ADVERTISEMENT

ದಿನ ಭವಿಷ್ಯ: ಈ ರಾಶಿಯವರ ವ್ಯವಹಾರದಲ್ಲಿ ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಮಾರ್ಚ್ 2024, 23:45 IST
Last Updated 5 ಮಾರ್ಚ್ 2024, 23:45 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾರ್ಮಿಕ ವರ್ಗದವರಲ್ಲಿ ಮೃದು ವರ್ತನೆ ತೋರಿದರೆ ಮಾತ್ರ ಲಾಭವಾಗುವುದು. ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಳ್ಳುವಿರಿ. ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
  • ವೃಷಭ
  • ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಬಾಕಿ ಉಳಿದ ಕೆಲಸವನ್ನು ಪೂರ್ತಿಗೊಳಿಸಲು ಈ ದಿನ ಪ್ರಶಸ್ತವಾಗಿದೆ. ವ್ಯವಹಾರದಲ್ಲಿ ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ ಅತ್ಯಧಿಕವಾಗಿರಲಿದೆ.
  • ಮಿಥುನ
  • ನಿತ್ಯದ ವ್ಯವಹಾರಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ. ಮೇಲಧಿಕಾರಿ ವರ್ಗದವರಿಗೆ ಲೆಕ್ಕ ಪತ್ರಗಳು ಸಮರ್ಪಕವಾಗಿರುವುದು ಕಂಡುಬರುವುದು. ವಿದ್ಯಾಭ್ಯಾಸದಲ್ಲಿನ ಪ್ರಗತಿ ಕಂಡು ಕಂಡುಬರುವುದು.
  • ಕರ್ಕಾಟಕ
  • ಸ್ಪರ್ಧಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ಏರಬಹುದು. ಈ ದಿನ ಮಕ್ಕಳಿಂದ ನೆಮ್ಮದಿ ಅಥವಾ ಸಮಾಧಾನದ ಮಾತುಗಳನ್ನು ಕೇಳುವಿರಿ. ಮನದ ಮಾತುಗಳಿಗೆ ಬೆಲೆ ಕೊಡುವುದು ಉತ್ತಮ.
  • ಸಿಂಹ
  • ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಎಚ್ಚರವಹಿಸದೆ ಅತಿ ವಿಶ್ವಾಸದಿಂದ ಮುಂದುವರಿದರೆ ಅಧಿಕಾರಿ ಜನರಿಂದ ಕಷ್ಟ-ನಷ್ಟಗಳು, ಸ್ಥಾನಮಾನಕ್ಕೆ ಹಾನಿ ಸಂಭವಿಸಬಹುದು. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಸಕಾಲವಾಗಿದೆ.
  • ಕನ್ಯಾ
  • ಉದ್ಯೋಗಸ್ಥ ಮಹಿಳೆಯರಿಗೆ ಅಧಿಕ ಕೆಲಸದ ಜತೆಯಲ್ಲಿ ಹೆಚ್ಚಿನ ಆದಾಯ ಉಂಟಾಗಲಿದೆ. ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುವ ಸಂಬಂಧಿಕರಿಂದ ಉಂಟಾದ ನೋವು ಮರೆಯಲಾಗದಂತೆ ಆಗುವುದು.
  • ತುಲಾ
  • ಬಹಳ ದಿನಗಳಿಂದ ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿದ್ದ ಅತಿ ಹೆಚ್ಚಿನ ವರಮಾನದ ಮಾರ್ಗವನ್ನು ಸ್ನೇಹಿತರೊಬ್ಬರು ತೋರುವರು. ಮೇಲಧಿಕಾರಿಗಳಲ್ಲಿ ಯಾವುದನ್ನೂ ಮುಚ್ಚಿಡಬೇಕಾದ ಅವಶ್ಯಕತೆ ಇರುವುದಿಲ್ಲ.
  • ವೃಶ್ಚಿಕ
  • ಮನಸ್ಸಿನ ಭಾವನೆಗಳನ್ನು ಸ್ನೇಹಿತರಲ್ಲಿ ಹೇಳಿಕೊಳ್ಳುವಿರಿ. ಅದರಿಂದಾಗಿ ಬಹಳ ದಿನದಿಂದ ಇದ್ದ ಆತಂಕ ದೂರಾಗುವುದು ಹಾಗೂ ಸಂತಸ ಮೂಡುತ್ತದೆ. ಆದಾಯದಲ್ಲಿ ಏರಿಳಿತವನ್ನು ನೋಡಬೇಕಾಗುತ್ತದೆ.
  • ಧನು
  • ಟೆಕ್ಸ್ಟ್‌ ಟೈಲ್‌ ಉದ್ಯಮದವರಿಗೆ ಅಪಾರ ಲಾಭವಿದ್ದು , ರಫ್ತು ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಬಹುದು. ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ. ಬಿಳಿ ಬಣ್ಣ ಶುಭ ತರಲಿದೆ
  • ಮಕರ
  • ಅನ್ವೇಷಣೆಯ ಹಾದಿಯಲ್ಲಿ ಮತ್ತಷ್ಟು ದೂರ ಸಾಗಿದಲ್ಲಿ ಯಶಸ್ಸಿನ ಛಾಯೆ ಕಾಣಲಿದೆ. ಪಾಲುದಾರಿಕೆಯನ್ನು ಮುಂದುವರಿಸುವ ಯೋಚನೆಯು ಸರಿಯಾಗಿರುವುದು. ಷೇರಿನ ವ್ಯವಹಾರದಲ್ಲಿ ಹೆಚ್ಚಿನ ಹಣ ಸಂಗ್ರಹವಾದೀತು.
  • ಕುಂಭ
  • ವೃತ್ತಿಪರವಾದ ಕನಸುಗಳ ಸಮೀಪಕ್ಕೆ ಸಾಗಲು ಅಗತ್ಯ ತಯಾರಿ ನಡೆಸಿ. ಲೇವಾದೇವಿ ವ್ಯವಹಾರಗಳಿಂದ ಗಳಿಸಿದ ಹಣ ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವುದು. ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ.
  • ಮೀನ
  • ಮಕ್ಕಳ ವಿಚಾರದಲ್ಲಿ ಮನೆಯವರು ಹೇಳಿಕೊಂಡಿರುವ ಹರಕೆ ತೀರಿ ಸುವ ಬಗ್ಗೆ ನೆನಪಿರಲಿ .ಹೊಸದನ್ನು ಕಲಿಯುವುದಕ್ಕೆ ಉತ್ಸುಕರಾಗಿರುತ್ತೀರಿ. ವಾದ-ವಿವಾದಗಳನ್ನು ಮಾಡಿದಲ್ಲಿ, ಸಮಸ್ಯೆಗೆ ನಾಂದಿ ಹಾಡಿದಂತಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.