ತಪ್ಪುಗಳಿಗೆ ಕಾರಣವನ್ನು ಹುಡುಕುವುದು ಹಾಗೂ ಇತರರಿಗೆ ಕಾರಣವನ್ನು ಕೊಡುವುದರಲ್ಲಿ ಹುರುಳಿಲ್ಲ. ಜಯಕ್ಕೆ ಬೇಕಾದ ಮಾರ್ಗವನ್ನು ಹುಡುಕಿ. ಪ್ರವೃತ್ತಿಯಲ್ಲಿ ಆಸಕ್ತಿ ಹೆಚ್ಚುವುದರಿಂದ ಸಮಯ ಸಾಲದು
ವೃಷಭ
ಅಧಿಕಾರಿಗಳ ಮುಖಸ್ತುತಿಯಿಂದ ಕೆಲಸಗಳು ಆಗುತ್ತದೆ ಎಂದು ಭಾವಿಸಿದ್ದರೆ ಯೋಚನೆ ಕೈಬಿಡಿ. ಪರಿಶ್ರಮವೇ ಅಗತ್ಯ. ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.
ಮಿಥುನ
ಉಡುಗೆ ತೊಡುಗೆಗಳ ಮೇಲೆ ಗಮನ ಕೊಡುವುದು ಒಳ್ಳೆಯದು. ಗೌರವವನ್ನು ಹೆಚ್ಚಿಸಲಿದೆ. ದೇಹದಲ್ಲಾಗುವ ಅನಿರೀಕ್ಷಿತ ಬದಲಾವಣೆಗಳು ಆತಂಕಗಳಿಗೆ ಕಾರಣವಾಗುವಂಥ ಸಾಧ್ಯತೆ ಇದೆ.
ಕರ್ಕಾಟಕ
ಮಕ್ಕಳನ್ನು ಅವಲಂಬನೆ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಸಸಾರದ ಮಾತುಗಳನ್ನು ಕೇಳಿ ಮನಸ್ಸಿಗೆ ನೋವಾಗಲಿದೆ. ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಅನಾರೋಗ್ಯ ಎದುರಾಗಬಹುದು.
ಸಿಂಹ
ಪ್ರತಿದಿನವೂ ಭಕ್ತಿಯಿಂದ, ಶ್ರದ್ಧೆಯಿಂದ ದೇವರನ್ನು ಸ್ತುತಿಸುವುದರಿಂದ ಸಮಸ್ಯೆಗಳು ಸರಾಗವಾಗಿ ನಿವಾರಣೆಯಾಗಲಿವೆ. ಸಂತಸ ತರುವ ಸಂಗತಿಗಳಿಗೆ ಕೊರತೆ ಇಲ್ಲ.
ಕನ್ಯಾ
ಸ್ವಾಗತಕಾರರಿಗೆ ಮಾಡುವ ಅತಿಥಿ ಸತ್ಕಾರದ ಮೇಲೆ ಮುಂದಿನ ಆಗುಹೋಗುಗಳು ನಿಂತಿವೆ. ಹೊಸ ವಾತಾವರಣಕ್ಕೆ ಬಂದವರಿಗೆ ಹೊಂದಾಣಿಕೆ ಆದ ಬಗ್ಗೆ ಸಂತೋಷವಾಗಲಿದೆ.
ತುಲಾ
ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಕವಿತೆ–ಕಥೆಗಳನ್ನು ಬರೆಯುವ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯಲಿದೆ. ಮಕ್ಕಳ ಮೇಲೆ ಕಾಳಜಿ ಇರಲಿ.
ವೃಶ್ಚಿಕ
ಉತ್ತರ ಸಿಗದ ನಿಮ್ಮ ಹಲವಾರು ಪ್ರಶ್ನೆಗಳಿಗೆ ಸದ್ಪುರುಷನ ಜತೆಯ ಸಂಭಾಷಣೆಯಿಂದ ಉತ್ತರ ದೊರೆಯಲಿದೆ. ತಾಯಿಗೆ ಕಣ್ಣಿನ ದೃಷ್ಟಿಯ ದೋಷ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ವೈದ್ಯರನ್ನು ಭೇಟಿಮಾಡಿ.
ಧನು
ಚರ್ಮ ಸಂಬಂಧ ಅಲರ್ಜಿಯನ್ನು ಹಲವು ದಿನದಿಂದ ಅನುಭವಿಸುತ್ತಿರುವ ನಿಮಗೆ ಅದರ ತೀವ್ರತೆ ಕಡಿಮೆಯಾದಂತೆ ಆಗುವುದು. ಇಷ್ಟ ಮಿತ್ರರ ಅಥವಾ ಬಂಧುಗಳ ಭೇಟಿಯಿಂದ ಕಳವಳ ಉಂಟಾಗುತ್ತದೆ.
ಮಕರ
ಕುಟುಂಬದಲ್ಲಿನ ನೂತನ ಶಿಶುವಿನ ಜನನ ಕುಟುಂಬದ ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ. ಊಟದ ಸಮಯದಲ್ಲಿ ಯಾರೊಂದಿಗೂ ಮಾತು ಬೆಳೆಸಬೇಡಿ. ಇಷ್ಟದ ಭೋಜನವನ್ನು ಮಾಡುವಿರಿ.
ಕುಂಭ
ತಂದೆ ತಾಯಿಯ ಜೊತೆ ಆಸ್ತಿ ಪಾಲುದಾರಿಕೆಯ ವಿಷಯವಾಗಿ ಮಾತನಾಡುವುದಿದ್ದಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಬರಲು ಬಾಕಿ ಇದ್ದ ಹಳೇ ಸಾಲಗಳು ತೀರಿಸುವ ಬಗ್ಗೆ ಮಾತು ಕೇಳುವಿರಿ.
ಮೀನ
ಮಕ್ಕಳಲ್ಲಿ ವಿದ್ಯೆಯ ಹೊರತಾಗಿ ಅವರಲ್ಲಿರುವ ಇತರ ಆಸಕ್ತಿಕರ ಕ್ಷೇತ್ರಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಆರೋಗ್ಯದ ಬಗೆಗಿನ ಕಾಳಜಿ ಮಾಡಿ. ಪಾರ್ವತಿಯನ್ನು ಭಜಿಸಿ.