ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಡಿಸೆಂಬರ್ 2025, 23:30 IST
Last Updated 21 ಡಿಸೆಂಬರ್ 2025, 23:30 IST
ದಿನ ಭವಿಷ್ಯ
ಮೇಷ
ಉದ್ಯೋಗದಲ್ಲಿ ಸ್ಥಳ ಬದಲಾವಣೆ ಬೇಕಿದ್ದರೆ, ಹೇಳಿಕೊಳ್ಳಲು ಹಿಂಜರಿಕೆ ಬೇಡ. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ಆದರೆ ದೂರ ಉಳಿಯುವುದು ಕ್ಷೇಮಕರ.
ವೃಷಭ
ಆಸ್ತಿ ಕೊಳ್ಳುವಾಗ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿ ಪಡೆದುಕೊಳ್ಳಿರಿ. ಸೃಜನಶೀಲ ಯೋಜನೆಯನ್ನು ಮುಂದುವರಿಸಲು ಶುಭದಿನ. ಧನಾದಾಯಕ್ಕೆ ಅಡ್ಡಿ ಆತಂಕಗಳು ಇರುವುದಿಲ್ಲ.
ಮಿಥುನ
ಆಫೀಸಿನ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುವುದು. ಷೇರು ವ್ಯವಹಾರ, ಸಿನಿಮಾ ತಯಾರಿಕೆಯಂಥ ಕಾರ್ಯವು ಲಾಭ ತರಲಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕೆಲಸವಿರಲಿದೆ.
ಕರ್ಕಾಟಕ
ಅಧ್ಯಯನ ಸಂಶೋಧನೆಯಿಂದ ಯೋಚಿಸಿದ ಹಣ ಮತ್ತು ಖ್ಯಾತಿಯನ್ನು ಇಷ್ಟದಂತೆ ಪಡೆದುಕೊಳ್ಳಲು ಆಗದೇ ಇರುವುದರಿಂದ ನೆಮ್ಮದಿ ಕಳೆದುಕೊಳ್ಳುವಂತಾಗಲಿದೆ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ.
ಸಿಂಹ
ಅಪರಿಚಿತ ವ್ಯಕ್ತಿಯೊಬ್ಬರಿಂದ ಮುಖ್ಯ ಸಲಹೆಯೊಂದನ್ನು ಪಡೆಯಲಿದ್ದೀರಿ, ಅದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಆಸೆ ಪೂರ್ಣಗೊಳ್ಳಲಿದೆ. ಕ್ರೀಡಾಪಟುಗಳಿಗೆ ದೇಹಬಾಧೆ ಕಾಣಿಸಬಹುದು.
ಕನ್ಯಾ
ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಅಥವಾ ಅಪವಾದದ ಸಮಸ್ಯೆ ಇರುತ್ತದೆ. ಸರ್ಕಾರಿ ಅಧಿಕಾರಿಗಳು ಕಾನೂನು ವಿಷಯಗಳ ಬಗ್ಗೆ ಗಮನ ಹರಿಸಿ. ಭೂ ವ್ಯವಹಾರಗಳು ನಿಧಾನವಾಗಿ ಕೈಗೂಡಲಿವೆ.
ತುಲಾ
ಯಾವ ಕೆಲಸಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಯೋಚಿಸಿ ನಂತರದಲ್ಲಿ ಕಾರ್ಯಶೀಲರಾಗುವುದು ಉತ್ತಮ. ರಿಯಲ್ ಎಸ್ಟೇಟ್‌ದಾರರಿಗೆ ಧನಲಾಭವಿದೆ.
ವೃಶ್ಚಿಕ
ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂಥ ಅವಕಾಶಗಳು ಎದುರಾಗಲಿವೆ. ಭವಿಷ್ಯದ ದೃಷ್ಟಿಯಿಂದ ಯಾವುದೇ ವಿಷಯವನ್ನು ದೊಡ್ಡದು ಸಣ್ಣದು ಎಂಬ ಭೇದ ಮಾಡಬೇಡಿ.
ಧನು
ವ್ಯಾಪಾರ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು. ಮದುವೆ ಮುಂತಾದ ವಿಷಯಗಳತ್ತ ಗಮನಹರಿಸಿ. ಸುಖ ಸಂಪತ್ತಿನ ಚಿಂತೆಯು ನಿದ್ದೆಗೆಡಿಸುತ್ತದೆ.
ಮಕರ
ಇತರರಿಗೆ ನೋವಾಗದಂತೆ ಹಾಗೂ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿಕೊಳ್ಳಿ. ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಫಲ ನೀಡಲಿದೆ.
ಕುಂಭ
ಅಸಾಧಾರಣ ಸಾಧನೆಗಳಿಗಾಗಿ ಪ್ರಶಂಸೆಯ ನುಡಿ ಮತ್ತು ಸನ್ಮಾನ ಪಡೆಯುವಿರಿ. ನಾಸ್ತಿಕತೆಯನ್ನು ಬದಿಗಿಟ್ಟು ದೇವತಾರಾಧನೆ ಮಾಡಿ. ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ.
ಮೀನ
ಅಭಿವೃದ್ಧಿಯಲ್ಲಿ ಅಡೆತಡೆಗಳು ಮತ್ತು ಆತಂಕಕಾರಿ ವಿಚಾರಗಳು ಎದುರಾಗಲಿವೆ. ಒಪ್ಪಂದ ಹಾಗೂ ಸಹಕಾರಗಳು ಬಹಳ ಸುಲಭವಾಗುವುದು. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ.