ADVERTISEMENT

ದಿನ ಭವಿಷ್ಯ: ಈ ರಾಶಿಯವರು ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಜುಲೈ 2024, 0:02 IST
Last Updated 8 ಜುಲೈ 2024, 0:02 IST
   
ಮೇಷ
  • ಬದುಕಿನಲ್ಲಿ ನಡೆದ ಅತ್ಯಂತ ಮುಖ್ಯಘಟ್ಟವನ್ನು ಕಾರಣಾಂತರದಿಂದ ಸ್ಮರಣೆ ಮಾಡುವಿರಿ. ಎಂಥ ಸಂದರ್ಭದಲ್ಲೂ ಒತ್ತಡಕ್ಕೆ ಸಿಲುಕದೆ ಕಾರ್ಯನಿರ್ವಹಿಸುವ ವೈಖರಿಯಿಂದ ಗುರುತಿಸಲ್ಪಡುವಿರಿ.
  • ವೃಷಭ
  • ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಅತಿಯಾದ ಖರ್ಚುವೆಚ್ಚಗಳು ತಗ್ಗುವುದು.
  • ಮಿಥುನ
  • ನೂತನ ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ. ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ನಿಗಾ ವಹಿಸಿ.
  • ಕರ್ಕಾಟಕ
  • ಆರೋಪದ ಮಾತುಗಳು ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದಕ್ಕೆ ಜೀವನ ಸಾಕ್ಷಿಯಾಗಲಿದೆ. ಲಕ್ಷ್ಯಗೊಟ್ಟು ಕೇಳಿದ ವಿಷಯಗಳು ಕ್ಲಿಪ್ತ ಸಮಯದಲ್ಲಿ ಪ್ರಯೋಜನಕ್ಕೆ ಬರಲಿದೆ.
  • ಸಿಂಹ
  • ಹೆಚ್ಚಿನ ಶ್ರಮವಹಿಸಿ ಕೆಲಸ ನಿರ್ವಹಿಸಿದ ಕಾರಣದಿಂದಾಗಿ ದೇಹಾಯಾಸವು ಅಧಿಕವಾಗಿ ಕಾಡುವುದು. ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಅಧಿಕಾರ ಪಡೆದುಕೊಳ್ಳುವಿರಿ. ಪರಿವರ್ತನೆ ಬಾಳಲ್ಲಿ ಬರಲಿದೆ.
  • ಕನ್ಯಾ
  • ಕೈಗೊಂಡ ಕೆಲಸಗಳ ಬಗೆಗೆ ಮುತುವರ್ಜಿ ವಹಿಸುವುದರಿಂದ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗವಿದೆ. ಶುಭ ಸುದ್ದಿ ಕೇಳುವಿರಿ.
  • ತುಲಾ
  • ಸೂಕ್ತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಳ್ಳದೆ ಕಡೆ ಗಳಿಗೆಯಲ್ಲಿ ಕಷ್ಟಪಡುವಿರಿ. ನೂತನ ವಸ್ತ್ರವನ್ನು ಇತರರಿಗೆ ಕೊಡುವಂಥ ದೃಷ್ಟಿಯಿಂದ ಕೊಂಡುಕೊಳ್ಳುವಿರಿ. ಪರಿಶ್ರಮಕ್ಕೆ ತಕ್ಕ ಯಶಸ್ಸು ಕಾಣುವಿರಿ.
  • ವೃಶ್ಚಿಕ
  • ಬಹುದಿನದಿಂದ ಮುಂದೂಡಲ್ಪಟ್ಟಿದ್ದ ದೂರದ ಪ್ರಯಾಣ ಅನಿವಾರ್ಯತೆಯ ಸನ್ನಿವೇಷದಿಂದ ಕೈಗೊಳ್ಳಬೇಕಾಗುತ್ತದೆ. ಶುಭ್ರವಾದಂತಹ ಉಡುಗೆ ತೊಡುಗೆಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತದೆ.
  • ಧನು
  • ತಾರುಣ್ಯದಲ್ಲಿದ್ದಾಗ ಮಾಡಿದ ಬುದ್ಧಿವಂತಿಕೆಯ ಕೆಲಸವು ವೃದ್ಧಾಪ್ಯದಲ್ಲಿ ಅನುಕೂಲವಾಗಲಿದೆ. ದೊಡ್ಡದಾದ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಭಾಯಿಸಿದ ಪಾತ್ರ ನಿಮ್ಮನ್ನು ಸಂತೃಪ್ತರನ್ನಾಗಿಸುತ್ತದೆ.
  • ಮಕರ
  • ಲೋಹದ ಕಾರ್ಖಾನೆಯವರು, ಚಿನ್ನಾಭರಣ ವ್ಯಾಪಾರಿಗಳು ಉದ್ಯೋಗದಲ್ಲಿ ಅಧಿಕ ಲಾಭ ಹೊಂದುವಿರಿ. ಕೋಪ ಶಮನ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗುವುದು. ಜಗದ್ಗುರು ಸೇವೆಯಿಂದ ಅಭೀಷ್ಟಸಿದ್ಧಿ.
  • ಕುಂಭ
  • ಕಷ್ಟಗಳನ್ನು ಎದುರಿಸುವಂಥ ಶಕ್ತಿಯು ನಿಮಗಿಂತ ಕಷ್ಟಪಡುತ್ತಿರುವಂಥ ವ್ಯಕ್ತಿಗಳನ್ನು ನೋಡಿ ಪಡೆದು ಕೊಳ್ಳುವಿರಿ. ಚರ ಆಸ್ತಿಯನ್ನು ಮಾರಾಟ ಮಾಡಿದರೆ ನಷ್ಟ ಸಂಭವಿಸುವುದು. ವೃತ್ತಿಯಲ್ಲಿ ಪೈಪೋಟಿ ಇರಲಿದೆ.
  • ಮೀನ
  • ಮುಜುಗರದ ತೆರೆಗಳನ್ನು ದಾಟಿ ಮನೋಭಿಲಾಷೆಯಂತೆ ಪತಿಯ ಗೃಹದಲ್ಲಿಯು ಜೀವನವನ್ನು ಪ್ರಾರಂಭಿಸುವಿರಿ. ಒಳ ಮನಸ್ಸಿಗೆ ಗೋಚರಿಸಿದ ಅವಘಡವು ನಿಜವಾಗುವ ಸಂಭವವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.