ADVERTISEMENT

ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಜುಲೈ 2025, 23:34 IST
Last Updated 9 ಜುಲೈ 2025, 23:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬದುಕಿನ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ದುಡಿದು ಯಶಸ್ಸನ್ನು ಹೊಂದುವಿರಿ. ಜೀವನದ ಮುಂದಿನ ದಿನಗಳಿಗೆ ದೀರ್ಘಕಾಲೀನ ಯೋಜನೆಗಳನ್ನು ಮಾಡುವಿರಿ. ವಾಹನ ಚಾಲಕರು ಎಚ್ಚರವಿರಲಿ.
  • ವೃಷಭ
  • ಸರ್ಕಾರಿ ನೌಕರರಿಗೆ ಕೆಲಸದ ವಿಚಾರದಲ್ಲಿ ನಾನಾ ರೀತಿಯಲ್ಲಿ ಅಡ್ಡಿ-ಆತಂಕ ಕಾಡಬಹುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ಅವಕಾಶಗಳು ಒದಗಿ ಬರುತ್ತವೆ. ಶನೈಶ್ಚರನ ಆರಾಧನೆ ಮಾಡಿ.
  • ಮಿಥುನ
  • ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣದಂಥ ಕೆಲಸಗಳಿಗೆ ಪೂರಕ ವಾತಾವರಣ ದೊರೆಯಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅತ್ಯಗತ್ಯ. ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ.
  • ಕರ್ಕಾಟಕ
  • ಅತ್ತೆ-ಸೊಸೆ, ತಾಯಿ-ಮಗಳು ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಮರಸ್ಯದ ಜೀವನ ನಡೆಸಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ.
  • ಸಿಂಹ
  • ಯಾವ ವಿಷಯದಲ್ಲಿ ಹಿಂದುಳಿದಿರುವಿರಿ ಎಂದು ಕಂಡುಕೊಂಡು ತಜ್ಞರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಅರಿತು ಅವರನ್ನು ಕ್ಷಮಿಸಿ ತಿದ್ದಿ.
  • ಕನ್ಯಾ
  • ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರಲ್ಲಿ ಮಾತನಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನುಕೂಲವಾಗುವುದು. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶ ಸಿಗಲಿದೆ.
  • ತುಲಾ
  • ಕುಟುಂಬದೊಡನೆ ನಡೆದ ವೈಮನಸ್ಯನ್ನು ಕ್ಷಮಾಯಾಚಿಸಿ, ಬಗೆಹರಿಸಿಕೊಳ್ಳಿ. ಸ್ನೇಹಿತರೊಂದಿಗೆ ಮರೆಯಲಾಗದ ಕ್ಷಣಗಳನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಅತ್ಯಗತ್ಯವಾಗುವುದು.
  • ವೃಶ್ಚಿಕ
  • ಇಚ್ಚಾಶಕ್ತಿಯೊಂದಿಗೆ ಪ್ರಯತ್ನವೂ ಉತ್ತಮವಾಗಿರುವುದರಿಂದ ನೀವಂದುಕೊಂಡ ಕಾರ್ಯ ಅದ್ಭುತವಾಗಿ ನಡೆಯಲಿದೆ. ಉತ್ತಮ ಅವಕಾಶ ಲಭಿಸುವುದು.
  • ಧನು
  • ಸ್ವತಂತ್ರ ಆಲೋಚನೆಯಿಂದ ಮಾಡಿದ ಕೆಲಸಗಳೇ ಗುಣಮಟ್ಟದ್ದಾಗಿರುವುದರಿಂದ ಬೇರೆಯವರ ಕೆಲಸವನ್ನು ನಕಲುಪಡಿಸುವ ಪ್ರಯತ್ನ ಮಾಡದಿರಿ. ಸಂಪಾದಿಸಿದ ಹಣವನ್ನು ಸನ್ಮಾರ್ಗದಲ್ಲಿ ಬಳಸಿ.
  • ಮಕರ
  • ಪ್ರತಿದಿನವೂ ಒಂದೇ ರೀತಿಯ ದಿನಚರಿಯನ್ನು ಪಾಲಿಸುತ್ತಿರುವವರು ಅದರಿಂದ ಬೇಸತ್ತು ಹೋಗುವಿರಿ. ಬೇರೆಯವರ ಸಂಸಾರವನ್ನು ಟೀಕಿಸುವ ಮೊದಲು ಸಂಸಾರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಿ.
  • ಕುಂಭ
  • ಬದಲಾಗುತ್ತಿರುವ ಮನಃಸ್ಥಿತಿಯಿಂದಾಗಿ ನಿಕಟವರ್ತಿಗಳಿಗೆ ಗೋಳೆನ್ನಿಸಬಹುದು. ಪೋಷಕರಾದ ನೀವು ಮಕ್ಕಳ ಅಗತ್ಯಗಳನ್ನು ಪೂರೈಸಿ. ಮನೆಯ ಹಿರಿಯರಿಗೆ ಸರಿಯಾದ ಗೌರವ ಸಲ್ಲಿಸಿ.
  • ಮೀನ
  • ದೇವರನ್ನು ಸ್ತುತಿಸಿದ ಅದರ ಪುಣ್ಯಫಲಗಳ ಅನುಭವ ಮಕ್ಕಳ ಮೂಲಕ ತಿಳಿಯುತ್ತದೆ. ಒಪ್ಪಂದ ವ್ಯವಹಾರಗಳಿಂದ ವರಮಾನ ಹೆಚ್ಚಲಿದೆ. ಬಡ ವಿದ್ಯಾರ್ಥಿಗೆ ಕೈಲಾದ ಸಹಾಯ ಮಾಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.