ದಿನ ಭವಿಷ್ಯ: ಮೇಲಧಿಕಾರಿಗಳ ದುರ್ನಡತೆ ಸಹಿಸುವುದು ಕಷ್ಟ, ಮಿತ್ರರು ಸಹಾಯ ಮಾಡುವರು
ದಿನ ಭವಿಷ್ಯ: 25 ಜುಲೈ 2024 ಗುರುವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಜುಲೈ 2024, 23:34 IST
Last Updated 24 ಜುಲೈ 2024, 23:34 IST
ದಿನ ಭವಿಷ್ಯ
ಮೇಷ
ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ. ನಿಯಮ, ನಿಷ್ಠೆಗಳಿಂದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು. ಕ್ರೀಡಾಪಟುಗಳಿಗೆ ದೇಹಬಾಧೆ ಕಾಣಿಸಬಹುದು.
ವೃಷಭ
ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಕಾಣುವಿರಿ. ಅನವಶ್ಯಕವಾಗಿ ಬಳಸುತ್ತಿರುವ ಹಣದ ಬಗ್ಗೆ ಗಮನವಿರಲಿ.
ಮಿಥುನ
ಕಲೆ, ಆಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದಾಗಿ ಹೆಚ್ಚಿನ ಲಾಭಾಂಶ ನಿರೀಕ್ಷಿಸಬಹುದು. ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
ಕರ್ಕಾಟಕ
ಅಪರಿಚಿತ ವ್ಯಕ್ತಿಯೊಬ್ಬರಿಂದ ಸಲಹೆಯೊಂದನ್ನು ಪಡೆಯಲಿದ್ದೀರಿ. ಅದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಕುಟುಂಬ ವರ್ಗದವರ ಉತ್ತಮ ಬೆಂಬಲವಿರುವುದು. ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
ಸಿಂಹ
ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂಥ ಉತ್ತಮ ಅವಕಾಶಗಳು ಎದುರಾಗುವುವು. ಆಫೀಸಿನ ಕೆಲಸಗಳಿಗಾಗಿ ದೂರದ ಪ್ರಯಾಣ ಲಾಭದಾಯಕ. ರಾಜಕೀಯ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿರಿ.
ಕನ್ಯಾ
ಅಧಿಕಾರಿ ವರ್ಗದವರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಲಭಿಸಲು ಸಾಧ್ಯ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲವಾಗಲಿದೆ.
ತುಲಾ
ಇತರರಿಗೆ ನೋವಾಗದಂತೆ, ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿಕೊಳ್ಳುವುದು ಉತ್ತಮ. ಹಿರಿಯರ ಮಧ್ಯಸ್ತಿಕೆಯಿಂದ ಭೂ ವಿವಾದ ಬಗೆಹರಿಯುವುದು. ಬೆಂಕಿಯಿಂದ ಅನಾಹುತಗಳು ಸಂಭವಿಸಬಹುದು.
ವೃಶ್ಚಿಕ
ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ. ನಾಸ್ತಿಕತೆಯನ್ನು ಬದಿಗಿಟ್ಟು ದೇವತಾರಾಧನೆಯ ಹಾದಿ ಹಿಡಿಯಿರಿ. ಪೊಲೀಸ್ ಸಿಬ್ಬಂದಿಗೆ ಕೆಲಸವಿರಲಿದೆ.
ಧನು
ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು. ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ. ಸುಖ ಸಂಪತ್ತಿನ ಚಿಂತೆ ನಿದ್ದೆಗೆಡಿಸುತ್ತದೆ.
ಮಕರ
ಕೇವಲ ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಬುದ್ಧಿವಂತಿಕೆಯನ್ನೂ ಉಪಯೋಗಿಸ ಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕಾಗುವುದು.
ಕುಂಭ
ಅಧ್ಯಯನ ಸಂಶೋಧನೆಯಿಂದ ಯೋಚಿಸಿದ ಹಣ ಮತ್ತು ಖ್ಯಾತಿ ಇಷ್ಟದಂತೆ ಪಡೆದುಕೊಳ್ಳಲು ಆಗದೇ ಇರುವುದರಿಂದ ನೆಮ್ಮದಿ ಕಳೆದುಕೊಳ್ಳುವಂತಾಗಲಿದೆ. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ.
ಮೀನ
ಉದ್ಯೋಗದಲ್ಲಿ ಸ್ಥಳ ಬದಲಾವಣೆ ಪಡೆಯುವ ಉದ್ದೇಶವಿದ್ದರೆ, ಅಧಿಕಾರಿಗಳೊಡನೆ ಹೇಳಿಕೊಳ್ಳಲು ಹಿಂಜರಿಕೆ ಬೇಡ. ಮೇಲಧಿಕಾರಿಗಳ ದುರ್ನಡತೆ ಸಹಿಸುವುದು ಕಷ್ಟ. ಮಿತ್ರರು ಸಕಾಲಕ್ಕೆ ಆಗುವರು.