ದಿನ ಭವಿಷ್ಯ: ಎಂಜಿನಿಯರಿಂಗ್ ವ್ಯಾಸಂಗ ಮಾಡುವವರಿಗೆ ಉತ್ತೇಜನ ದೊರೆಯುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಅಕ್ಟೋಬರ್ 2024, 23:32 IST
Last Updated 31 ಅಕ್ಟೋಬರ್ 2024, 23:32 IST
ದಿನ ಭವಿಷ್ಯ
ಮೇಷ
ಬಂಧುಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಪಾತ್ರೆ ಮಾರಾಟ ಮಾಡುವವರಿಗೆ, ಅದರಲ್ಲೂ ತಾಮ್ರ, ಹಿತ್ತಾಳೆಯ ದೇವರ ಪೂಜಾ ಪಾತ್ರೆಯ ಮಾರಾಟಗಾರರಿಗೆ ಅಧಿಕ ಲಾಭ.
ವೃಷಭ
ವೈಯಕ್ತಿಕವಾಗಿ ಎಷ್ಟು ಹಣ ಗಳಿಸಬಹುದೆಂದು ಲೆಕ್ಕಾಚಾರ ಹಾಕುವುದಕ್ಕಿಂತ ಬಂಡವಾಳ ಕಾಯ್ದುಕೊಳ್ಳುವುದರತ್ತ ಗಮನ ಹರಿಸಿ. ಎಂಜಿನಿಯರಿಂಗ್ ವ್ಯಾಸಂಗ ಮಾಡುವವರಿಗೆ ಉತ್ತೇಜನ ದೊರೆಯುವುದು.
ಮಿಥುನ
ಸಂಬಂಧದಲ್ಲಿ ವ್ಯವಹಾರ ಮಾಡುವುದರಿಂದ ವ್ಯವಹಾರದಲ್ಲಿಯೂ ಮೋಸ, ಸಂಬಂಧದಲ್ಲಿಯೂ ವ್ಯತ್ಯಾಸಗಳಾಗಬಹುದು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶ ಆಹಾರದ ಕೊರತೆ ಕಾಣುತ್ತದೆ.
ಕರ್ಕಾಟಕ
ಮನೆಯ ಮಂಗಳ ಕಾರ್ಯಗಳಿಗೆ ಅಡ್ಡಿ ಉಂಟುಮಾಡುವ ಪ್ರಯತ್ನವು ನೆರೆಯವರಿಂದ ನಡೆಯಬಹುದು. ದೈಹಿಕವಾಗಿ ಬಲಾಢ್ಯರಾಗಿರುವ ನಿಮಗೆ ಮಾನಸಿಕವಾಗಿ ಬಹಳ ದೊಡ್ಡ ಹೊಡೆತಬೀಳುವ ಸಂಭವವಿದೆ.
ಸಿಂಹ
ನಿಮ್ಮ ಹಾವಾಭಾವ, ಸ್ನೇಹಪರವಾದಂಥ ಸ್ವಭಾವವು ಇತರರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಲಿದೆ. ಉತ್ತಮ ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾಳವಾಗಿ ನೆರೆವೇರುವುದು.
ಕನ್ಯಾ
ಗುರುಗಳು ನೀಡಿದ ಉಪದೇಶದ ವಾಣಿಗಳಿಂದ ಅಥವಾ ಸಮಾಧಾನದ ನುಡಿಯಿಂದ ಇಂದಿನ ಜೀವನದಲ್ಲಿ ನೆಮ್ಮದಿ ದೊರಕುವುದು. ಕಾರ್ಖಾನೆಯಲ್ಲಿ ರಾತ್ರಿ ಪಾಳಿ ಕೆಲಸವನ್ನು ಬದಲಾಯಿಸಿಕೊಳ್ಳುವ ಪ್ರಯತ್ನವನ್ನು ನಡೆಸಬಹುದು.
ತುಲಾ
ವಿವೇಕಯುಕ್ತ ನಡವಳಿಕೆಯು ಪ್ರಯೋಜನಗಳನ್ನು ನೀಡುತ್ತದೆ. ಯತ್ನಿಸಿದ ಕಾರ್ಯಗಳೆಲ್ಲ ಸಿದ್ಧಿಸುವುದರಿಂದ ಸಂತೋಷ ಇರಲಿದೆ. ದುರ್ಘಟನೆಗಳಿಂದ ವಿಚಲಿತರಾಗದೆ ಸಂಯಮದಿಂದ ಕಾರ್ಯ ನಿರ್ವಹಿಸಿ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಸ್ವಲ್ಪ ಹಿನ್ನಡೆ. ವ್ಯಾಪಾರ ವಾಣಿಜ್ಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಲು ಪ್ರಯಾಣ ಬೆಳೆಸುವಿರಿ. ರೇಷ್ಮೆ ಬೆಳಗಾರರಿಗೆ ಲಾಭ ಆಗುತ್ತದೆ.
ಧನು
ಖರೀದಿಯಲ್ಲಿ ಎಚ್ಚರವಿರಲಿ, ಮೋಸ ಹೋಗುವ ಸಂಭವವಿದೆ. ನಿವೃತ್ತಿಯ ಹಣದಲ್ಲಿ ಮಕ್ಕಳ ಹೆಸರಿಗೆ ಮನೆ ಕೊಳ್ಳುವ ಯೋಗ ಅಥವಾ ಭೂಮಿ ಖರೀದಿಯ ಯೋಗವಿದೆ. ಆರ್ಥಿಕ ಕಷ್ಟ ನಿವಾರಣೆಯಾಗಲಿದೆ.
ಮಕರ
ಯಾತ್ರಿಗಳಿಗೆ ಪ್ರಯಾಣದಲ್ಲಿ ಸುಖ, ನಿರ್ಭಯದ ವಾತಾವರಣ ಉಂಟಾಗುವುದು. ನಿವೇಶನದ ಅಥವಾ ಜಮೀನಿನ ಖರೀದಿ ವಿಷಯದಲ್ಲಿ ದಾಖಲೆ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಲೇಸು.
ಕುಂಭ
ಅಡಿಕೆ ಮತ್ತು ರಬ್ಬರ್ ಪದಾರ್ಥದ ವ್ಯಾಪಾರಿಗಳಿಗೆ ನೂತನ ವ್ಯಕ್ತಿಯ ಪರಿಚಯವು ಉತ್ತಮ ವ್ಯವಹಾರ ನಡೆಸಲು ಉಪಯೋಗವಾಗುವುದು. ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿ.
ಮೀನ
ಜೀವನದಲ್ಲಿ ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿ. ಜವಾಬ್ದಾರಿಯ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಬರಲಿದೆ.