ದಿನ ಭವಿಷ್ಯ: ಒಪ್ಪತ್ತಿನ ಊಟ ಮಾಡುವುದರಿಂದ ಅಜೀರ್ಣ ಸಮಸ್ಯೆ ನಿವಾರಿಸಿಕೊಳ್ಳಬಹುದು
ದಿನ ಭವಿಷ್ಯ: 17 ಮೇ 2024 ಶುಕ್ರವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಮೇ 2024, 23:54 IST
Last Updated 16 ಮೇ 2024, 23:54 IST
ದಿನ ಭವಿಷ್ಯ
ಮೇಷ
ಸಜ್ಜನರ ಹಾಗೂ ದುರ್ಜನರ ಸಹವಾಸಗಳಂತೆ ಫಲಗಳನ್ನು ಕೊಡುವುದು ಅನುಭವಕ್ಕೆ ಬರುತ್ತದೆ. ಹೂವು ಹಣ್ಣುಗಳ ಬೆಳೆಗಾರರಿಗೆ ಲಾಭ ನಷ್ಟಗಳೆರೆಡರ ಅನುಭವವೂ ಆಗಬಹುದು.
ವೃಷಭ
ನೋಯಿಸಲೆಂದು ಮಾತನಾಡದಿದ್ದರೂ ಮಾತು ಇತರರ ಬೇಸರಕ್ಕೆ ಕಾರಣವಾಗಬಹುದು. ಮನದ ಆಸೆ ಪೂರೈಸಿಕೊಳ್ಳಲು ಹಣ ಖರ್ಚು ಮಾಡುವಿರಿ. ತಲೆನೋವು ಕಾಣಿಸಿಕೊಳ್ಳಬಹುದು.
ಮಿಥುನ
ಮನೆಯ ಖರ್ಚು ವೆಚ್ಚಗಳ ಮೇಲಿನ ನಿರ್ಲಕ್ಷ್ಯವು ಮುಂದೊಂದು ದಿನದ ಹಣದ ಅಭಾವಕ್ಕೆ ಕಾರಣವಾಗಬಹುದು. ಕುಟುಂಬದ ಸಂಗತಿಗಳನ್ನು ಏನಾದರೂ ಮರೆತೆ ಎಂದು ಜ್ಞಾಪಿಸಿಕೊಳ್ಳಿ.
ಕರ್ಕಾಟಕ
ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗ ಈ ದಿನವಿದೆ. ರಫ್ತು ವ್ಯಾಪಾರ ಮಾಡುವವರಿಗೆ ಸಂಪರ್ಕದಲ್ಲಿ ಅಡೆತಡೆಗಳು ಉಂಟಾಗಲಿದೆ. ಹೊಸ ವಸ್ತ್ರಗಳ ಖರೀದಿ ಮಾಡುವಿರಿ.
ಸಿಂಹ
ನೇರ ನುಡಿಯ ಸ್ವಭಾವದಿಂದಾಗಿ ಸಹೋದ್ಯೋಗಿಗಳಲ್ಲಿ ವಿಶ್ವಾಸ ಹೆಚ್ಚಲಿದೆ. ಸ್ವಭಾವತಃ ಖುಷಿಯಾಗಿ ಇರುವುದನ್ನು ಬಯಸುವ ನೀವು ಪರಜನರ ಮಾತುಗಳಿಗೆ ಕಿವಿಗೊಡಬೇಡಿ.
ಕನ್ಯಾ
ಇತರರ ಬಗ್ಗೆ ಅನುಕಂಪ ತೋರುವ ನೀವು, ನಿಮ್ಮ ಬಗ್ಗೆಯೂ ಗಮನವಿರಿಸಿಕೊಳ್ಳಬೇಕೆಂದು ಮರೆಯದಿರಿ. ಅನುಭವೇ ಇಲ್ಲದೆ ಮಾಡಿದ ಅಡುಗೆಯು ಗುಣಮಟ್ಟದ್ದಾಗುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ.
ತುಲಾ
ರೇಷ್ಮೆ ನೇಕಾರರು ಉತ್ತಮ ಮಟ್ಟದ ನೇಯ್ಗೆಯಿಂದ ಏಳಿಗೆ ಹೊಂದುವ ಸಾಧ್ಯತೆಗಳಿವೆ. ಪ್ರಾಕೃತ ಭಾಷಾತಜ್ಞರಿಗೆ ಬೇಡಿಕೆ ಬರುವಂತಹ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ವೃಶ್ಚಿಕ
ಖರ್ಚುವೆಚ್ಚಗಳ ನಿಯಂತ್ರಣಕ್ಕಾಗಿ ಹರಸಾಹಸ ಪಡಬೇಕಾಗುವುದು. ದುಃಖಕರ ವಿಚಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾದದಂತೆ ಭಾಸವಾಗುವುದು.
ಧನು
ಇತ್ತೀಚಿನ ದಿನಗಳಲ್ಲಿ ಹೊಸ ಪರಿಚಯವು ಯಾವುದೋ ಒಂದು ತರಹದಿಂದ ಪ್ರಯೋಜನಕ್ಕೆ ಬರಲಿದೆ. ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
ಮಕರ
ನಿರಂತರ ಸೇವೆಗಾಗಿ ಮಕ್ಕಳ ಪ್ರತಿಜ್ಞೆಗಳು ಬಹಳ ಹೆಮ್ಮೆ ಪಡುವಂತೆ ಮಾಡುತ್ತವೆ. ಕಂಪನಿಯ ಹೊಸ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಹೆಗ್ಗಳಿಕೆ ನಿಮ್ಮದಾಗಲಿದೆ
ಕುಂಭ
ಹೊಸ ಕ್ಲಿನಿಕ್ ಆರಂಭದ ಶುಭ ಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು, ಜೊತೆಗೆ ಲಾಭವೂ ಇದೆ.
ಮೀನ
ಅಂಗಾಂಗ ಕೃಷಿಯ ಸಂಶೋಧನೆಯಲ್ಲಿ ತೊಡಗಿರುವವರಿಗೆ ಹೊಸ ಸವಾಲುಗಳು ಎದುರಾಗುತ್ತವೆ. ಒಪ್ಪತ್ತಿನ ಊಟವನ್ನು ಮಾಡುವುದರಿಂದಾಗಿ ಅಜೀರ್ಣ ,ಇನ್ನಿತರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.