ADVERTISEMENT

ದಿನ ಭವಿಷ್ಯ: ಹೋಟೆಲ್ ಉದ್ಯಮಿಗಳಿಗೆ ಈ ದಿನ ಲಾಭದಾಯಕವಾಗಿರುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಮಾರ್ಚ್ 2024, 4:34 IST
Last Updated 13 ಮಾರ್ಚ್ 2024, 4:34 IST
   
ಮೇಷ
  • ಬಹಳ ದಿನಗಳಿಂದ ನಿಮ್ಮ ಮೇಲಧಿಕಾರಿಗಳು ಬಯಸಿದ ಹೆಚ್ಚಿನ ಜವಾಬ್ದಾರಿ ಉತ್ತಮವಾಗಿ ನಿಭಾಯಿಸಿದ ಕಾರಣ ಅತಿಯಾಗಿ ಮೆಚ್ಚುವರು. ಸಹಚರರಿಗೆ ನಂಬಿಕೆ ವಿಶ್ವಾಸ ಅಧಿಕವಾಗುವುದು.
  • ವೃಷಭ
  • ನೀರಿಗೆ ಸಂಬಂಧಿಸಿದ ಸರ್ಕಾರದ ಬೃಹತ್ ಯೋಜನೆಗಳ ಗುತ್ತಿಗೆ ಕೆಲಸಗಳನ್ನು ಪಾಲುದಾರಿಕೆಯಲ್ಲಿ ಪಡೆಯುವುದಕ್ಕೆ ಪ್ರಯತ್ನ ಮಾಡಿ. ದೇವರು ನಿಮ್ಮ ಕೈ ಬಿಡಲಿಲ್ಲವೆಂಬ ವಿಚಾರ ಅನುಭವಕ್ಕೆ ಬರಲಿದೆ.
  • ಮಿಥುನ
  • ಸಮಸ್ಯೆಗೆ ಮೂಲ ಏನೆಂಬುದನ್ನು ಕಂಡುಕೊಂಡರೆ ಪರಿಸ್ಥಿತಿ ಸುಧಾರಿ ಸುವುದು. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಭವಿಷ್ಯದ ದೃಷ್ಟಿ ಇರಲಿ. ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ಇರಲಿದೆ.
  • ಕರ್ಕಾಟಕ
  • ಸ್ನೇಹಿತರ ಹಾಗೂ ಕುಟುಂಬದವರ ಸಲಹೆ ಮೇರೆಗೆ ಉತ್ತಮ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ನಿಧಾನಗತಿಯಲ್ಲಿ ತಂದೆಯವರ ಆರೋಗ್ಯ ಉತ್ತಮವಾಗಲಿದೆ. ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ.
  • ಸಿಂಹ
  • ಆಲೋಚನೆಯ ಹೊಸ ಕಾರ್ಯಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ ಸ್ವಲ್ಪ ಸಮಯ ಕಳೆದ ಹಾಗೇ ಎಲ್ಲವೂ ನಿಮ್ಮ ಆಸೆಗೆ ತಕ್ಕಂತೆ ನಡೆಯಲಿದೆ. ಯಾವುದೆ ರೀತಿಯ ಅಡೆತಡೆ, ತೊಂದರೆ ಇರಲಾರದು.
  • ಕನ್ಯಾ
  • ದಿನಸಿ ವರ್ತಕರಿಗೆ ಉತ್ತಮ ಲಾಭ ಪ್ರಾಪ್ತಿಯಾಗಲಿದೆ. ಸಂಜೆಯ ಸಮಯದಲ್ಲಿ ಆಲಸ್ಯವಾಗಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಯಗಳು ಕಾಣಲಿದೆ.
  • ತುಲಾ
  • ನೂತನ ವಸ್ತ್ರ ಖರೀದಿಯ ಯೋಗವಿದೆ. ಆರೋಗ್ಯದ ವಿಚಾರವಾಗಿ ದೇಹ ಪ್ರಕೃತಿಗೆ ಅನುಗುಣವಾಗಿ ವೈದ್ಯರು ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಆಚರಿಸಿ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.
  • ವೃಶ್ಚಿಕ
  • ಪಾಲುದಾರಿಕೆ ವಿಚಾರವಾಗಿ ನೀಡುವ ಆಶ್ವಾಸನೆ ಸಹೋದರ ವರ್ಗದಲ್ಲಿ ಬಹಳ ಸಂತಸ ಉಂಟಾಗುವುದು. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿಯನ್ನು ಕೊಡಲಿದ್ದಾರೆ. ಗಣಪತಿಯನ್ನು ಆರಾಧಿಸಿ.
  • ಧನು
  • ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು ಅಥವಾ ಸಂಶೋಧನಾ ವೃತ್ತಿಯಲ್ಲಿರುವವರಿಗೆ ಈ ದಿನ ಅಧ್ಯಯನಕ್ಕೆ ಸುಸಮಯ. ಸುಳ್ಳು ನುಡಿಯುವ ಅಭ್ಯಾಸವನ್ನು ಕಡಿಮೆಮಾಡಿಕೊಳ್ಳಿರಿ.
  • ಮಕರ
  • ಎರಡು ದೋಣಿಗೆ ಕಾಲು ಹಾಕಿರುವ ನಿಮ್ಮ ಜೀವನ ಶೈಲಿಯಿಂದ ಸಮಸ್ಯೆಗಳು ಎದುರಾಗಬಹುದು. ಹೋಟೆಲ್ ಉದ್ಯಮಿಗಳಿಗೆ ಮತ್ತು ಅಡುಗೆ ವೃತ್ತಿಯವರಿಗೆ ಈ ದಿನ ಲಾಭದಾಯಕವಾಗಿರುತ್ತದೆ.
  • ಕುಂಭ
  • ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ಬಿರುಕು ಬಿಟ್ಟಿರುವ ಸಂಬಂಧಗಳನ್ನು ಸರಿಪಡಿಸುವ ಆಲೋಚನೆಯ ಮಾರ್ಗಕ್ಕೆ ಅಡೆತಡೆ ಉಂಟಾಗಬಹುದು. ಪ್ರಯಾಣ ಯೋಗವಿದೆ.
  • ಮೀನ
  • ಬಿಡುವಿಲ್ಲದ ವೃತ್ತಿ ಜೀವನವನ್ನು ಒಂದೆರೆಡು ದಿನಗಳ ಮಟ್ಟಿಗೆ ವಿಶ್ರಾಂತಿ ಜೀವನವಾಗಿ ಬದಲಾಯಿಸಿಕೊಳ್ಳುವುದರಿಂದ ನೆಮ್ಮದಿ ಮೂಡುತ್ತದೆ. ನೆನಪಿನಶಕ್ತಿ ವೃದ್ಧಿಗೆ ಶ್ರೀ ಶಾರದೆಯಲ್ಲಿ ಪ್ರಾರ್ಥಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.