ದಿನ ಭವಿಷ್ಯ: ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ವೃಥಾ ಆರೋಪ ಹೊರಸುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಜನವರಿ 2026, 23:57 IST
Last Updated 11 ಜನವರಿ 2026, 23:57 IST
ದಿನ ಭವಿಷ್ಯ
ಮೇಷ
ಆಪ್ತಸ್ನೇಹಿತರಲ್ಲಿನ ಭಿನ್ನಾಭಿಪ್ರಾಯಗಳು ಹಲವು ದಿನಗಳವರೆಗೆ ಮುಂದುವರಿಯಬಹುದು. ನವದಂಪತಿ ದೀರ್ಘ ಪ್ರಯಾಣದ ನಂತರ ಮನೆಗೆ ವಾಪಾಸಾಗುವಿರಿ. ಮೊಬೈಲ್ ಮಾರಾಟಗಾರರಿಗೆ ಈ ದಿನ ವಿಶೇಷ.
ವೃಷಭ
ತಪ್ಪುಗಳನ್ನು ಮುಚ್ಚಿಹಾಕುವ ಸಲುವಾಗಿ ಬೇರೆಯವರ ಮೇಲೆ ವೃಥಾ ಆರೋಪ ಹೊರಸುವಿರಿ. ಆಸ್ತಿ ಖರೀದಿಸುವ ಅಥವಾ ಮಾರಾಟ ಮಾಡುವ ವಿಷಯದ ಮಾತುಕತೆ ನಡೆಯುವುದು.
ಮಿಥುನ
ವೈಯಕ್ತಿಕ ವಿಚಾರಗಳಲ್ಲಿ ಅನ್ಯರಿಂದಾಗುವ ಒತ್ತಡಗಳಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ವಿಭಿನ್ನವಾಗಿ ಯೋಚಿಸುವ ಸವಾಲುಗಳಿಗೆ ಪರಿಹಾರ ಸಿಗುತ್ತದೆ.
ಕರ್ಕಾಟಕ
ಹಳೆಯ ಮನಸ್ತಾಪಗಳನ್ನೇ ನೆನೆಸಿಕೊಂಡು ಮತ್ತೆ ಆಪ್ತರಲ್ಲಿ ವಾದವಿವಾದ ತೆಗೆಯಬೇಡಿ. ಪ್ರತಿಭೆಗೆ ತಕ್ಕ ಉದ್ಯೋಗ ದೊರೆತು ಸಂತಸವಾಗಲಿದೆ. ಮಹಾಲಕ್ಷ್ಮಿ ಪೂಜಿಸಿ ಏಳಿಗೆ ಹೊಂದುವಿರಿ.
ಸಿಂಹ
ವಿರೋಧಿಗಳ ಜತೆಯಲ್ಲಿಯೇ ಸಮಯವನ್ನು ಕಳೆಯಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯಲಿವೆ. ರಾಜಕೀಯ ಸೇರುವ ಯೋಚನೆ ಬರುವುದು.
ಕನ್ಯಾ
ಬೇರೆಯವರ ಕೆಲಸವನ್ನು ನಿಮ್ಮ ಕೆಲಸವೆಂದೇ ತಿಳಿದು ಭೇದಭಾವವಿಲ್ಲದೆ ಯಶಸ್ವಿಯಾಗಿ ಮಾಡಿ ಮುಗಿಸುವಿರಿ. ವೃದ್ಧರ ಹಾಗೂ ಅನಾಥ ಮಕ್ಕಳ ಸೇವೆಯಿಂದ ಸಂತೋಷ ಹೊಂದುವಿರಿ.
ತುಲಾ
ಶೀತ ಬಾಧೆಯನ್ನು ಹೋಗಲಾಡಿಸಿಕೊಳ್ಳಲು ಮನೆಮದ್ದಿನ ಅಥವಾ ಆಯುರ್ವೇದದ ಮೊರೆಹೋಗಿ. ಮನರಂಜನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟು ಸಂತಸದಿಂದ ಇರಿ.
ವೃಶ್ಚಿಕ
ಕಳೆದು ಹೋದ ಜಾನುವಾರು ಹಲವಾರು ದಿನಗಳ ನಂತರ ಮನೆಯ ಜಾಡು ಹಿಡಿದು ಬರಲಿದೆ. ಕೆಲವು ಕೆಲಸ ಕಾರ್ಯಗಳು ಮಾತನಾಡಿದರಷ್ಟೇ ಮುಂದುವರಿಯಲಿದೆ.
ಧನು
ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಿ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ಸಲುವಾಗಿ ದುರ್ಗಾಪರಮೇಶ್ವರಿಯ ಆರಾಧನೆ ಮಾಡಿ.
ಮಕರ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ರಾಸಾಯನಿಕವಿಜ್ಞಾನದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಅಗತ್ಯವಾಗಿ ಬೇಕಾಗುವುದು. ನೀವೊಬ್ಬ ಅದೃಷ್ಟವಂತರೆಂದು ಅನ್ನಿಸಬಹುದು.
ಕುಂಭ
ಗುರು ವಾಕ್ಯ ಪಾಲಿಸುವುದರಿಂದ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಅರ್ಧಕ್ಕೆ ನಿಂತ ಎಲ್ಲಾ ಕಾರ್ಯಗಳು ಪುನಃ ಚಾಲನೆ ದೊರೆಯಲಿವೆ. ಉದ್ಯೋಗದಲ್ಲಿ ಸ್ಥಿರತೆ ಮತ್ತು ಧನಾನುಕೂಲತೆ ಇರುತ್ತದೆ.
ಮೀನ
ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದರೆ, ಬಯಕೆ ಈಡೇರುವುದು. ಸಂಘ-ಸಂಸ್ಥೆ ಯಲ್ಲಿ ಅಥವಾ ಗ್ರಾಮೀಣ ಬದುಕಿನಲ್ಲಿ ಅಧಿಕಾರ ಸಿಗಲಿದೆ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವಿರಿ.