ADVERTISEMENT

ದಿನ ಭವಿಷ್ಯ: ಕಾನೂನಿಗೆ ವಿರುದ್ಧವಾದ ಕೆಲವು ಸಂಗತಿಗಳು ನಡೆಯಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜನವರಿ 2026, 23:40 IST
Last Updated 26 ಜನವರಿ 2026, 23:40 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸುಗಂಧ ದ್ರವ್ಯಗಳ ಉತ್ಪಾದಕ ಕೈಗಾರಿಕೆ ಮತ್ತು ಮಾರಾಟದವರಿಗೆ ಉತ್ತಮ ವ್ಯವಹಾರಗಳು ಕಂಡುಬರುತ್ತವೆ. ಭವಿಷ್ಯದ ಯೋಜನೆಯಲ್ಲಿ ಪಾಲುದಾರಿಕೆಯು ಹಂತ ಹಂತವಾಗಿ ಲಾಭ ತರಲಿದೆ.
  • ವೃಷಭ
  • ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆಯನ್ನು ನಡೆಸಿ ನಂತರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಷೇರು ಅದೃಷ್ಟದಾಯಕವಾಗಿರುತ್ತದೆ.
  • ಮಿಥುನ
  • ಸಂಘ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ಅಧಿಕ ಕೆಲಸ ಅಥವಾ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳುವುದು ಸಮಸ್ಯೆಯನ್ನು ಎಳೆದುಕೊಂಡಂತಾಗುತ್ತದೆ. ದಿನಸಿ ವರ್ತಕರಿಗೆ ಲಾಭದಾಯಕ ದಿನ.
  • ಕರ್ಕಾಟಕ
  • ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟರಿಗೆ ಲಾಭದ ನಿರೀಕ್ಷೆಯಲ್ಲಿ ಅಲ್ಪಮಟ್ಟದ ವ್ಯತ್ಯಾಸಗಳಾಗುವುದು. ಸಂತಾನ ಅಪೇಕ್ಷಿಗಳಿಗೆ ದೇವತಾನುಗ್ರಹದಿಂದ ಫಲದಾಯಕವಾಗಲಿದೆ.
  • ಸಿಂಹ
  • ಜೀವನದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆಗಳು ಗಮನಕ್ಕೆ ಬರಲಿವೆ. ಬಹಳ ದಿನಗಳ ನಂತರ ವ್ಯವಹಾರ ತೃಪ್ತಿಕರವಾಗಿರುವುದು. ಅವಿವಾಹಿತರಿಗೆ ವಿವಾಹ ಯೋಗವಿದೆ.
  • ಕನ್ಯಾ
  • ವಾಣಿಜ್ಯೋದ್ಯಮಿಗಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿ ವಿಶೇಷ ಜೀವನಾನುಭವ ಉಂಟಾಗುವುದು. ಮನೆಯಲ್ಲಿ ಸಂತೋಷದಿಂದಿರಲು ಹೊಂದಾಣಿಕೆಯೇ ಮೂಲ ಮಂತ್ರವಾಗಿರಬೇಕು.
  • ತುಲಾ
  • ನಾಜೂಕಿನ ಮಾತುಗಳು ಅಥವಾ ಹಿತವಚನಗಳು ಸಹೋದ್ಯೋಗಿಯನ್ನು ಧೈರ್ಯದಿಂದ ಇರುವಂತೆ ಮಾಡಲಿವೆ. ಬರಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುವಿರಿ.
  • ವೃಶ್ಚಿಕ
  • ಬ್ಯಾಂಕ್ ನೌಕರರಿಗೆ ಕೆಲಸಗಳಲ್ಲಿ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಪರಿಗಣಿಸಿ ಗಂಭೀರ ನಿರ್ಧಾರ ತೆಗೆದುಕೊಳ್ಳಬೇಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುವುದು.
  • ಧನು
  • ಬಂಧು ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಪಾತ್ರೆ ಮಾರಾಟ ಮಾಡುವವರಿಗೆ, ತಾಮ್ರ, ಹಿತ್ತಾಳೆಯ ದೇವರ ಪೂಜಾ ಪಾತ್ರೆಯ ಮಾರಾಟಗಾರರಿಗೆ ಅಧಿಕ ಲಾಭವಿರುವುದು.
  • ಮಕರ
  • ಹಾರ್ಡ್‌ವೇರ್‌ ಅಂಗಡಿಯವರಿಗೆ ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ. ಸತ್ಫಲಗಳನ್ನು ಅನುಭವಿಸಲು ಶ್ರೀಲಕ್ಷ್ಮಿನರಸಿಂಹ ಸ್ವಾಮಿಯ ಸೇವೆಯು ಅನುಕೂಲವಾಗಲಿದೆ.
  • ಕುಂಭ
  • ಶ್ರಮದ ದುಡಿಮೆಯೇ ಮಂತ್ರವಾಗಿರಲಿ. ಕಾನೂನಿಗೆ ವಿರುದ್ಧವಾದ ಅಥವಾ ನಿಯಮ ಉಲ್ಲಂಘನೆಯ ಕೆಲವು ಸಂಗತಿಗಳು ನಡೆಯಬಹುದು. ದುರ್ಗಾಪರಮೇಶ್ವರಿಯ ದರ್ಶನದಿಂದ ಎಲ್ಲಾ ಒಳ್ಳೆಯದಾಗುವುದು.
  • ಮೀನ
  • ಇಂದಿನ ಜೀವನದಲ್ಲಿ ನಿಮಗೆದುರಾಗಿ ಬರುತ್ತಿರುವ ಅದೃಷ್ಟದ ಲಾಭವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.