ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜನವರಿ 2026, 1:01 IST
Last Updated 15 ಜನವರಿ 2026, 1:01 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಅನ್ಯರ ಸಹಾಯ, ಸಹಕಾರವೆಂಬುವುದು ಈ ದಿನ ಇಲ್ಲವಾಗುವುದು.
  • ವೃಷಭ
  • ಅವಶ್ಯಕತೆಗಿಂತ ಹೆಚ್ಚಾಗಿ ಹಣ ವ್ಯಯವಾಗುವುದು. ಮದುವೆ ವಿಷಯದಲ್ಲಿ ಮನೆಯವರಿಂದ ಒತ್ತಡ ಬರಲಿದೆ. ಕುಟುಂಬದಲ್ಲಿ ನಿಮ್ಮ ನಿಲುವುಗಳೇನು ಎಂಬುದನ್ನು ಸ್ಪಷ್ಟ ಪಡಿಸಬೇಕಾಗುವುದು
  • ಮಿಥುನ
  • ವಿವೇಚನೆಯಿಂದ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಬಾಕಿ ಉಳಿದ ಕೆಲಸ ಪೂರ್ತಿಗೊಳಿಸಲು  ಪ್ರಶಸ್ತವಾಗಿದೆ. ಧ್ಯಾನ ಹಾಗೂ ಯೋಗದ ಅಭ್ಯಾಸದಿಂದ ಅನುಕೂಲ
  • ಕರ್ಕಾಟಕ
  • ಹಿತಶತ್ರುಗಳ ವಿದ್ರೋಹ ಅನುಭವಕ್ಕೆ ಬಂದೀತು.  ಹೆದರುವ ಅವಶ್ಯಕತೆ ಇಲ್ಲ. ಹಾಲಿನ ಉತ್ಪನ್ನಗಳ ಮಾರಾಟಗಾರರಿಗೆ ಲಾಭ ಬರುವುದು. ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು.
  • ಸಿಂಹ
  • ವಿರೋಧಿಗಳ ಅಥವಾ ಸಂಬಂಧಿಕರ ಟೀಕೆಗಳಿಗೆ ಕಿವಿಯೊಡ್ಡಿದರೆ  ಉಪಯೋಗವಾಗುವುದಿಲ್ಲ, ಕೇವಲ ಸಮಯ ಹಾಳಾಗುವುದು ಎಂದು ತಿಳಿದಿರಲಿ. ಸಾಮಾಜಿಕ ಗಲಭೆಯಿಂದ ದೂರವಿರಿ
  • ಕನ್ಯಾ
  • ಹೊಸ ಮನೆಯ ಅಥವಾ ನಿವೇಶನದ ದಾಖಲೆ ಕೆಲಸಗಳಿಗಾಗಿ  ಓಡಾಟ ನಡೆಸ ಬೇಕಾಗುವುದು. ರಾಜಕೀಯ ರಂಗದಲ್ಲಿ ಬಹಳ ದಿನಗಳ ನಂತರ ಯಶಸ್ಸು ದೊರೆಯಲಿದೆ
  • ತುಲಾ
  • ಸಿಹಿ ತಿಂಡಿ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಇದೆ. ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದರೆ, ಬಯಕೆ ಈಡೇರುವುದು. ಶ್ರೀರಾಮ ನಾಮ ಸ್ಮರಣೆ ಮಾಡಿ.
  • ವೃಶ್ಚಿಕ
  • ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಹಗುರಾಗುವಿರಿ. ಜೀವನಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
  • ಧನು
  • ಹಿರಿಯರಲ್ಲಿ ಮುಖ್ಯವಾದ ವಿಚಾರ ಮಾತನಾಡುವಾಗ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸದೆ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ. ಬಂಧುಗಳ ಆಗಮನ ಸಂತಸ ತರಲಿದೆ.
  • ಮಕರ
  • ಹಳೆಯ ಸ್ನೇಹಿತನೊಬ್ಬನ ಆಕಸ್ಮಿಕ ಭೇಟಿ ಸಂತಸ ತರಲಿದೆ. ಆರೋಗ್ಯ ಸುಧಾರಿಸಿ ಎಂದಿನಂತೆ ಕೆಲಸಕ್ಕೆ ತೆರಳುವಂತಾಗುತ್ತದೆ. ತೊಂದರೆಗಳನ್ನು ಎದುರಿಸುವಾಗ ಧೈರ್ಯಗೆಡದಿರಿ.
  • ಕುಂಭ
  • ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗುವ ಪ್ರಸಂಗ ಬಂದರೂ ಧೈರ್ಯದಿಂದ ಎದುರಿಸಿ. ನಿಮ್ಮ ಕಾರ್ಯದೊತ್ತಡದಲ್ಲಿ  ಮನೆಯ ವಿಚಾರಗಳತ್ತ ಗಮನಹರಿಸುವುದು ಮುಖ್ಯವಾಗುವುದು
  • ಮೀನ
  • ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಬಹುದು.  ನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಧೈರ್ಯವಿರಲಿ.  ಕೆಲಸಗಳು ನಿಧಾನವಾಗಿ ಸಾಗಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.