ADVERTISEMENT

ದಿನ ಭವಿಷ್ಯ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಫೆಬ್ರುವರಿ 2026, 22:30 IST
Last Updated 19 ಫೆಬ್ರುವರಿ 2026, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಲು ಉತ್ತಮ ದಿನ.  ಮುಂಜಾನೆ ಏಳುವಾಗಲೇ ದಿನಚರಿಯನ್ನು ನೆನೆದ ನೀವು ಉತ್ಸಾಹಿಗಳಾಗಿರುತ್ತೀರಿ.
  • ವೃಷಭ
  • ನೀರಿನ ಹತ್ತಿರದಲ್ಲಿ ಅಥವಾ ನೀರಿಗೆ ಸಂಬಂಧಿಸಿದ ಕೆಲಸ ನಡೆಸುವವರಿಗೆ ವೃತ್ತಿಯಲ್ಲಿ ಭೀತಿ ಎದುರಾಗಬಹುದು. ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಣ್ಣ-ಪುಟ್ಟ ತಪ್ಪುಗಳನ್ನು ಮಾಡುವ ಲಕ್ಷಣಗಳಿವೆ.
  • ಮಿಥುನ
  • ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವ ದಿಕ್ಕಿನಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳುವಿರಿ. ಕೆಲಸ ಮಾಡುವ ಮುನ್ನ ಸಂಪೂರ್ಣ ವಾಸ್ತವಾಂಶ ಅರಿತುಕೊಳ್ಳಿರಿ. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಲಿದೆ.
  • ಕರ್ಕಾಟಕ
  • ಮೇಲಧಿಕಾರಿಯಿಂದಲೋ, ಗುರು-ಹಿರಿಯರಿಂದಲೋ ಉತ್ತಮ ಪ್ರಶಂಸೆಯ ಮಾತುಗಳು ಕೇಳಿಬರಲಿವೆ. ಆಹಾರದ ಬಳಕೆಯಲ್ಲಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಿಸಿ.
  • ಸಿಂಹ
  • ಸಮಾಜದಲ್ಲಿ ಸ್ಥಾನಮಾನ ಹೊಂದಿರುವ  ಮಸಿ ಬಳಿಯುವ ಪ್ರಯತ್ನ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ನೆರವೇರಲಿದೆ. ಮನೆಯವರ ಬೇಡಿಕೆಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವಿರಿ.
  • ಕನ್ಯಾ
  • ಉನ್ನತ ಶಿಕ್ಷಣಕ್ಕಾಗಿ ದೂರದ ಅಥವಾ ವಿದೇಶ ಪ್ರಯಾಣದ ಕನಸು ಈಡೇರುವ ಬಗ್ಗೆ ಹಣ ವ್ಯಯಿಸಬೇಕಾಗುವುದು. ಕಾರ್ಮಿಕರ ಮೇಲಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರಿಂದ ಪ್ರಯೋಜನ ಪಡೆಯಲಿದ್ದೀರಿ.
  • ತುಲಾ
  • ಜೇನುಹುಳಗಳಂತಹ ಕೀಟಗಳಿಂದ ಅಥವಾ ಇತರೆ ಜಂತುಗಳ ಕಚ್ಚುವಿಕೆ ಸಂಭವಿಸಬಹುದು ಜಾಗ್ರತರಾಗಿರಿ. ಯಾವುದೇ ಪರಿಸ್ಥಿತಿಯಲ್ಲಿ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡುವುದು ಅಭ್ಯಾಸವಾಗಿರಲಿ.
  • ವೃಶ್ಚಿಕ
  • ಜಾಣ್ಮೆ ಮತ್ತು ಅವಿರತ ದುಡಿಮೆಯಿಂದ ಮಾಡುತ್ತಿರುವಂಥ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗಿರುವುದು ಗಮನಕ್ಕೆ ಬರಲಿದೆ. ಬ್ಯಾಂಕ್ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಬದಲಾವಣೆಯಂಥ ಸಂಭವವಿರುವುದು.
  • ಧನು
  • ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ಮೇಲಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ಸುಗಂಧ ದ್ರವ್ಯಗಳ ಉಪಯೋಗದಿಂದ ಅಲರ್ಜಿ ಸಂಭವಿಸಬಹುದು, ಎಚ್ಚರಿಕೆ ಇರಲಿ.
  • ಮಕರ
  • ವೃತ್ತಿಕ್ಷೇತ್ರದ ಸೂಕ್ಷಾತಿಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ಅಕ್ಕ ಅಥವಾ ತಂಗಿಯ ಆರೋಗ್ಯದ ಬಗ್ಗೆ ಖರ್ಚು ಮಾಡಬೇಕಾದ ಸಂದರ್ಭ ಬರುವುದು.
  • ಕುಂಭ
  • ವೃತ್ತಿರಂಗದಲ್ಲಿ  ಸಾಮರ್ಥ್ಯ  ಹೆಚ್ಚೇನು ಪ್ರಯೋಜಕಾರಿಯಾಗುವುದಿಲ್ಲ. ಮನುಷ್ಯ ಪ್ರಯತ್ನದ ಜತೆಯಲ್ಲಿ ದೇವಬಲವು ಅಗತ್ಯ ಎನ್ನುವ ಕಾರಣದಿಂದಾಗಿ ದೇವರ ಮೊರೆ ಹೋಗುವುದು ಉತ್ತಮ.
  • ಮೀನ
  • ಹಿರಿಯರೊಡನೆ ಮಾಡಿದ ಅನವಶ್ಯಕ  ತರ್ಕ, ವಿವಾದಗಳಿಂದ ಅಧಿಕಪ್ರಸಂಗಿ ಎನ್ನುವ ಪಟ್ಟವನ್ನು ಹೊಂದುವಿರಿ. ಶ್ರೀ ಮಹಾವಿಷ್ಣುವನ್ನು ಸ್ತುತಿಸಿದಲ್ಲಿ ಮನೆಯಲ್ಲಿ ಆರೋಗ್ಯ, ಐಶ್ವರ್ಯಗಳ ವೃದ್ಧಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.