ADVERTISEMENT

ದಿನ ಭವಿಷ್ಯ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ವಾಮಮಾರ್ಗ ಬೇಡ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಜುಲೈ 2025, 22:53 IST
Last Updated 7 ಜುಲೈ 2025, 22:53 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಂಕೋಚವಿಲ್ಲದೆ ನೂತನ ಕಾರ್ಯಭಾರ ಹೆಗಲಿಗೇರಿಸಿಕೊಳ್ಳಿ. ನಂಬುಗೆ ಮತ್ತು ವಿಶ್ವಾಸದಿಂದ ಅವಕಾಶಗಳು ನಿಮ್ಮದಾಗಲಿವೆ. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
  • ವೃಷಭ
  • ನಾನಾ ರೀತಿಯಲ್ಲಿ ಹಣವು ಕೈ ಸೇರಲಿದೆ. ಬಂಧುಮಿತ್ರರಿಂದ ಉತ್ತಮ ಸಹಕಾರ ಲಭ್ಯ. ಗಣ್ಯವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ, ಗೌರವಗಳು ಲಭಿಸಲಿವೆ.
  • ಮಿಥುನ
  • ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗಲಿದೆ. ಗಣನೀಯ ಆದಾಯವಿದ್ದರೂ ಜೊತೆಯಲ್ಲಿಯೇ ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸ ಬೇಕಾಗಬಹುದು.
  • ಕರ್ಕಾಟಕ
  • ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ತಾಯಿಗೆ ಕಣ್ಣಿನ ದೋಷ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ವೈದ್ಯರನ್ನು ಭೇಟಿ ಮಾಡಿ. ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸದಿರಿ.
  • ಸಿಂಹ
  • ತಾಂತ್ರಿಕ ಕ್ಷೇತ್ರದಲ್ಲಿ ಜೀವನ ನಡೆಸುವವರು ಉದ್ಯೋಗದಲ್ಲಿ ದಂಡ ಕಟ್ಟುವ ಸ್ಥಿತಿ ಬರಬಹುದು. ಜಾಗ್ರತೆಯಿಂದ ಕೆಲಸ ಮಾಡಿ. ಹಸಿರು ಬಣ್ಣ ಶುಭ ತರಲಿದೆ.
  • ಕನ್ಯಾ
  • ಗಣಿತದಲ್ಲಿ ಅಥವಾ ಸಂಗೀತದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ. ಸರ್ಕಾರಿ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಕೈಗೊಳ್ಳುವ ಬಗ್ಗೆ ಪರಿಶ್ರಮವಿರಲಿ. ಶುಭ ಕಾರ್ಯಗಳು ನೆರವೇರುವುದು.
  • ತುಲಾ
  • ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆ ಗಳಾಗಬಹುದು. ವೈದ್ಯರಿಗೆ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗಬಹುದು.
  • ವೃಶ್ಚಿಕ
  • ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಲಾಭದಾಯಕ . ವಿದ್ಯಾರ್ಥಿಗಳಿಗೆ ಶ್ರಮದಿಂದ ಉನ್ನತ ಶ್ರೇಣಿ ಲಭಿಸುವುದು. ಗಂಟಲು ಬೇನೆ ಬರಬಹುದು. ಸಮ್ಮಿಶ್ರ ಫಲ ಕಾಣುವಿರಿ. ಕುಲದೇವರ ಸೇವೆಯಿಂದ ಫಲ ಲಭಿಸಲಿದೆ.
  • ಧನು
  • ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ಭರವಸೆಯಂತೆ ನಡೆದುಕೊಳ್ಳುವಿರಿ. ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಅವಲೋಕಿಸಲು ಉತ್ತಮ ದಿನ . ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ವಾಮಮಾರ್ಗ ಬೇಡ.
  • ಮಕರ
  • ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ. ಭವಿಷ್ಯದ ದೃಷ್ಟಿಯಿಂದ ಕೆಲಸ ದೊಡ್ಡದು ಸಣ್ಣದು ಎಂಬ ಯೋಚನೆ ಮಾಡದೇ ಕಾರ್ಯೋನ್ಮುಖರಾಗುವುದು ಉತ್ತಮ.
  • ಕುಂಭ
  • ಆಹಾರ ಪದಾರ್ಥಗಳಿಂದ ಲಾಭ ಸಿಗಲಿದೆ. ಮುಖ್ಯ ಸಲಹೆ ಪಡೆಯಲಿದ್ದು, ಅದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಮುಂದಿನ ಹಾದಿ ಏನೆಂಬುದು ಸ್ಪಷ್ಟವಾಗಲಿದೆ. ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಲಿದ್ದೀರಿ.
  • ಮೀನ
  • ಏನನ್ನಾದರೂ ಸಾಧಿಸಲೇಬೇಕೆಂದಿರುವ ನಿಮಗೆ ಆತ್ಮವಿಶ್ವಾಸದ ಕೊರತೆ ಕಾಣಿಸದು. ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ. ಅತಿ ಔದರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿ ಗಮನಿಸಿಕೊಳ್ಳಿ
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.