ADVERTISEMENT

ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ

ದಿನ ಭವಿಷ್ಯ: ಸೋಮವಾರ 03 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ನವೆಂಬರ್ 2025, 19:09 IST
Last Updated 2 ನವೆಂಬರ್ 2025, 19:09 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ನೇಹಪರ ಸ್ವಭಾವ, ಪರೋಪಕಾರ, ನಿರ್ಲಿಪ್ತತೆಯಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸಲಿವೆ. ಕೆಲಸಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ದೊರೆಯಲಿದೆ.
  • ವೃಷಭ
  • ಸ್ತ್ರೀಸಂಬಂಧಿ ಸಮಸ್ಯೆಗಳು ಕೋರ್ಟು ಕಚೇರಿಗಳ ಮೆಟ್ಟಿಲನ್ನು ಹತ್ತುವಂತೆ ಮಾಡುವುದು. ಎಚ್ಚರವಾಗಿರಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿದವರು ಲೆಕ್ಕಪತ್ರಗಳ ಪರಿಶೋಧನೆ ಮಾಡುವುದು ಉತ್ತಮ.
  • ಮಿಥುನ
  • ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಸುತ್ತಮುತ್ತಲಿನ ವಾತಾವರಣವೂ ಧನಾತ್ಮಕವಾಗಿ ಬದಲಾವಣೆಯಾಗುವುದು. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ.
  • ಕರ್ಕಾಟಕ
  • ಹಣಕಾಸಿನ ಜವಾಬ್ದಾರಿಯ ಕೆಲಸ ಮಾಡುವವರಿಗೆ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ.
  • ಸಿಂಹ
  • ಮಿತ್ರರೊಬ್ಬರು ಎಲ್ಲ ವಿಧದಲ್ಲಿಯೂ ಕುಟುಂಬದವರಿಗಿಂತಲು ಸಹಾಯವಾಗಲಿದ್ದಾರೆ. ಆತ್ಮೀಯರೊಂದಿಗೆ ವ್ಯವಹಾರಗಳ ಕುರಿತು ಆಳವಾದ ಚರ್ಚೆಯನ್ನು ನಡೆಸಿ.
  • ಕನ್ಯಾ
  • ವೈಯಕ್ತಿಕ ವಿಚಾರವನ್ನು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವುದರಿಂದ ಮಾನಸಿಕ ದುಃಖ ಕಡಿಮೆಯಾಗಲಿದೆ. ಊರಿನ ಅಥವಾ ಪರ ಊರಿನ ಉತ್ಸವದಲ್ಲಿ ಭಾಗವಹಿಸುವುದರಿಂದ ಸಂತುಷ್ಟರಾಗುವಿರಿ.
  • ತುಲಾ
  • ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಸ್ವಂತ ಊರಿನಲ್ಲಿ ಬೇಕಾದ ಪ್ರಯತ್ನ ಮಾಡಿ. ಹಲವು ನಿರೀಕ್ಷೆಗಳೊಂದಿಗೆ ಬಂಧುಗಳು ಮನೆಗೆ ಪ್ರಯಾಣ ಬೆಳೆಸುವರು.
  • ವೃಶ್ಚಿಕ
  • ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿಯಾಗಿ ಗ್ರಾಹಕರಿಂದ ದೂರುಗಳನ್ನು ಕೇಳುವ ಸಂಭವ ಇದೆ. ಧರ್ಮ ಕಾರ್ಯಗಳಲ್ಲಿ ಮಾರ್ಗದರ್ಶನದಿಂದ ಆಸಕ್ತಿ ಹೆಚ್ಚುವುದು.
  • ಧನು
  • ಸ್ವತ್ತು ಮಾರಾಟ ಅಥವಾ ಖರೀದಿಯ ವಿಚಾರದಲ್ಲಿ ಸೋದರರ ಅಭಿಪ್ರಾಯವನ್ನು ಪಡೆದು ಮುಂದುವರಿಯುವುದು ಉತ್ತಮ. ರೈತರು ಉತ್ತಮ ತಳಿಯ ಬೆಳೆಯಿಂದ ಸಂತೋಷ ಹೊಂದುವರು.
  • ಮಕರ
  • ಕೆಲ ನಿರ್ಧಾರಗಳು ಸರಿಯಾಗಿ ಕಂಡು ಬಂದರೂ ಸಭೆಯಲ್ಲಿ ದೃಷ್ಟಿಕೋನವನ್ನು ನೋಡಿ ಬದಲಿಸಿಕೊಳ್ಳಬೇಕಾಗಬಹುದು. ಮೊಮ್ಮಕ್ಕಳ ಬಹಳ ದಿನದ ನಂತರದ ಭೇಟಿ ಸಂತಸ ತರುತ್ತದೆ.
  • ಕುಂಭ
  • ನೀತಿ ನಿಯಮಗಳಿಗೆ ಬದ್ಧರಾದರೆ, ಸತ್ಯ ನಿಮ್ಮದಾಗಿದ್ದರೆ ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಕಂಡುಬಾರದು. ಬೇರೆ ಬೇರೆ ಕಾರಣಗಳಿಗಾಗಿ ಒಂದೆ ಸ್ಥಳಕ್ಕೆ ಪುನಃ ಭೇಟಿ ನೀಡುವಂತಾಗುತ್ತದೆ.
  • ಮೀನ
  • ನಿಕಟ ಸಂಬಂಧಿಗಳೊಂದಿಗೆ ಬದುಕಿನ ದುರ್ಘಟನೆಯ ವಿಷಯಗಳನ್ನು ಹಂಚಿಕೊಳ್ಳುವುದರಿಶದ ಉತ್ತಮ ಸಲಹೆಯನ್ನು ಪಡೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ದೇವತಾನುಗ್ರಹದಿಂದ ಸಿಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.