ADVERTISEMENT

ದಿನ ಭವಿಷ್ಯ: ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಮೇ 2024, 0:19 IST
Last Updated 13 ಮೇ 2024, 0:19 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲವೊಂದು ದುರಭ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪ್ರತ್ಯಕ್ಷವಾಗಿ ಗೋಚರವಾಗುತ್ತದೆ ವಾಹನ ಖರೀದಿ ವಿಚಾರಕ್ಕೆ ಶುಭಾಂತ್ಯ ದೊರೆಯಲಿದೆ.
  • ವೃಷಭ
  • ದತ್ತು ಮಕ್ಕಳ ತಂದೆ ತಾಯಿ ಆರೈಕೆಯ ನಂತರವೂ ಮಗುವಿನ ಅಸಮಾಧಾನವನ್ನು ಕಂಡು ದುಃಖಿಸುವಂತಾಗುವುದು. ಸಿನಿಮಾ ನಟರಿಗೆ ಪಾಠ ಕಲಿತು ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪುಗೊಳ್ಳುವ ಅವಕಾಶವಿದೆ.
  • ಮಿಥುನ
  • ಮನೆಯಲ್ಲಿನ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ಸಂಪೂರ್ಣ ಗಮನ ವಹಿಸಬೇಕು. ಕಾರ್ಯ ಕ್ಷೇತ್ರದ ಸಮಸ್ಯೆಗಳನ್ನು ಮನೆಗೆ ತರವುದು ಸರಿಯಲ್ಲ. ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ. ‌
  • ಕರ್ಕಾಟಕ
  • ಭಾಗವಹಿಸುವ ಸಭೆಯಲ್ಲಿ ಪಾಂಡಿತ್ಯಕ್ಕೆ ತಕ್ಕನಾದ ಸ್ಥಾನಮಾನವು ದೊರೆಯದೆ ಇರಬಹುದು. ಮನ ಗೆದ್ದ ಸಂಬಂಧ ಮನೆಯವರ ಮನಸ್ಸನ್ನು ಮುದಗೊಳಿಸುತ್ತದೆ. ಯಾವುದಕ್ಕೂ ಆತುರಗೊಳ್ಳದಿರಿ.
  • ಸಿಂಹ
  • ಆರಕ್ಷಕ ವರ್ಗದವರು ಜಾಗರೂಕತೆಯಿಂದ ವರ್ತಿಸಿ. ಸ್ವತಃ ನೀವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದಂತಹ ಸನ್ನಿವೇಶ ಎದುರಾಗಬಹುದು. ಖರ್ಚು ವೆಚ್ಚಗಳಲ್ಲಿ ಮಿತ ವ್ಯಯ ಸಾಧಿಸಿ.
  • ಕನ್ಯಾ
  • ಪ್ರತಿಯೊಬ್ಬರ ಬೇಕು ಬೇಡಗಳನ್ನು ಅರಿತು ತುಂಬು ಕುಟುಂಬವನ್ನು ನಿಭಾಯಿಸುತ್ತಿರುವವರನ್ನು ಅತಿಥಿಗಳು ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ. ಕಾಡಿನಲ್ಲಿ ಕೆಲಸ ಮಾಡುವಾಗ ವಿಷಪೂರಿತ ಜಂತುಗಳ ಮೇಲೆ ನಿಗಾ ಇರಲಿ.
  • ತುಲಾ
  • ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಈ ದಿನ ಸೂಕ್ತ. ಕೆಲವು ವಿಷಯಗಳು ಸರಿಯಾದ ಸಮಯಕ್ಕೆ ಮರೆತು ಹೋದಂತೆ ಆಗಿ ತೊಳಲಾಟಕ್ಕೆ ಒಳಗಾಗಬೇಕಾದೀತು.
  • ವೃಶ್ಚಿಕ
  • ಇನ್ನೊಬ್ಬರಿಗೆ ಮೋಸ ಮಾಡಲು ಪ್ರೇರೇಣೆ ಸಿಗಲಿದೆ. ಆದರೆ ಬುದ್ಧಿಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳಿರಿ. ಉಡುಪು ವಿನ್ಯಾಸಗಾರರು ಕಂಡುಕೊಂಡ ಹೊಸ ಮಾದರಿಯು ಜನರ ಮಾನಸವನ್ನು ಗೆಲ್ಲಲಿದೆ.
  • ಧನು
  • ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ಕೆಲಸ ಕಾರ್ಯಗಳು ನಿಧಾನವಾಗಿಯಾದರೂ ನೆರವೇರುವುದು. ಹೋಟೆಲ್‌ ಉದ್ಯಮದವರಿಗೆ ಹೆಚ್ಚಿನ ವರಮಾನ ದೊರೆಯಲಿದೆ.
  • ಮಕರ
  • ಪೂರ್ವಿಕರ ಸಂಪಾದನೆಯ ಆಸ್ತಿಯ ಮಾರಾಟ ವಿಚಾರದಲ್ಲಿ ಅನೇಕ ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಆತ್ಮೀಯರ ದುರ್ಮರಣದ ವಾರ್ತೆಯು ಕಂಗಾಲು ಪಟ್ಟುಕೊಳ್ಳುವಂತೆ ಮಾಡುತ್ತದೆ.
  • ಕುಂಭ
  • ಪ್ರತಿ ಬಾರಿಯಂತೆ ಈ ಬಾರಿಯು ಉತ್ತಮ ಕಾರ್ಯಕ್ರಮ ನಿರ್ವಹಣೆಗೆ ಪ್ರತಿಕ್ರಿಯೆಗಳು ಬರುತ್ತವೆ. ಕಾಲ ಕಳೆದಂತೆ ಪ್ರಕೃತಿ ಬದಲಾಗುವ ಹಾಗೆ ಮನಸ್ಸು ತಿಳಿಗೊಂಡು ಸಾಮಾನ್ಯ ಸ್ಥಿತಿಗೆ ಬರುವಿರಿ.
  • ಮೀನ
  • ಊರಿನ ಗೌರವಾನ್ವಿತ ವ್ಯಕ್ತಿಗಳೊಂದಿಗೆ ವ್ಯವಹಾರದ ಬಗ್ಗೆ ಹೇಳಿಕೊಂಡು ಅವರೊಂದಿಗೆ ಜಂಟಿ ಕಾರ್ಯಗಳನ್ನು ನಡೆಸಬಹುದು. ದವಸ ಧಾನ್ಯಗಳು ಪ್ರಾಣಿಗಳ ದಾಳಿಗೆ ತುತ್ತಾಗದಂತೆ ಜಾಗ್ರತೆಯನ್ನು ಮಾಡಿ ಸಂರಕ್ಷಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.