ದಿನ ಭವಿಷ್ಯ | ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಅಕ್ಟೋಬರ್ 2025, 23:45 IST
Last Updated 14 ಅಕ್ಟೋಬರ್ 2025, 23:45 IST
ದಿನ ಭವಿಷ್ಯ
ಮೇಷ
ಮನೆಯ ಪ್ರತಿಯೊಬ್ಬರ ಬೇಕು-ಬೇಡಗಳನ್ನು ಅರಿತು ತುಂಬು ಕುಟುಂಬವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಖಾಸಗಿ ಕಂಪನಿಯಲ್ಲಿರುವವರು ಉದ್ಯೋಗದಲ್ಲಿ ಅನುಕೂಲ ಪಡೆಯುವರು.
ವೃಷಭ
ಪೂರ್ವಿಕರ ಸಂಪಾದನೆಯ ಆಸ್ತಿಯ ಮಾರಾಟ ವಿಚಾರದಲ್ಲಿ ಅನೇಕ ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಆತ್ಮೀಯರ ದುರ್ಮರಣದ ವಾರ್ತೆಯು ಕಂಗಾಲು ಪಟ್ಟುಕೊಳ್ಳುವಂತೆ ಮಾಡುತ್ತದೆ.
ಮಿಥುನ
ಸ್ವಪ್ರಯತ್ನದಿಂದಾಗಿ ತಲುಪಿದ ಸ್ಥಾನವು, ಇತರರ ಸಹಾಯದಿಂದ ಪಡೆದದ್ದು ಎನ್ನುವ ರೀತಿಯಲ್ಲಿ ಜನರ ಬಾಯಲ್ಲಿ ಕೇಳಿಬಂದು ಮನಸ್ಸಿಗೆ ನೋವಾಗಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
ಕರ್ಕಾಟಕ
ಮಗನ ಕೆಲಸ ನೆರವೇರಿದ ಕಾರಣಕ್ಕೆ ಹೇಳಿಕೊಂಡ ಹರಕೆ ಪೂರ್ಣಗೊಳಿಸುವ ಬಗ್ಗೆ ಮಗನಲ್ಲಿ ಪ್ರಸ್ತಾಪಿಸಿ. ವಂಚನೆಯ ಬುದ್ಧಿಯನ್ನು ತೋರಿಸುವವರನ್ನು ಕಂಡು ಮನಸ್ಸು ಕೊರಗುವುದು.
ಸಿಂಹ
ಸೂತ್ರಧಾರನ ಸ್ಥಾನದಲ್ಲಿ ನಿಂತು ನೀವಾಡಿಸುತ್ತಿರುವ ಕೆಲವು ಕೆಲಸ ಉತ್ತಮವಾದದ್ದು. ಆದರೆ ಗುಪ್ತಕಾರ್ಯಗಳ ಅನುಭವ ಹೊಂದಿದವರು ಕಾಣದ ಕೈಯನ್ನು ಸ್ಮರಿಸಲಿದ್ದಾರೆ.
ಕನ್ಯಾ
ಚಾರಣಗಾರರಿಗೆ ರೋಮಾಂಚನಕಾರಿ ಸ್ಥಳಗಳನ್ನು ಸ್ನೇಹಿತರಿಂದ ತಿಳಿದು ಅಲ್ಲಿಗೆ ಭೇಟಿ ನೀಡುವ ಯೋಚನೆ ಮಾಡುವಿರಿ. ನಿರ್ಲಕ್ಷಿಸುತ್ತಿದ್ದ ಒಡಹುಟ್ಟಿದವರ ಸಲಹೆಗಳೇ ನಿಮ್ಮ ಸಹಾಯಕ್ಕೆ ಬರಲಿವೆ.
ತುಲಾ
ಯೋಗದಲ್ಲಿ ಸಾಧನೆ ಮಾಡುತ್ತಿರುವವರಿಗೆ ಅತ್ಯಾನಂದ ಹೊಂದುವ ಸ್ಥಿತಿ ತಲುಪಲಿದ್ದೀರಿ. ಮಗಳ ಉತ್ತಮ ನಡವಳಿಕೆ ಹೆಮ್ಮೆ ತರುತ್ತದೆ. ಮಧುರವಾದ ಕಂಠ ಸಿರಿಗೆ ಮನ್ನಣೆ ದೊರೆಯಲಿದೆ.
ವೃಶ್ಚಿಕ
ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದೇಹಕ್ಕೆ ಉಷ್ಣದಂತಹ ಸಮಸ್ಯೆಗಳು ಕಾಡಬಹುದು. ಮಾತನಾಡುವಾಗ ಬಳಸುವ ಪದಗಳಿಂದಾಗಿ ಇಂದು ಕೆಲವರು ವ್ಯಕ್ತಿತ್ವವನ್ನು ಲೆಕ್ಕ ಹಾಕುತ್ತಾರೆ.
ಧನು
ವಿದ್ಯಾರ್ಥಿಗಳಾದ ನಿಮಗೆ ಹಳೆಯ ತಪ್ಪುಗಳು ಮತ್ತೆ ಮರುಕಳಿಸಿದಾಗ ಪೋಷಕರಿಗಾಗುವ ಅಸಮಾಧಾನವು ಮರ್ಯಾದೆಯ ಪ್ರಶ್ನೆಯಾಗುತ್ತದೆ. ರೇಷ್ಮೇ ಬೆಳೆಗಾರರಿಗೆ ಉತ್ತಮ ಆದಾಯ ಪ್ರಾಪ್ತಿ .
ಮಕರ
ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ತಾಳ್ಮೆಯಿಂದ ಮತ್ತು ಜಾಣತನದಿಂದ ಒಪ್ಪಿಕೊಳ್ಳಿ. ಸಂತೋಷಕ್ಕಾಗಿ ಮಾಡುವ ಖರ್ಚು ದುಂದುವೆಚ್ಚವಾಗಿ ಕಾಣಬಹುದು.
ಕುಂಭ
ಹೊಟೇಲ್ ಉದ್ದಿಮೆದಾರರಿಗೆ ಸ್ವಲ್ಪ ಮಟ್ಟಿನ ನಷ್ಟಗಳು ಸಂಭವಿಸಬಹುದು ಅಥವಾ ಕೆಲಸಗಾರರ ಬೇಡಿಕೆಯಂಥ ಸಮಸ್ಯೆಗಳು ಎದುರಾಗಬಹುದು. ಏಕಾಂಗಿತನ ಕಾಡುವ ಸಾಧ್ಯತೆ ಇದೆ.
ಮೀನ
ಕಾರ್ಯದೊತ್ತಡದ ನಡುವೆ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದು ಅನಿವಾರ್ಯ. ವಿಚಿತ್ರ ರಾತ್ರಿಯ ಕನಸುಗಳು ಹಗಲನ್ನು ಚಿಂತೆಯಲ್ಲಿ ಕಳೆಯುವಂತೆ ಮಾಡಬಹುದು.