ದಿನ ಭವಿಷ್ಯ: ಕರ್ಮನಿಷ್ಠೆ, ಪ್ರಾಮಾಣಿಕತೆಗೆ ತಕ್ಕ ಫಲ ಪಡೆಯುತ್ತೀರಿ.
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಆಗಸ್ಟ್ 2025, 20:49 IST
Last Updated 4 ಆಗಸ್ಟ್ 2025, 20:49 IST
ದಿನ ಭವಿಷ್ಯ
ಮೇಷ
ಇಂದಿನ ಕಾರ್ಯ ವೈಖರಿಯನ್ನು ಸ್ವಲ್ಪ ಬದಲಿಸಿ, ಹೊಸ ಕೆಲಸವನ್ನು ಮಾಡಿದರೆ ಜಯ ಕಾಣುವಿರಿ. ಕಠಿಣ ಶ್ರಮದ ಫಲವಾಗಿ ಬಯಸಿದ ಸಂತೋಷದ ಜತೆಗೆ ಹೊಸ ಅನುಭವ ಸಿಗಲಿದೆ.
ವೃಷಭ
ಪಿತೃ ವರ್ಗದವರ ಸಹಾಯ ಹಸ್ತ ಇರಲಿದೆ. ಜೀವನದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು, ದುಃಖಗಳೆಲ್ಲಾ ದೂರಾಗಲಿವೆ. ಸ್ವಲ್ಪ ಹಣ ಖರ್ಚು ಮಾಡಿದಲ್ಲಿ ಸರ್ಕಾರಿ ಕೆಲಸವು ಸಾಧ್ಯ.
ಮಿಥುನ
ಶಸ್ತ್ರಚಿಕಿತ್ಸಾ ವೈದ್ಯರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರಲಿವೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ.
ಕರ್ಕಾಟಕ
ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ. ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ಶ್ರೀವಿಷ್ಣುಸಹಸ್ರನಾಮದ ಪಠಣೆಯು ನೆಮ್ಮದಿಯನ್ನು ತರುವುದು.
ಸಿಂಹ
ಬದುಕಿನ ಬಗ್ಗೆ ಸಂಗಾತಿ ಹೇಳಿದ ಮುಂದಾಲೋಚನೆಯ ವಿಚಾರಗಳಿಗೆ ಮನ್ನಣೆ ನೀಡುವುದು ಉತ್ತಮ. ಜಮೀನು ಕೊಡುಕೊಳ್ಳುವಿಕೆ ವ್ಯವಹಾರಗಳು ಹೆಚ್ಚಾಗಲಿವೆ. ಕಾರ್ಮಿಕರಿಗೆ ಆಡಳಿತ ವರ್ಗದಿಂದ ಅನುಕೂಲಗಳು ಸಿಗಲಿವೆ.
ಕನ್ಯಾ
ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ. ಗೃಹಕೃತ್ಯದ ಪೂರ್ಣ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಕೈಗೊಳ್ಳಿ.
ತುಲಾ
ಗಣ್ಯ ವ್ಯಕ್ತಿಗಳ ಸಹಾಯದಿಂದ ಸಮಸ್ಯೆಗಳನ್ನು ಜಯಿಸುವಿರಿ. ವೃತ್ತಿಪರ ಕೆಲಸಗಳಲ್ಲಿ ನಿರ್ದಾಕ್ಷಿಣ್ಯವಾಗಿ ವ್ಯವಹರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿವೇಶನ ಖರೀದಿಸುವ ಯೋಜನೆ ಹಾಕಿಕೊಳ್ಳಬಹುದು.
ವೃಶ್ಚಿಕ
ಕರ್ಮನಿಷ್ಠೆ ಮತ್ತು ಪ್ರಾಮಾಣಿಕತೆಗೆ ತಕ್ಕ ಫಲ ಪಡೆಯುತ್ತೀರಿ. ಸರಳ ಸ್ವಭಾವದಿಂದ ಮೆಚ್ಚುಗೆ ಗಳಿಸುವಿರಿ. ವರ್ಗಾವಣೆಯಿಂದ ಸಂಸಾರದಿಂದ ದೂರ ಉಳಿಯಲಿದ್ದೀರಿ. ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ.
ಧನು
ಸಹೋದರಿಯರಲ್ಲಿ ಸ್ವ-ಪ್ರಯತ್ನದಿಂದ ಸಂಬಂಧ ಉತ್ತಮ ಪಡಿಸಿಕೊಳ್ಳಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು ರಾಜಕೀಯ ಲಾಭ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
ಮಕರ
ಸಂತಾನ ಪ್ರಾಪ್ತಿಯಾಗಲಿದ್ದು, ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುವಿರಿ. ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಕೇಳಬೇಕಾಗಬಹುದು. ಸಂಯಮದ ನಡವಳಿಕೆ ಅಗತ್ಯ.
ಕುಂಭ
ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪಾಠ ಕಲಿಯುವಂತಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸ.
ಮೀನ
ಮಾತಿನಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ಮಕ್ಕಳ ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ. ಮಂಜುನಾಥನ ಸೇವೆ ಮಾಡುವುದರಿಂದ ಕೋರ್ಟು ವ್ಯವಹಾರಗಳಲ್ಲಿ ಮುನ್ನಡೆ ಕಾಣಲಿದೆ.