ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸುತ್ತಮುತ್ತಲಿನವರ ಬಗ್ಗೆ ಮೌನದಿಂದಿರುವುದು ಒಳಿತು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಆಗಸ್ಟ್ 2025, 19:59 IST
Last Updated 3 ಆಗಸ್ಟ್ 2025, 19:59 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವ್ಯಾಪಾರ –ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದುವರಿಯಲು ಸಹಾಯವಾಗುತ್ತದೆ. ಕೆಲಸ ಮತ್ತು ದುಡಿಮೆ ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ನೆಮ್ಮದಿಗೆ ಕೊರತೆ ಇಲ್ಲ. ಪರಿಸ್ಥಿತಿ ಸುಧಾರಿಸಲಿದೆ.
  • ವೃಷಭ
  • ಕೈಗೊಂಡ ಕಾರ್ಯ ಸಫಲವಾಗಲಿದೆ. ಆರೋಗ್ಯವು ಪಥ್ಯ ಮಾಡುವುದರಿಂದ ಸುಧಾರಣೆಗೆ ಬರುತ್ತದೆ. ಪರಿಚಯಸ್ಥರಿಂದ, ಸ್ನೇಹಿತರಿಂದ ಪಡೆದ ಸಾಲವನ್ನು ಮರುಪಾವತಿ ಮಾಡುವುದರಿಂದ ಗೌರವ ಸಿಗುತ್ತದೆ.
  • ಮಿಥುನ
  • ಕಷ್ಟ–ಸುಖಗಳಿಗೆ ನೆರವಾಗುವ ಮನೋಭಾವವನ್ನು ಬೆಳೆಸಿಕೊಳ್ಳಿ. ವೈದ್ಯರಿಗೆ ವೃತ್ತಿಯಲ್ಲಿ ಸಮಯ ಕಳೆಯಬೇಕಾದ ಅನಿವಾರ್ಯತೆ ಎದುರಾಗುವುದು. ವಿಘ್ನಗಳಿಗೆ ಹೆದರಬೇಡಿ.
  • ಕರ್ಕಾಟಕ
  • ವೈಯಕ್ತಿಕ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗುವುದು . ಖರ್ಚಿಗೆ ಕಾರಣವಾದೀತು. ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ.
  • ಸಿಂಹ
  • ದಾಯಾದಿಗಳು ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅವಕಾಶಗಳು ಒದಗಿ ಬರುತ್ತವೆ. ನೌಕರರಿಗೆ ಆರ್ಥಿಕವಾಗಿ ಅನುಕೂಲ.
  • ಕನ್ಯಾ
  • ಆಲಸ್ಯತನ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಉತ್ಸಾಹಭರಿತರಾಗಿರಿ. ಆಗಾಧ ಜ್ಞಾನ ಶಕ್ತಿ ಹೊರಹೊಮ್ಮಿ ಬರಲು ಸೂಕ್ತ ಕಾಲ. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
  • ತುಲಾ
  • ಬಂಧು–ಮಿತ್ರರ ಸಲಹೆಗಳಿಗೆ ಗಮನ ನೀಡಿ, ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಒತ್ತಡಕ್ಕೆ ಸಿಲುಕದೆ ಕಾರ್ಯನಿರ್ವಹಿಸುವ ಎಲ್ಲರಿಂದಲೂ ಗುರುತಿಸಲಾಗುತ್ತದೆ.
  • ವೃಶ್ಚಿಕ
  • ಪುತ್ರನಿಗೆ ಬಹುದಿನಗಳಿಂದ ನಿರೀಕ್ಷಿಸಿದ ಉದ್ಯೋಗ ಸಿಗುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ. ನೂತನ ಶಿಶುವಿನ ಜನನ ಕುಟುಂಬದ ಸಂತೋಷಕ್ಕೆ ಕಾರಣವಾಗುತ್ತದೆ.
  • ಧನು
  • ಸುತ್ತಮುತ್ತಲಿನವರ ಬಗ್ಗೆ ಮೌನದಿಂದಿರುವುದು ಒಳಿತು. ನೆಚ್ಚಿನ ಬರವಣಿಗೆ ಹವ್ಯಾಸ ಪುನಃ ಆರಂಭಗೊಳ್ಳುವುದು. ಚಿಂತೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
  • ಮಕರ
  • ಕೋಪದ ಮತ್ತು ದಡ್ಡತನದ ತೀರ್ಮಾನದಿಂದ ಪಶ್ಚಾತ್ತಾಪ ಪಡುವಂಥ ಘಟನೆ ನಡೆಯುವುದು. ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿ.
  • ಕುಂಭ
  • ಕೆಲಸದಲ್ಲಿ ಈ ದಿನ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ನಂಬದಿರುವ ಪರಿಸ್ಥಿತಿ ಬರಬಹುದು. ನೆಮ್ಮದಿ ಹೆಚ್ಚಾಗುತ್ತದೆ.
  • ಮೀನ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮವಾದ ಯಶಸ್ಸನ್ನು ಕಾಣುವರು. ಸಂಕಲ್ಪಿತ ಕಾರ್ಯಸಿದ್ಧಿಗೆ ಗಣೇಶನನ್ನು ಪೂಜಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.