ದಿನ ಭವಿಷ್ಯ: ಈ ರಾಶಿಯವರಿಗೆ ವಾಹನ ವ್ಯವಹಾರಗಳಲ್ಲಿ ವಿಶೇಷ ಲಾಭವಾಗಲಿದೆ
2026ರ ಫೆಬ್ರುವರಿ 7, ಶನಿವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಫೆಬ್ರುವರಿ 2026, 21:27 IST
Last Updated 6 ಫೆಬ್ರುವರಿ 2026, 21:27 IST
ದಿನ ಭವಿಷ್ಯ
ಮೇಷ
ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ನಡೆಸುವುದರಿಂದ ಸಮಸ್ಯೆಗಳ ಪರಿಹಾರವನ್ನು ಶಾಶ್ವತವಾಗಿ ಕಂಡುಕೊಳ್ಳುವಿರಿ. ಕುಟುಂಬದ ಸದಸ್ಯರ ನಡುವೆ ಅನಗತ್ಯ ಚರ್ಚೆ ಮಾಡಬೇಡಿ. ವಿಶೇಷ ಉಡುಗೊರೆ ದೊರಕಬಹುದು.
ವೃಷಭ
ಪುರುಷ ಪ್ರಯತ್ನದ ಜತೆಯಲ್ಲಿ ದೇವರ ಅನುಗ್ರಹ ಯೋಜನೆಗೆ ಪುಷ್ಟಿ ಕೊಡುವುದು ಸಂತಸದ ವಿಚಾರ. ಕೈ ತಪ್ಪಿ ಹೋಗಿದ್ದ ಕೆಲಸಗಳು ಹಿರಿಯರೊಬ್ಬರ ಸಹಾಯದಿಂದ ಪುನಃ ದೊರೆಯಲಿವೆ.
ಮಿಥುನ
ನ್ಯಾಯಾಂಗ ಇಲಾಖೆಯಲ್ಲಿ ಜೀವನ ನಡೆಸುತ್ತಿರುವವರಿಗೆ ಹಣದ ಆಸೆ ತೋರಿಸಿ ತಪ್ಪು ಕೆಲಸವನ್ನು ಮಾಡುವಂತೆ ಪ್ರಚೋದಿಸುವವರು ಎದುರಾಗಲಿದ್ದಾರೆ. ಧರ್ಮ ಕಾರ್ಯಗಳಿಗೆ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ.
ಕರ್ಕಾಟಕ
ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದಲ್ಲಿ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ. ಹಳೆಯ ವಿಷಯಗಳನ್ನು ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ. ಸಿಹಿ ಘಟನೆಗಳನ್ನು ಮೆಲುಕು ಹಾಕುವಿರಿ.
ಸಿಂಹ
ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಹೊಸ ಕಾರ್ಯವು ಲಭ್ಯವಾಗಲಿದೆ. ಕೆಲಸ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವ ನಿರ್ಧಾರ ಮಾಡಿ. ವಿದೇಶ ಅಥವಾ ದೂರ ಸಂಚಾರದ ಯೋಗವಿದೆ.
ಕನ್ಯಾ
ಮಂದಗತಿಯಲ್ಲಿ ಸಾಗುತ್ತಿದ್ದ ಕೆಲವು ಕೆಲಸಗಳನ್ನು ಶೀಘ್ರ ಪೂರೈಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗುವುದು. ಶೈಕ್ಷಣಿಕ ರಂಗದವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗುವುದು.
ತುಲಾ
ಕಠಿಣ ಪ್ರಯತ್ನಗಳ ನಂತರವೂ ಸಿಗದ ಕಾಮ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನ ಬೇಕು. ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ದೊರಕುವ ಮುನ್ಸೂಚನೆ ಸಿಗುತ್ತದೆ.
ವೃಶ್ಚಿಕ
ಮನೆ ಜಾಗದ, ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು. ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವಿರಿ.
ಧನು
ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ನಿಧಾನವಾಗಿ ಪೂರ್ತಿ ಮಾಡುವಂಥ ತೀರ್ಮಾನಕ್ಕೆ ಬರುವುದು ಉತ್ತಮ. ನಿಮ್ಮ ಬಳಿ ಇರುವ ಸಂಪತ್ತು ಅನುಭವಿಸುವ ಚಟ ಉಂಟಾಗುವುದು.
ಮಕರ
ಹಿತೈಷಿಗಳಾಗಿದ್ದ ಬಂಧು-ಮಿತ್ರರು ಹಿತಶತ್ರುಗಳಾಗುವ ಸಾಧ್ಯತೆ ಅಧಿಕವಾಗಿ ತೋರುವುದು. ಮಾತಾ-ಪಿತೃಗಳಿಂದ ನಿಮ್ಮ ಆಸೆಗಳಿಗೆ ಪ್ರೋತ್ಸಾಹವನ್ನು ಹೊಂದುವಿರಿ. ವಾಹನ ವ್ಯವಹಾರಗಳಲ್ಲಿ ವಿಶೇಷ ಲಾಭ ಆಗುವುದು.
ಕುಂಭ
ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ದಿನಾಂತ್ಯದಲ್ಲಿ ಆಭರಣಗಳು ಅಥವಾ ಕಲಾವಸ್ತುಗಳನ್ನು ಖರೀದಿಸುವ ಮನಸ್ಸು ಬರಲಿದೆ.
ಮೀನ
ಇನ್ನೊಬ್ಬರು ಮಾಡುತ್ತಿರುವುದು ಶುಭ ಅಥವಾ ಅಶುಭ ಕೆಲಸವಾದರೂ, ಅದರ ಬಗ್ಗೆ ಟೀಕೆ-ಟಿಪ್ಪಣಿ ನೀಡುವುದು ಸರಿಯಲ್ಲ. ನೀವು ಪ್ರಯತ್ನಿಸಿದ ಕಾರ್ಯಗಳು ಗುರು-ಹಿರಿಯರ ಅನುಗ್ರಹದಿಂದ ಕೈಗೂಡುತ್ತವೆ.