ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಕಾಡಲಿದೆ ಅನಾರೋಗ್ಯ, ಎಚ್ಚರವಹಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಫೆಬ್ರುವರಿ 2026, 22:30 IST
Last Updated 15 ಫೆಬ್ರುವರಿ 2026, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇವತಾನುಗ್ರಹದ ಜತೆಯಲ್ಲಿ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು. ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು. ವ್ಯವಹಾರಗಳಲ್ಲಿ ಹಿಡಿತ ಸಾಧಿಸುವಿರಿ.
  • ವೃಷಭ
  • ಋಣಾತ್ಮಕ ಚಿಂತನೆಯಿಂದ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವ ನಿಮ್ಮ ಅಭ್ಯಾಸ ವ್ಯತ್ಯಾಸ ಆಗುವುದು. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.
  • ಮಿಥುನ
  • ರೈತರು ಬೆಳೆಗಳ ಅಭಿವೃದ್ಧಿ, ರಕ್ಷಣೆಯ ಬಗ್ಗೆ ಗಮನಹರಿಸಿ. ನಿಮ್ಮ ಆಹಾರ ಪದ್ಧತಿಯು ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ  ಅಗಾಧವಾದ ಪ್ರಯತ್ನ ಬೇಕಾಗುವುದು.
  • ಕರ್ಕಾಟಕ
  • ಸಿನಿಮಾ ರಂಗದವರಿಗೆ ಮತ್ತು ಜವಳಿ ವ್ಯಾಪಾರಿಗಳಿಗೆ ಹೂಡಿಕೆ ಮಾಡುವ ಯೋಚನೆ ಉತ್ತಮವಲ್ಲ. ಸ್ತ್ರೀಯರಿಗೆಗೌರವ, ಮನ್ನಣೆ ಸಿಗಲಿದೆ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭ.
  • ಸಿಂಹ
  • ಪ್ರತಿ ವರ್ಷ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ.  ಸಹಾಯ ಮಾಡುವಂತಹಾ ನಿಮ್ಮ ನಡವಳಿಕೆಯು ಅಭಿವೃದ್ಧಿಗೆ ರಕ್ಷೆಯಾಗಿ ಇರುತ್ತದೆ.
  • ಕನ್ಯಾ
  • ಷೇರು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಗಮನಿಸಿ ತೆಗೆದುಕೊಂಡ ತೀರ್ಮಾನ ಸರಿಯಾದದ್ದಾಗಲಿದೆ. ನಿಮ್ಮ ಕೆಲಸದಲ್ಲಿ ಸಮಯ ಪಾಲನೆ ಮಾಡುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಿ.
  • ತುಲಾ
  • ಸಾಮರ್ಥ್ಯಕ್ಕೆ ಮತ್ತು ಕೆಲಸಕ್ಕೆ ಗ್ರಹಣ ಆವರಿಸಿ ಯೋಜನಾಬದ್ಧರಾಗಿ ಕೆಲಸ ನಡೆಯದೇ ಇರಬಹುದು. ಒಮ್ಮೊಮ್ಮೆ ಸಾಮಾಜಿಕ ರಂಗದಲ್ಲಿ ಮುಜುಗರದ ಸನ್ನಿವೇಶಗಳು ಸೃಷ್ಟಿಯಾಗಬಹುದು. 
  • ವೃಶ್ಚಿಕ
  • ಬಾಲ್ಯ ಸ್ನೇಹಿತರೊಂದಿಗೆ ಸಮಯ ಕಳೆಯುವ ಸಂದರ್ಭ ಬರಬಹುದು. ಮಕ್ಕಳಿಗೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಿ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸಬಹುದು.
  • ಧನು
  • ಹಿಂದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತವೆ. ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಇರದು. ವ್ಯವಹಾರದಲ್ಲಿ ಬಂಡವಾಳ ಹೂಡುವಂತೆ ಒತ್ತಾಯ ಹೆಚ್ಚಲಿದೆ.
  • ಮಕರ
  • ಫ್ಯಾಷನ್ ಡಿಸೈನರ್‌ಗಳು ಅವಕಾಶಗಳನ್ನು ಹಾಗೂ ಉತ್ತಮ ಧನಲಾಭ  ಪಡೆಯುವರು. ಪುಣ್ಯ ಸಂಪಾದನೆ ಮಾಡುವ ಕಾರಣಕ್ಕಾಗಿ ದಾನ-ಧರ್ಮ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿರಿ.
  • ಕುಂಭ
  • ಬಿಟ್ಟು ಸ್ವಲ್ಪ ಕಾಲದ ನಂತರ ಮಾಡುತ್ತೇನೆ ಎಂದು ನೀವು ಅಂದುಕೊಳ್ಳುವ ವಿಷಯಗಳು ಬಿಟ್ಟ ಹಂತದಲ್ಲೇ ನಿಂತು ಹೋಗುವ ಸಾಧ್ಯತೆ ಇರುವುದರಿಂದ  ಕೂಡಲೇ ಪೂರೈಸುವ ಯೋಚನೆ ಮಾಡಿ.
  • ಮೀನ
  • ವಿಳಂಬವಾಗಿದ್ದ ಕಾರ್ಯ ಕಲಾಪಗಳು ಚುರುಕುಗೊಂಡು ಅನುಕೂಲ ಒದಗಿ ಬರಲಿದೆ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯ ನಿವಾರಣೆಯಾಗುವಂತೆ ವರ್ತಿಸಿ. ಉದ್ಯೋಗಕ್ಕಾಗಿ ಅಲೆದಾಟ ತಪ್ಪದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.