ADVERTISEMENT

ದಿನ ಭವಿಷ್ಯ: ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಸೆಪ್ಟೆಂಬರ್ 2025, 0:25 IST
Last Updated 9 ಸೆಪ್ಟೆಂಬರ್ 2025, 0:25 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಾಧನೆಯಲ್ಲಿ ಮೇಲುಗೈ ಸಾಧಿಸುವಿರಿ. ವ್ಯವಹಾರದಲ್ಲಿನ ಲಾಭವು ಅಭಿವೃದ್ಧಿಗೆ ಸಹಕಾರಿ. ಆತಂಕ ಎದುರಾದಾಗ ಹಿರಿಯರ ಸಲಹೆ ಸಮಾಧಾನ ತರಲಿದೆ.
  • ವೃಷಭ
  • ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿ. ಕೌಟುಂಬಿಕವಾಗಿ ಕೆಟ್ಟು ಹೋದ ಸಂಬಂಧಗಳು ಮರಳಿ ಬರಲಿವೆ. ಬರಹಗಾರರಿಗೆ ಶುಭ ದಿನ.
  • ಮಿಥುನ
  • ಸಮೀಪವರ್ತಿಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಕುಟುಂಬ ವರ್ಗದವರಲ್ಲಿ ಆರೋಗ್ಯ ಉತ್ತಮವಾಗಿರುವುದು. ಓದಿನಲ್ಲಿ ಅತೀವ ಆಸಕ್ತಿ ಇರುವುದು.
  • ಕರ್ಕಾಟಕ
  • ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ. ನಟ ನಟಿಯರಿಗೆ ಖ್ಯಾತಿ ಹೊಂದಲು ವಿಫುಲ ಅವಕಾಶಗಳು ದೊರೆಯಲಿವೆ. ಭಿನ್ನಾಭಿಪ್ರಾಯ ದೂರವಾಗಿ ಸಂಬಂಧ ಸುಧಾರಿಸಲಿದೆ.
  • ಸಿಂಹ
  • ಕಳೆದು ಹೋಗಿರಬಹುದೆಂದು ತಿಳಿದಿದ್ದ ದಾಖಲೆಪತ್ರಗಳು ಸಿಕ್ಕಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕಬ್ಬಿಣ, ಸಿಮೆಂಟ್ ವ್ಯಾಪಾರದವರು ನಷ್ಟ ಫಲವನ್ನು ಅನುಭವಿಸಬೇಕಾಗುತ್ತದೆ.
  • ಕನ್ಯಾ
  • ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಜಾಣತನ ತೋರಿಸಬೇಕಾಗುತ್ತದೆ. ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಹಾಗೂ ಹೊಸ ಸಾಧ್ಯತೆಗಳನ್ನು ಸಾಧಿಸಲು ಸಮಯ ಒದಗಿದೆ.
  • ತುಲಾ
  • ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸಿ. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ. ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಳ್ಳುವ ಗುಣ ಹಾಗೂ ಸಾಮರ್ಥ್ಯ ಮುಖ್ಯವೆನಿಸುವುದು.
  • ವೃಶ್ಚಿಕ
  • ಔಷಧಿ ವ್ಯಾಪಾರಿಗಳಿಗೆ ವ್ಯಾಪಾರದಿಂದ ಆದಾಯ ಹೆಚ್ಚುವುದು. ಯೋಚನೆಗಳನ್ನು ಜನರು ಇಷ್ಟ ಪಡುತ್ತಾರೆ. ಆರ್ಥಿಕ ತಾಪತ್ರಯಗಳೇನು ಇರುವುದಿಲ್ಲ. ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ.
  • ಧನು
  • ಕೋರ್ಟು ವ್ಯವಹಾರಗಳಿಗೆ ಓಡಾಟ ತಪ್ಪಲಿದೆ. ಮುಖ್ಯವಾದ ಕೆಲಸವೊಂದು ದಿನಾಂತ್ಯದ ವೇಳೆಗೆ ನೆರವೇರುವುದು. ಆರೋಗ್ಯದಲ್ಲಿ ಬದಲಾವಣೆಗಳಿರುವುದು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ.
  • ಮಕರ
  • ವೃತ್ತಿರಂಗದಲ್ಲಿ ಅದೃಷ್ಟ ನಿಮ್ಮ ಪಾಲಿಗಿರುವುದು. ಆಫೀಸಿನಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಸಿದ್ಧಿ ವಿನಾಯಕನನ್ನು ಆರಾಧಿಸಿ.
  • ಕುಂಭ
  • ವ್ಯವಸ್ಥಾಪಕರ ಜತೆ ನಿಮ್ಮ ಧೈರ್ಯದ ಮಾತುಗಳು ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ಉತ್ತಮ ವಿಚಾರಗಳು ಜಾರಿಗೆ ಬರಬೇಕೆಂದು ಮಾಡುತ್ತಿರುವ ಪ್ರಯತ್ನವು ಶೀಘ್ರ ಶುಭಫಲ ನೀಡುವುದು.
  • ಮೀನ
  • ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ತಮ್ಮ ಮೇಲಧಿಕಾರಿಗಳಿಂದ ಅನುಕೂಲ ಪಡೆಯುವರು. ಗಣಕಯಂತ್ರದ ರೀತಿಯ ಉಪಕರಣಗಳ ತಯಾರಕರು ಹಾಗೂ ದುರಸ್ತಿ ಮಾಡುವವರಿಗೆ ಉತ್ತಮ ದಿನ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.