ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಮಾರ್ಚ್ 2024, 23:39 IST
Last Updated 14 ಮಾರ್ಚ್ 2024, 23:39 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ದೊರೆಯುವ ಅವಕಾಶಗಳಿವೆ. ವ್ಯಕ್ತಿಯ ಮನಃ ಪರಿವರ್ತನೆ ಮಾಡುವ ವಿಚಾರದಲ್ಲಿ ಸಫಲ ರಾಗುತ್ತೀರಿ. ಹಣಕಾಸಿನ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳುವಿರಿ.
  • ವೃಷಭ
  • ಗಣ್ಯ ವ್ಯಕ್ತಿಗಳ ವೈಯಕ್ತಿಕ ಭೇಟಿಯಿಂದ ಸಹಚರರಲ್ಲಿ ಭಿನ್ನಾಭಿಪ್ರಾಯ. ಮೊಮ್ಮಕ್ಕಳ ಆಗಮನದಿಂದಾಗಿ ದೇಹಾಲಸ್ಯ ದೂರ. ನಿಮ್ಮ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ರಕ್ಷಣಾ ದೇವತೆಯನ್ನು ಆರಾಧಿಸಿ.
  • ಮಿಥುನ
  • ಮನೆಯಲ್ಲಿ ವಿವಾಹ, ಗೃಹಪ್ರವೇಶದಂತಹ ಶುಭಕಾರ್ಯಗಳ ಪ್ರಸ್ತಾಪ ನೆರವೇರುವುದು. ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ, ಧ್ಯಾನದಿಂದ ಮಾನಸಿಕವಾಗಿ ಸದೃಢರಾಗುವಿರಿ. ಅನಿರೀಕ್ಷಿತ ಧನಾಗಮನದಿಂದ ಸಂತಸ.
  • ಕರ್ಕಾಟಕ
  • ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದ್ದು ಮದುವೆಯ ಮಾತುಕತೆಗಳನ್ನು ನಡೆಸುವರು. ಕಾರ್ಯಕ್ಷೇತ್ರದಲ್ಲಿನ ನಷ್ಟ ಪ್ರಮಾಣ ಅಧಿಕವಾಗಿದ್ದರೂ, ಹೊಸ ಜವಾಬ್ದಾರಿಗಳು ನಿಮ್ಮನ್ನು ಅರಸಿ ಬರಲಿವೆ.
  • ಸಿಂಹ
  • ಈ ದಿನ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿರುವವ ರಿಗೆ ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗುವುದು. ಪ್ರೇಮಿಗಳಿಗೆ ಜೀವನವನ್ನು ನಿರ್ಣಯಿಸಲು ಉತ್ತಮ ಅವಕಾಶಗಳು ಈ ದಿನ ಬರಲಿವೆ.
  • ಕನ್ಯಾ
  • ಹಲವು ದಿನಗಳಿಂದ ಜೀವನದಲ್ಲಿ ಬೇಸರಗೊಂಡಿರುವ ನೀವು ಈ ದಿನದ ಅಂತ್ಯದಲ್ಲಿ ಮಾನಸಿಕವಾಗಿ ಸದೃಢರಾಗುವಿರಿ. ಉಳಿತಾಯದ ಹಣವನ್ನು ಮನೆ ನಿರ್ಮಾಣ ಕಾರ್ಯಗಳಿಗೆ ಬಳಸುವಿರಿ.
  • ತುಲಾ
  • ರಾಜಕೀಯ ವ್ಯವಹಾರಗಳ ಪ್ರಬಲಾಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಈ ದಿನದ ಆಗು ಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗವಾಗುವುದು.
  • ವೃಶ್ಚಿಕ
  • ಮನಸ್ಸು ಸಿರಿತನದ ಜೀವನವನ್ನು ಇಷ್ಟ ಪಡಲಿದೆ. ಆದರೆ ಬುದ್ಧಿ ಸ್ಥಿಮಿತದಲ್ಲಿರಲಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಇಂದು ಸೂಕ್ತವಾದ ಕಾಲವಾಗಿರುತ್ತದೆ.
  • ಧನು
  • ಕಫ ವ್ಯಕ್ತಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಾಂಸಾರಿಕವಾಗಿ ಇದ್ದಂತಹ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತು, ಮನಸ್ಸಿನ ಶಾಂತಿಯನ್ನು ಪಡೆಯುವಿರಿ.
  • ಮಕರ
  • ಪ್ರೀತಿ ಪಾತ್ರರೊಂದಿಗೆ ಇಂದು ಭವಿಷ್ಯದ ಯೋಜನೆಗಳ ಹಾಗೂ ನಿಮ್ಮ ಜೀವನದ ಗುರಿ ತಲುಪುವ ಬಗ್ಗೆ ಗಂಭೀರ ಚರ್ಚೆ ನಡೆಸುವಿರಿ ಹಾಗೂ ಪರಸ್ಪರ ಮನಸ್ಸು ಬಿಚ್ಚಿ ಮಾತನಾಡುವಿರಿ. ಹಾಡುಗಾರರಿಗೆ ಒಳ್ಳೆಯ ಅವಕಾಶ ಇದೆ.
  • ಕುಂಭ
  • ವಿದೇಶ ವ್ಯಾಸಂಗದ ಅಭಿಲಾಷಿಗಳಿಗೆ ಶುಭ ಸುದ್ದಿ ಕೇಳುವ ದಿನ ಇದಾಗಿದೆ. ಕ್ರೀಡಾಪಟುಗಳಿಗೆ ಪುರಸ್ಕಾರ, ಗೌರವಾಭಿನಂದನೆಗಳು ಪ್ರಾಪ್ತಿಯಾಗಲಿವೆ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಹೆಚ್ಚು ಆದಾಯ ಗಳಿಕೆ.
  • ಮೀನ
  • ಕೇಟರಿಂಗ್ ಸೇವೆ ಮಾಡುವವರಿಗೆ ಅಧಿಕ ಲಾಭದ ಜೊತೆ ಸಂಪನ್ಮೂಲ ವ್ಯಕ್ತಿಗಳ ಬಳಕೆಯಾಗುವುದು. ಮಗನಿಂದ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು. ಶ್ರೀ ರಾಮನಾಮ ಜಪವನ್ನು ಮಾಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.