ADVERTISEMENT

ದಿನ ಭವಿಷ್ಯ: ಕೃತಕ ನಗುವಿನ ಮುಖವಾಡ ಇಂದು ಕಳಚುವ ಸಾಧ್ಯತೆ ಇದೆ

ಗುರುವಾರ, 18 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಸೆಪ್ಟೆಂಬರ್ 2025, 21:30 IST
Last Updated 17 ಸೆಪ್ಟೆಂಬರ್ 2025, 21:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ಅಚ್ಚುಕಟ್ಟಾದ, ಲೆಕ್ಕಾಚಾರದ ಜೀವನ ಗಂಡನ ಹಣಕಾಸಿನ ಪರಿಸ್ಥಿತಿಯಲ್ಲಿ ಸಹಾಯಕವಾಗಲಿದೆ. ಆಫೀಸಿನ ಕೆಲಸದ ಮೇರೆಗೆ ವಿದೇಶ ಪ್ರಯಾಣ ಮಾಡುವ ಯೋಗವಿದೆ. ತರಕಾರಿ ಬೆಳೆಗಾರರಿಗೆ ಲಾಭ ಸಿಗಲಿದೆ.
  • ವೃಷಭ
  • ನಿಮ್ಮ ಜೀವನದಲ್ಲಿ ಪ್ರಭಾವ ಬೀರಲಿರುವ ಹಲವು ಹೊಸ ಜನರ ಪರಿಚಯದ ಲಾಭವಾಗಲಿದೆ, ಅದನ್ನು ಸದುಪಯೋಗಿಸಿಕೊಳ್ಳಿ. ಉದ್ಯೋಗಹೀನರಿಗೆ ಉದ್ಯೋಗ ಲಾಭವಾಗಲು ದುರ್ಗಾಪರಮೇಶ್ವರಿಯನ್ನು ಆರಾಧಿಸಿ.
  • ಮಿಥುನ
  • ರಾಜಕೀಯ ವರ್ಗದವರಿಗೆ ಸದ್ಯದಲ್ಲೇ ಉನ್ನತ ಸ್ಥಾನಮಾನ ದೊರಕುವುದು. ಶಿಸ್ತುಬದ್ಧ ಜೀವನ ಹದವರಿತ ಭೋಜನ ಮುನ್ನಡೆಗೆ ಸಹಕಾರಿ ಯಾಗುತ್ತದೆ. ಸ್ತ್ರೀ ರೋಗ ಸಂಬಂಧಿತ ಔಷಧಿ ತೆಗೆದುಕೊಳ್ಳುವುದು ಉತ್ತಮ.
  • ಕರ್ಕಾಟಕ
  • ಈ ದಿನ ನಿಮ್ಮನ್ನು ಬಾಧಿಸುವ ಸಮಸ್ಯೆ ಹೂ ಎತ್ತಿದಂತೆ ಬಗೆಹರಿಯಲಿದೆ. ರಾಜಕೀಯ ವ್ಯಕ್ತಿಗಳ ಹಿಂದೆ ತಿರುಗುವುದು ವ್ಯರ್ಥವೆಂದು ಅರಿವಾಗಲಿದೆ. ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗುವುದು.
  • ಸಿಂಹ
  • ಕೃಷಿಯ ಸಂಶೋಧನೆಯಲ್ಲಿ ತೊಡಗಿರುವವರಿಗೆ ಹೊಸ ಸವಾಲುಗಳು ಎದುರಾಗುತ್ತವೆ. ನಿಮ್ಮ ಮಕ್ಕಳ ನಡುವಳಿಕೆ ನಿಮಗೆ ಸರಿಬಾರದಂತಾಗಿ, ಅಸಮಾಧಾನವೂ ಆಗಬಹುದು. ವಿದೇಶಿ ಹೂಡಿಕೆಯಲ್ಲಿ ನಷ್ಟ ನೋಡುವಿರಿ.
