ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಲಿವೆ

2026ರ ಫೆಬ್ರುವರಿ 4, ಬುಧವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಫೆಬ್ರುವರಿ 2026, 23:30 IST
Last Updated 3 ಫೆಬ್ರುವರಿ 2026, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾರ್ಯದೊತ್ತಡದ ನಡುವೆ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ. ಹುಸಿ ಭರವಸೆಯ ಮಾತುಗಳು ಸಿಗಬಹುದು. ಕೃಷಿಕರಿಗೆ ಫಸಲು ದೊರಕುವ ಲಕ್ಷಣಗಳಿಂದ ಮನಸ್ಸಿಗೆ ಹರ್ಷವಿರುವುದು.
  • ವೃಷಭ
  • ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರಿಂದ ಕರ್ತವ್ಯ ಲೋಪ ಸಂಭವಿಸಬಹುದು. ಜೀವನದ ಎಲ್ಲ ರೀತಿಯ ಕ್ಷಣಗಳನ್ನು ಅನುಭವಿಸಿದ ನಿಮಗೆ ಇತರರಿಗೆ ಜೀವನವನ್ನು ಹೇಳಿಕೊಡುವುದು ಕಷ್ಟವಾಗದು.
  • ಮಿಥುನ
  • ತಪ್ಪುಗಳಿಗೆ ಪಶ್ಚಾತಾಪ ಪಟ್ಟು ಸರಿ ಮಾಡಲು ಯತ್ನಿಸುವ ಗುಣ ಬೇಕಾಗುತ್ತದೆ. ಮನೆಯಲ್ಲಿ ಬಾಕಿ ಇರುವ ಗೃಹಕೃತ್ಯಗಳನ್ನು ಪೂರೈಸುವ ಪ್ರಯತ್ನ ಮಾಡುವಿರಿ. ಮಕ್ಕಳ ವಿಷಯವಾಗಿ ಮುಂಗೋಪಿಯಾಗುವಿರಿ.
  • ಕರ್ಕಾಟಕ
  • ವಯಸ್ಸಾದವರು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಸಾಂಸಾರಿಕವಾಗಿ ಸಂಬಂಧಗಳನ್ನು ಉಳಿಸಿ ಕಾಪಾಡುವುದರಲ್ಲಿ ಜಯವಿರುತ್ತದೆ. ಸ್ವಂತ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.
  • ಸಿಂಹ
  • ಪ್ರೀತಿ ಪಾತ್ರರಿಗೆ ಏನಾದರೂ ಉಡುಗೊರೆ ಕೊಡುವ ಉದ್ದೇಶದಿಂದ ಪೇಟೆಗೆ ಹೋಗುವಿರಿ. ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಹಸ್ತ ದೊರಕಲಿದೆ.
  • ಕನ್ಯಾ
  • ಮನೆ ಅಥವಾ ಕಟ್ಟಡ ನಿರ್ಮಾಣ ತೊಂದರೆಗಳಿಲ್ಲದೆ ಮುಂದುವರಿಯಲಿದೆ. ವಂಶಕ್ಕೆ ಸಂಬಂಧಿಸಿದ ಆದರೆ ಈವರೆಗೂ ನಿಮಗೆ ದಕ್ಕಿರದ ಆಸ್ತಿಯು ಸಿಗೆಲಿದೆ. ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಲಿವೆ.
  • ತುಲಾ
  • ಪರೋಪಕಾರದ ಫಲವಾಗಿ ಬೆಟ್ಟದಂತೆ ಕಂಡುಬಂದ ಒಂದು ಸಮಸ್ಯೆಯು ಮಂಜಿನಂತೆ ಕರಗಿ ಹೋಗುವುದು. ಆರೋಗ್ಯದಲ್ಲಾಗುವ ಏರುಪೇರುಗಳ ಬಗ್ಗೆ ಎಚ್ಚರಿಕೆ ಮುಖ್ಯ.
  • ವೃಶ್ಚಿಕ
  • ಅನಿವಾರ್ಯ ಕಾರಣದಿಂದಾಗಿ ಕುಟುಂಬದವರೊಂದಿಗೆ ಕಳೆಯಬೇಕೆಂದುಕೊಂಡ ಸಮಯವನ್ನು ತಪ್ಪಿಸಿಕೊಳ್ಳುವಿರಿ. ಮನೆಯಲ್ಲಿನ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಸಾಮಗ್ರಿ ಖರೀದಿಸುವಿರಿ.
  • ಧನು
  • ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ದಿನ. ತಂದೆಯ ವಿಪರೀತ ಸ್ಥಿತಿಗಳಿಂದ ಅವರ ಕೆಲಸಗಳೆಲ್ಲವೂ ಹೆಗಲ ಮೇಲೆ ಬೀಳಲಿವೆ.
  • ಮಕರ
  • ಮುಂಜಾಗರೂಕತೆ ಇಲ್ಲದೇ ಮಾಡಿದ ಕೆಲಸಗಳು ಅಪಾಯ ತಂದೊಡ್ಡಬಹುದು. ಕಾರ್ಯಕ್ಷೇತ್ರದಲ್ಲಿನ ಉನ್ನತ ವ್ಯಕ್ತಿಯನ್ನು ಭೇಟಿಯಾಗುವಿರಿ. ರಾಜಕೀಯ ಭವಿಷ್ಯಕ್ಕೆ ಮೋಡಕವಿದಂತೆ ಆಗುತ್ತದೆ.
  • ಕುಂಭ
  • ಗಾಯಕರು, ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಹೊಸ ಅವಕಾಶಗಳು ದೊರೆಯಲಿವೆ. ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವುದರಿಂದ ನೋವನ್ನು ಮರೆಯುವುದು.
  • ಮೀನ
  • ವೃತ್ತಿರಂಗದಲ್ಲಿ ತಿಳಿವಳಿಕೆಯಂತೆಯೇ ನಡೆಯಿರಿ. ಅನ್ಯರ ಮಾತಿಗೆ ಕಿವಿ ಒಡ್ಡಬೇಡಿ. ವೈದ್ಯರ ಸಲಹೆಯಂತೆ ಧ್ಯಾನ ಮತ್ತು ಯೋಗದ ಅಭ್ಯಾಸ ಮಾಡಿಕೊಳ್ಳಿ. ಉನ್ನತ ಅಧಿಕಾರದ ನಿರೀಕ್ಷೆ ಇರುವರಿಗೆ ಅದು ದೊರೆಯುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.