ದಿನ ಭವಿಷ್ಯ: ಮನೆಯವರೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಚರ್ಚೆ ನಡೆಸುವಿರಿ
ಸೋಮವಾರ, 29 ಡಿಸೆಂಬರ್, 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಡಿಸೆಂಬರ್ 2025, 0:29 IST
Last Updated 29 ಡಿಸೆಂಬರ್ 2025, 0:29 IST
ದಿನ ಭವಿಷ್ಯ
ಮೇಷ
ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ಲಾಭವಾಗಲಿದೆ. ಹಿತ-ಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಕೆಲಸಗಳು ಕಷ್ಟವಾದರೂ ಸ್ವತಃ ನೀವೇ ಸೋಲನ್ನು ಘೋಷಿಸಿಕೊಳ್ಳಬೇಡಿ. ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಆಗಬಹುದು.
ವೃಷಭ
ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಮಾಡಿದ ತಪ್ಪಿನಿಂದ ನಷ್ಟ ಅನುಭವಿಸಬೇಕಾಗುವುದು. ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳನ್ನು ನಿವಾರಿಸಿಕೊಳ್ಳಬೇಕಾಗುವುದು.
ಮಿಥುನ
ಕೋರ್ಟು ಕಚೇರಿಯ ಕೆಲಸ ಕಾರ್ಯಗಳು ಪರದಾಟವಿಲ್ಲದೆ ಅನುಕೂಲಕ್ಕೆ ತಕ್ಕಂತೆ ನಡೆಯುತ್ತವೆ. ಸಹೋದರನ ಬಹಳ ದಿನದ ನಂತರದ ಆಗಮನ ಸಂತೋಷಕ್ಕೆ ಕಾರಣವಾಗುತ್ತದೆ.
ಕರ್ಕಾಟಕ
ವೃತ್ತಿಯಲ್ಲಿನ ಸಣ್ಣ-ಪುಟ್ಟ ಬದಲಾವಣೆ ಧನಲಾಭ ತಂದು ಕೊಡುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಹಾಗೂ ಅನುಭವಸ್ಥರ ಸಲಹೆ ಲಭ್ಯವಾಗಲಿದೆ. ವೃತ್ತಿಯಲ್ಲಿ ಅಭಿವೃದ್ಧಿ ಸಮಾಧಾನವನ್ನು ನೀಡಲಿದೆ.
ಸಿಂಹ
ದಿನಸಿ ವ್ಯಾಪಾರಿಗಳು ವ್ಯಾಪಾರವನ್ನು ವಿಸ್ತರಣೆ ಮಾಡುವುದಕ್ಕಿಂತ ಗುಣಮಟ್ಟ ಕಾಪಾಡುವ ಬಗ್ಗೆ ಗಮನಹರಿಸಿ. ಹಿಂದಿನಿಂದ ಬಂದಂಥ ಆಸ್ತಿಯ ಸಮಸ್ಯೆಗಳು ಮಾತುಕತೆಯ ಮೂಲಕ ಇತ್ಯರ್ಥವಾಗುವುದು.
ಕನ್ಯಾ
ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗಲಿವೆ. ಕಂಪನಿಯ ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸಬಹುದು.
ತುಲಾ
ನಿಮ್ಮೊಡನೆ ಹರಿದು ಬರುವಂಥ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿ. ಬಹಳ ದಿನಗಳ ನಂತರ ಮನಸ್ಸಿಗೆ ಹಿತ ಅನುಭವ ಸಿಗಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಪೂರಕವಾದ ಸನ್ನಿವೇಶ ಕಂಡುಬರುತ್ತದೆ.
ವೃಶ್ಚಿಕ
ನಿರೀಕ್ಷಿಸುತ್ತಿದ್ದಂಥ ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನುಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಮನೆಯವರೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಚರ್ಚೆ ನಡೆಸುವಿರಿ.
ಧನು
ಷೇರುಗಳ ಮೇಲೆ ಹೆಚ್ಚಿನ ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ತೈಲ ಲೇಪನ, ಅಭ್ಯಂಗದಂಥ ವಿಧಿಯ ಆಚರಣೆಯಿಂದ ಆರೋಗ್ಯ ಉತ್ತಮಗೊಳ್ಳುವುದು.
ಮಕರ
ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವ ಬದಲು, ಬೆಲೆಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿರಿ. ದುಡುಕು ಬುದ್ಧಿ ಕಡಿಮೆಯಾಗುವಂಥ ಲಕ್ಷಣಗಳಿವೆ. ನ್ಯಾಯಾಂಗ ಇಲಾಖೆಯವರಿಗೆ ಸೌಲಭ್ಯ ಸಿಗುತ್ತದೆ.
ಕುಂಭ
ಅರ್ಚಕ, ವೈದಿಕ ವೃತ್ತಿಯವರಿಗೆ ಕಾರ್ಯದೊತ್ತಡ ಅಧಿಕ ಮಟ್ಟದಲ್ಲಿದ್ದರೂ, ಸರಿಸಮಾನ ಗೌರವಧನಕ್ಕೆ ಕೊರತೆ ಕಾಣುವುದಿಲ್ಲ. ಬದುಕನ್ನು ಅರ್ಥಪೂರ್ಣವಾಗಿ ನಡೆಸುವ ಬಗ್ಗೆ ಯೋಚನೆಗಳಿರಲಿ.
ಮೀನ
ಮಿತ್ರರ ಜೊತೆಗೂಡಿ ಮಾಡುವ ಸಾಹಸ ಕಾರ್ಯಗಳಿಂದ ಜಯ ಸಿಗುವುದು. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಗೌರವ ಆದರಗಳು ಸಿಗಲಿವೆ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯದ ಅವಕಾಶವಿದೆ.