  • ಕನ್ಯಾ
  • ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಪತ್ನಿಯ ಅಣ್ಣ-ತಮ್ಮಂದಿರು ನೆರವಾಗುವರು. ಕೆಲಸದಲ್ಲಿ ನೀವು ನಾಲ್ಕಾರು ವಿಷಯ ಗಮನಿಸುವುದರಿಂದ ಅಪೂರ್ಣತೆ ಉಂಟಾಗಲಿದೆ. ಉತ್ತಮ ಕಂಪೆನಿಗಳೊಂದಿಗೆ ಪಾಲುದಾರಿಕೆ ಸಿಗಲಿದೆ.
  • ತುಲಾ
  • ಹೊರಗುತ್ತಿಗೆ ವ್ಯವಹಾರಗಳಲ್ಲಿ ಶ್ರಮ, ಒತ್ತಡ ಜಾಸ್ತಿ ಎನಿಸಿದರೂ ಅವುಗಳಿಂದ ವರಮಾನ ಹೆಚ್ಚಲಿದೆ. ನಿಮ್ಮ ದೌರ್ಬಲ್ಯವನ್ನು ನೀವಾಗಿಯೇ ಇತರರ ಮುಂದೆ ಪ್ರದರ್ಶಿಸಿಕೊಂಡು ಕಷ್ಟಕ್ಕೊಳಗಾಗಬೇಡಿ. ಕೃಷ್ಣನ ಸ್ಮರಿಸಿ.
  • ವೃಶ್ಚಿಕ
  • ಪುರುಷ ಪ್ರಧಾನ ಕುಟುಂಬದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ನಿಮ್ಮ ಗೌರವವವು ತೀರ ಕಡಿಮೆಯಾದಂತೆ ಅನ್ನಿಸಬಹುದು, ದುಃಖವಾಗಲಿದೆ. ಕೃತಕವಾದ ನಗುವಿನ ಮುಖವಾಡವು ಇಂದು ಕಳಚುವ ಸಾಧ್ಯತೆ ಇದೆ.
  • ಧನು
  • ನಿಮ್ಮ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳಬೇಡಿ. ನಿಮ್ಮ ಅನಿವಾರ್ಯದ ರಾತ್ರಿಯ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಭಗವಂತನ ಕೆಲವು ಮುನ್ಸೂಚನೆಗಳನ್ನು ಪರಾಮರ್ಶಿಸಿ.
  • ಮಕರ
  • ಸ್ವತ್ತು ಕೊಳ್ಳುವ ವಿಚಾರದಲ್ಲಿ ಕಾನೂನಿನ ಸಲಹೆ ಅವಶ್ಯವಾಗಿ ಪಡೆಯಿರಿ. ಅನ್ನ ಸಂತರ್ಪಣೆಯಿಂದ ಸಂತೃಪ್ತಿ, ಹಣ ಕಾಸಿನ ಪರಿಸ್ಥಿತಿ ಉತ್ತಮ ವಾಗಿರಲಿದೆ. ಚರ್ಮ ಸಂಬಂಧವಾದ ಅನಾರೋಗ್ಯ ಎದುರಾಗಬಹುದು.
  • ಕುಂಭ
  • ಮುದ್ದಾಗಿ ಸಾಕಿದ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪರ ಊರಿಗೆ ಕಳುಹಿಸುವ ವಿಚಾರವೇ ಪೋಷಕರಿಗೆ ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭವನ್ನು ಕಾಣುವಿರಿ.
  • ಮೀನ
  • ಸರ್ಕಾರಿ ಉದ್ಯೋಗದವರಿಗೆ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ ಎದುರಾಗಲಿದೆ. ವಿದೇಶದಲ್ಲಿರುವ ಮಗನ ಅನಾರೋಗ್ಯದ ಸ್ಥಿತಿ ನಿಮ್ಮನ್ನು ಚಿಂತೆಗೆ ತಳ್ಳುವುದು. ಬಹು ಸಮಯದ ಸಮಸ್ಯೆಗಳಿಗೆ ಉತ್ತರ ಸಿಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.