ADVERTISEMENT

ದಿನ ಭವಿಷ್ಯ: ಆಫೀಸಿನಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಜುಲೈ 2025, 23:49 IST
Last Updated 30 ಜುಲೈ 2025, 23:49 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮುಂದಿನ ದಿನಗಳ ವ್ಯವಹಾರಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಈ ದಿನ ಮಾಡಿಕೊಳ್ಳುವುದು ಉತ್ತಮ. ಧಾರ್ಮಿಕ ಕಾರ್ಯಗಳನ್ನು ನಡೆಸುವಲ್ಲಿ ಯಶಸ್ವಿಯಾಗುವಿರಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರುವುದು.
  • ವೃಷಭ
  • ಪ್ರವಾಸಿ ಏಜೆಂಟರಿಗೆ ಅಧಿಕ ಆದಾಯವಿರುವುದರ ಜೊತೆಗೆ ಅಧಿಕ ಸಮಸ್ಯೆಯೂ ಎದುರಾಗಬಹುದು. ಈ ದಿನ ತೆರಿಗೆ ಸಂಬಂಧದ ಕೆಲಸಗಳೆಲ್ಲವನ್ನೂ ಪೂರ್ಣಗೊಳಿಸಿರಿ. ಅವಿವಾಹಿತರಿಗೆ ಹೊಸ ಸಂಬಂಧವೊಂದು ಉತ್ತಮವಾಗಿ ಕೂಡಿ ಬರಲಿದೆ.
  • ಮಿಥುನ
  • ನ್ಯಾಯವಾದಿಗಳು ತಮ್ಮ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನೆಡೆಸಿದರೂ ತೀರ್ಪಿನ ಬಗ್ಗೆ ಕಳವಳ ಇರಲಿದೆ. ಸಾಮಾಜಿಕ ಕೆಲಸವನ್ನು ಬದಿಗಿಟ್ಟು ನಿಮ್ಮ ಜವಾಬ್ದಾರಿಯ ಬಗ್ಗೆ, ಸ್ವಂತ ವಿಚಾರಗಳತ್ತ ಹೆಚ್ಚಿನ ಗಮನವನ್ನು ಹರಿಸಿ.
  • ಕರ್ಕಾಟಕ
  • ನಿಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಜೀವನವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಯುವಿರಿ. ಉದ್ವೇಗವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಉತ್ತಮ. ಭರತನಾಟ್ಯ ಕಲಾವಿದರಿಗೆ ಉತ್ತಮವಾದ ವೇದಿಕೆ ಸಿಗಲಿದೆ.
  • ಸಿಂಹ
  • ಉದ್ಯೊಗಿ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡಬೇಕಾಗುವುದು. ಯೋಚಿಸಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು. ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ.
  • ಕನ್ಯಾ
  • ನಿಮ್ಮ ಕ್ರಿಯಾತ್ಮಕತೆಗೆ ಇಂದು ಉತ್ಕೃಷ್ಟ ಮಟ್ಟದಲ್ಲಿ ಬೇಡಿಕೆ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಇಂದು ಹಲವಾರು ಸವಾಲುಗಳನ್ನು ಎದುರುನೋಡಬೇಕಾಗುತ್ತದೆ. ವಿದೇಶದಲ್ಲಿರುವ ಮಕ್ಕಳಿಂದ ಸಂತಸದ ಸುದ್ದಿಯೊಂದನ್ನು ಕೇಳುವಿರಿ.
  • ತುಲಾ
  • ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗಿ. ಕೆಲಸಕ್ಕೆ ಸಂಬಂಧಿಸಿದಂತೆ ಅಧ್ಯಯನವೂ ಅವಶ್ಯವಾಗಿ ಬೇಕಾಗುತ್ತದೆ. ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರುವುದು.
  • ವೃಶ್ಚಿಕ
  • ಆಫೀಸಿನಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿವೆ. ನಿಮ್ಮ ಕೆಲಸಕ್ಕೆ ಕುಟುಂಬದ ಸದಸ್ಯರು ಹೆಚ್ಚಿನ ಸಹಾಯವನ್ನು ಮಾಡುವರು. ಇಂದು ರಾಜಕೀಯ ಪ್ರಭಾವೀ ವ್ಯಕ್ತಿಗಳೊಂದಿಗಿನ ಮಾತುಕಥೆ ನಿಮಗೆ ಲಾಭವನ್ನು ತರಲಿದೆ.
  • ಧನು
  • ಊರಿನ ಅಭಿವೃದ್ಧಿ ಕಾರ್ಯದ ಜವಾಬ್ದಾರಿಗಳು ನಿಮ್ಮ ಸಾಮಾಜಿಕ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಪಾಲುದಾರರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ತಂದೆಯವರ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಇರುವುದು.
  • ಮಕರ
  • ಸರ್ಕಾರಿ ಸಂಬಂಧವಾದ ಅಧಿಕಾರಿಗಳೊಂದಿಗೆ ವ್ಯವಹರಿಸಲು ಇದು ಉತ್ತಮ ದಿನವಾಗಿದೆ. ಶಸ್ತ್ರ ವೈದ್ಯರಿಗೆ ಇಂದು ಹೆಚ್ಚಿನ ಅವಕಾಶಗಳು ದೊರೆಯಲಿವೆ. ಸ್ವ ಉದ್ಯೋಗಿಗಳಿಗೆ ಒಳ್ಳೆಯ ಲಾಭ ಗಳಿಸುವ ಅವಕಾಶ ಇರುವುದು.
  • ಕುಂಭ
  • ಮಂದಗತಿಯಲ್ಲಿ ಕೆಲಸ ಕಾರ್ಯಗಳು ನೆರವೇರಿದರೂ ದಿನಾಂತ್ಯದಲ್ಲಿ ಸಂಪೂರ್ಣವಾಗುವುದರ ಬಗ್ಗೆ ಸಂಶಯ ಬೇಡ. ಕೆಲಸದ ಮೇಲಿನ ಪ್ರಯಾಣಗಳು ಹಿತಕರವಾಗಿರುವುದು. ಹಣಕಾಸಿನ ಕೊರತೆ ಕಾಣುವುದಿಲ್ಲ.
  • ಮೀನ
  • ವ್ಯವಹಾರದ ಮಾತುಕತೆಗಳಿಗೆ ಒಳ್ಳೆಯ ದಿನ. ನಿರುದ್ಯೋಗಿಗಳಿಗೆ ಉತ್ತಮ ನೌಕರಿ ದೊರೆತು ಸಂತಸ ಹೊಂದುವರು. ಉಸಿರಾಟದ ಸಮಸ್ಯೆ ಹೊಂದಿದವರಿಗೆ ವೈದ್ಯರ ಸಲಹೆ ಬೇಕಾಗುತ್ತದೆ. ಉಮಾಮಹೇಶ್ವರನನ್ನು ಆರಾಧಿಸಿ, ಶುಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.