ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಜೂನ್ 2024, 0:27 IST
Last Updated 4 ಜೂನ್ 2024, 0:27 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ನೇಹಿತನ ಸಹಾಯದಿಂದಾಗಿ ಹಲವು ವಿಚಾರಗಳಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಹಲವು ನಿರೀಕ್ಷೆಗಳೊಂದಿಗೆ ಬಂಧುಗಳ ಮನೆಗೆ ಪ್ರಯಾಣ ಬೆಳೆಸುವಿರಿ. ಪ್ರಯಾಣದಲ್ಲಿ ಜಾಗ್ರತರಾಗಿರಿ.
  • ವೃಷಭ
  • ಇಷ್ಟು ದಿನದವರೆಗೂ ತೋರಲಾಗದ ನಿಜವಾದ ಸಾಮರ್ಥ್ಯವನ್ನು ಉತ್ತಮ ಅಭ್ಯಾಸದ ಮೂಲಕ ಪ್ರದರ್ಶಿಸುವಿರಿ. ಊರಿನ ಅಥವಾ ಪರ ಊರಿನ ಉತ್ಸವದಲ್ಲಿ ಭಾಗವಹಿಸಿ ಸಂತುಷ್ಟರಾಗುವಿರಿ.
  • ಮಿಥುನ
  • ಕುದುರೆ ಸಾಕುವುದರ ಜತೆಗೆ ಸವಾರಿಯನ್ನು ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಗೋವುಗಳ ಪಾಲನೆಯಿಂದ ಪುಣ್ಯವು ಪ್ರಾಪ್ತಿಯಾಗುವುದು. ಗಾರ್ಮೆಂಟ್ಸ್ ನೌಕರರಿಗೆ ಹೆಚ್ಚಿನ ಕೆಲಸವಿರುವುದು.
  • ಕರ್ಕಾಟಕ
  • ಯಾವ ಒತ್ತಡಗಳಿಗೂ, ಯಾರ ದಬ್ಬಾಳಿಕೆಗೂ ಒಳಗಾಗದೆ ಸ್ವತಂತ್ರರಾಗಿರಲು ಬಯಸುವಿರಾದರೂ ಸಾಧ್ಯವಾಗುವುದಿಲ್ಲ. ಅಪೇಕ್ಷಿಸಿದ ಬೆಂಬಲ ದೊರೆಯಲಿದೆ. ಇತರರನ್ನು ತಿರಸ್ಕಾರದಿಂದ ನೋಡದಿರಿ.
  • ಸಿಂಹ
  • ವೃತ್ತಿಯಲ್ಲಿದ್ದ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ತೃಪ್ತಿ, ಸಂತೋಷ ಉಂಟಾಗಲಿದೆ. ಬಿಟ್ಟುಹೋದ ಸಂಬಂಧಗಳನ್ನು ಮತ್ತೆ ಬೆಳೆಸುವ ಬಗ್ಗೆ ನಿಮ್ಮ ಕುಟುಂಬದವರೊಂದಿಗೆ ಚರ್ಚಿಸುವಿರಿ.
  • ಕನ್ಯಾ
  • ಅನಗತ್ಯ ವಿಷಯಗಳಿಂದ ದೂರವಿರುವುದು ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಲು ಅನುಕೂಲವಾಗುವುದು. ಹರಿತ ವಸ್ತುಗಳಿಂದ ಸಣ್ಣ-ಪುಟ್ಟ ಗಾಯ ಆಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಷ್ಠರಾಗಿರಿ
  • ತುಲಾ
  • ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಸುತ್ತ ಮುತ್ತಲಿನ ವಾತಾವರಣವೂ ಧನಾತ್ಮಕವಾಗಿ ಬದಲಾವಣೆಯಾಗುವುದು. ರೈತರು ಉತ್ತಮ ತಳಿಯ ಬೆಳೆಯಿಂದ ಹೆಚ್ಚಿನ ಸಂತೋಷ ಹೊಂದುವರು.
  • ವೃಶ್ಚಿಕ
  • ಬಹಳ ದಿನಗಳಿಂದ ನಿರೀಕ್ಷಿಸಿದ ರೀತಿಯಲ್ಲಿ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರುವುದು ಸಂತೋಷ ಪಡುವ ವಿಚಾರ. ಹಿಂದಿನ ಕೆಲಸ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
  • ಧನು
  • ಉದ್ಯೋಗದ ವಿಚಾರದ ಬಗ್ಗೆ ಹೆಚ್ಚಿನ ತರಬೇತಿ ಪಡೆದುಕೊಳ್ಳುವುದರಿಂದ ಬಡ್ತಿಯ ಬಗ್ಗೆ ಯೋಚಿಸಬಹುದು. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿದೆ. ರಂಗೋಲಿ ಕಲಾವಿದರ ಬೇಡಿಕೆ, ಸ್ಥಾನಮಾನ ಹೆಚ್ಚುತ್ತದೆ.
  • ಮಕರ
  • ಮನೆಯಲ್ಲಿ ನಿಮ್ಮ ಮಾತಿನಿಂದ ಉಂಟಾದ ಬಿಗು ವಾತಾವರಣ ದಿನದ ಅಂತ್ಯದ ಸಮಯದಲ್ಲಿ ತಿಳಿಯಾಗಿ ಮನಸ್ಸಿಗೆ ಸಮಾಧಾನ ಉಂಟಾಗುವುದು. ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ
  • ಕುಂಭ
  • ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ನಿಮಗೆ ಪ್ರತಿ ಬಾರಿಯ ಶುಭಕಾರ್ಯಗಳು ತಪ್ಪಿ ಹೋಗುವುದನ್ನು ಸಹಿಸಲಾರದೆ ದುಃಖಿತರಾಗುತ್ತೀರಿ. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ.
  • ಮೀನ
  • ಕಾರ್ಯ ವೈಖರಿಯನ್ನು ನೋಡಿದ ಕೆಲವರು ಮತ್ಸರ ಪಡುವಂತಾಗುತ್ತದೆ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕೆಲಸದ ಅಧಿಕ ಒತ್ತಡದಿಂದ ಬೆನ್ನು ನೋವು ಕಾಡಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.