಿದೆ.
  • ವೃಷಭ
  • ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂಥ ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಈ ದಿನ ಇತ್ಯರ್ಥಗೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆಯ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ.
  • ಮಿಥುನ
  • ವ್ಯಾಪಾರ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿನ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಶೀತಬಾಧೆಯಿಂದ ಮುಕ್ತರಾಗಲು ಗಿಡಮೂಲಿಕೆಯ ಕಷಾಯ ಸೇವಿಸಿ. ಮನೆ ಖರೀದಿಸುವ ವಿಷಯ ಇತ್ಯರ್ಥವಾಗುವುದು.
  • ಕರ್ಕಾಟಕ
  • ಸಾಲದ ಹಣ ಹಿಂದುರಿಗಿ ಕೈಸೇರುವುದರಿಂದ ಮನೆಯ ರಿಪೇರಿ ಕೆಲಸಗಳಿಗೆ ಹಣ ಖರ್ಚು ಮಾಡುವಿರಿ. ಜಲಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
  • ಸಿಂಹ
  • ವ್ಯಾಪಾರ ವ್ಯವಹಾರಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಹಿಡಿತಕ್ಕೆ ಬರಲಿದೆ. ಸೋಮಾರಿತನ ಶ್ರೇಯಸ್ಸಿಗೆ ಅಡ್ಡಿ ಬರದಂತೆ ಗಮನಹರಿಸಿ. ನೆರೆಯವರ ಸಹಾಯದಿಂದ ಮಗಳ ಮದುವೆ ನಿಶ್ಚಯವಾಗಲಿದೆ.
  • ಕನ್ಯಾ
  • ಸಂಗತಿಗಳನ್ನು ಹಗುರವಾಗಿ ಪರಿಗಣಿಸುವ ಸ್ವಭಾವ ಬದಲಿಸಿಕೊಳ್ಳಿ. ಬಂಧು ಮಿತ್ರರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ.ಹರಿತದ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗುವುದು.
  • ತುಲಾ
  • ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ ಅಥವಾ ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ದುರಹಂಕಾರಿ ಎನ್ನುವ ಪಟ್ಟ ಸಿಗುವ ಲಕ್ಷಣಗಳಿವೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುವಿರಿ.
  • ವೃಶ್ಚಿಕ
  • ಸಹಾಯ ಮಾಡುವ ವಿಚಾರದಲ್ಲಿ ಮುಂದಾಲೋಚನೆಯಿಲ್ಲದೆ ಮುಂದುವರಿಯುವುದನ್ನು ಬದಲು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಒಮ್ಮೊಮ್ಮೆ ಕಾಡುವ ಸಮಸ್ಯಾ ಸರಪಳಿ ಪರಿಹಾರವಾಗುವುದು.
  • ಧನು
  • ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮವಾಗುತ್ತದೆ. ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಸಂಭವವಿದೆ.
  • ಮಕರ
  • ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶು ಸಂಗೋಪನೆ ಯಿಂದ ಲಾಭ ಇರುವುದು. ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧ ಮುಂದುವರಿಯಲಿದೆ. ಸಮಾರಂಭಕ್ಕೆ ಆಹ್ವಾನ ಬರುವುದು.
  • ಕುಂಭ
  • ಆಯ್ಕೆ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ಇಂದಿನ ದಿನ ವಿಫಲರಾಗುವ ಸನ್ನಿವೇಶಗಳಿರುವುದು. ಇಂದು ಶರೀರದಲ್ಲಿನ ನವ ಚೈತನ್ಯವು ಕಾರ್ಯಪ್ರವೃತ್ತಿಯನ್ನು ಹೊಂದುವಂತೆ ಮಾಡುವುದು.
  • ಮೀನ
  • ಲೋಹದ ವಸ್ತುಗಳನ್ನು ವ್ಯಾಪಾರ ಮಾಡುವವರು ದುಪ್ಪಟ್ಟು ಲಾಭ ಪಡೆಯಬಹುದು. ಅನವಶ್ಯಕವಾಗಿ ಋಣಾತ್ಮಕ ಚಿಂತನೆಗಳನ್ನು ಮಾಡದಿರಿ. ಧಾರ್ಮಿಕ ಚಿಂತನೆಯನ್ನು ಮುಂದುವರಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.