ADVERTISEMENT

ದಿನ ಭವಿಷ್ಯ: ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಸೆಪ್ಟೆಂಬರ್ 2025, 0:23 IST
Last Updated 13 ಸೆಪ್ಟೆಂಬರ್ 2025, 0:23 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಬಳಸಿಕೊಳ್ಳಲು ಯತ್ನ ಮಾಡಿ. ಸೃಜನಶೀಲ ಯೋಜನೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಚಿಂತೆ ಮತ್ತು ತೊಂದರೆಗಳು ದೂರಾಗಲಿವೆ.
  • ವೃಷಭ
  • ಪ್ರಗತಿಯನ್ನು ಬಹಳಷ್ಟು ಜಾಗದಲ್ಲಿ ಪ್ರಶಂಸಿಸುತ್ತಿರುವುದರಿಂದ ಕಾರ್ಯಕ್ಷೇತ್ರದಲ್ಲಿ ಹುಮ್ಮಸ್ಸು ಬರುವುದರ ಜತೆಗೆ ವೃತ್ತಿಪರ ಶತ್ರುಗಳ ಸಂಖ್ಯೆ ಗಗನ ಮುಟ್ಟಲಿದೆ. ಫೋಟೊ ಸ್ಟುಡಿಯೊದವರಿಗೆ ಲಾಭ ಇರಲಿದೆ.
  • ಮಿಥುನ
  • ಭವಿಷ್ಯದ ಕುರಿತು ಗಂಭೀರ ಚರ್ಚೆ ನಡೆಯುವುದು. ಕೈಗಾರಿಕಾ ಕ್ಷೇತ್ರದಲ್ಲಿ ಲಾಭ ಪಡೆಯುವಿರಿ. ಮಗಳಿಗೆ ಆಪ್ತರ ಸಹಾಯದಿಂದ ಉದ್ಯೋಗ ಲಭಿಸಲಿದೆ. ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
  • ಕರ್ಕಾಟಕ
  • ತಾಂತ್ರಿಕ ವಿದ್ಯಾರ್ಥಿಗಳು ವಿನೂತನ ಯೋಜನೆ ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಮನೆಯವರ ಆರೋಗ್ಯದಲ್ಲಿ ಹೊಸ ಔಷಧಿಯಿಂದ ಹಂತ ಹಂತದ ಸುಧಾರಣೆಯನ್ನು ಕಂಡು ಮನಸ್ಸಿಗೆ ನೆಮ್ಮದಿ ಇರುವುದು.
  • ಸಿಂಹ
  • ನ್ಯಾಯವಾದಿಗಳು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಒಡಹುಟ್ಟಿದವರಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸೂಕ್ತ ಕಾಲ. ಕಾಫಿ ಹಾಗೂ ಏಲಕ್ಕಿ ಬೆಳೆಗಾರರು ಉತ್ತಮ ಫಸಲು ನಿರೀಕ್ಷಿಸಬಹುದು.
  • ಕನ್ಯಾ
  • ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಸು ದೂರಾಗಲಿದೆ. ಶ್ರೀದುರ್ಗೆಯನ್ನು ಮನಃಪೂರ್ವಕವಾಗಿ ಪೂಜಿಸಿಕೊಂಡು ಕೆಲಸವನ್ನು ಮುಂದುವರಿಸಿ ಹೆಚ್ಚಿನ ಆದಾಯವನ್ನು ಕಾಣುವಿರಿ.
  • ತುಲಾ
  • ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿಯನ್ನು ನೋಡಬಹುದು. ಅವಿವಾಹಿತರಿಗೆ ಮಾತೃ ವರ್ಗದ ಕಡೆಯಿಂದ ಅಪೇಕ್ಷಿಸಿದ ರೀತಿಯಲ್ಲಿಯೇ ಸಂಬಂಧ ಅರಸಿ ಬರುವುದು.
  • ವೃಶ್ಚಿಕ
  • ಮಕ್ಕಳು ಜೀವನದಲ್ಲಿ ಈ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಪಡುವಂತಾಗುವುದು. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಖರ್ಚಿಗೇನೂ ಯೋಚನೆ ಇರುವುದಿಲ್ಲ.
  • ಧನು
  • ವೈದ್ಯರ ಸಲಹೆಯಂತೆ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ.
  • ಮಕರ
  • ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವರಿಗೆ ಅವಕಾಶಗಳೊಂದಿಗೆ ಹೆಸರಾಂತ ಕಂಪೆನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸಿ. ಕಾರ್ಯಗಳು ಕೂಡಿ ಬರಲಿವೆ.
  • ಕುಂಭ
  • ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು. ಮಕ್ಕಳ ಆರೋಗ್ಯದಲ್ಲಿ ಏರು-ಪೇರು ಆಗಬಹುದು
  • ಮೀನ
  • ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ಕಂಡುಬರಲಿದೆ. ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ತೆಗೆದುಹಾಕಿ. ಮನಸ್ಸಿಗೆ ಹಿತ ಅನುಭವಗಳನ್ನು ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.