ದಿನ ಭವಿಷ್ಯ: ಮಂಗಳವಾರ, 26 ಆಗಸ್ಟ್ 2025: ಈಶ್ವರನ ಆರಾಧನೆಯಿಂದ ಸುಖ ಪ್ರಾಪ್ತಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಆಗಸ್ಟ್ 2025, 23:41 IST
Last Updated 25 ಆಗಸ್ಟ್ 2025, 23:41 IST
ದಿನ ಭವಿಷ್ಯ
ಮೇಷ
ಸಂಸಾರದ ಜೊತೆ ಆನಂದದ ಕ್ಷಣಗಳನ್ನು ಅನುಭವಿಸಿದ ನಂತರ ಸಂಪಾದನೆಗಿಂತ ನೆಮ್ಮದಿ ಮುಖ್ಯವೆನ್ನುವ ತೀರ್ಮಾನಕ್ಕೆ ಬರಲಿದ್ದೀರಿ. ಮಂಗಳ ಕಾರ್ಯಗಳಿಗೆ ಅಡ್ಡಿ ಇರುವುದಿಲ್ಲ.
ವೃಷಭ
ಅನಗತ್ಯವಾಗಿ ಹಣವನ್ನು ವ್ಯರ್ಥ ಮಾಡುವ ರೂಢಿ ಬದಲಿಸಿಕೊಳ್ಳಿರಿ. ನಟ–ನಟಿಯರಿಗೆ ಶುಭ ಸುದ್ಧಿ ಸಿಗುವುದು. ಈಶ್ವರನ ಆರಾಧನೆಯಿಂದ ಸುಖ ಪ್ರಾಪ್ತಿ ಆಗುತ್ತದೆ.
ಮಿಥುನ
ಮಾಡುವ ಕೆಲಸದಲ್ಲಿ ತೃಪ್ತಿ ಇರುತ್ತದೆ. ಮಗನ ವಿಷಯದಲ್ಲಿ ಪ್ರಗತಿ ಇದ್ದು, ಶುಭ ವಾರ್ತೆ ಕೇಳುವಿರಿ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ. ಹಸಿರು ಬಣ್ಣ ಶುಭ ತರಲಿದೆ.
ಕರ್ಕಾಟಕ
ಸಂಗಾತಿಯ ಸಲಹೆಗಳತ್ತ ಗಮನಹರಿಸಿ. ಮಕ್ಕಳ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಮಾಡಬೇಕಾಗಿರುವ ಧರ್ಮಕಾರ್ಯಗಳನ್ನು ಶ್ರದ್ಧೆಯಿಂದ ಆಚರಿಸಿ. ಮಾನಸಿಕವಾಗಿ ಸಧೃಢರಾಗುವಿರಿ.
ಸಿಂಹ
ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸು ಹೊಂದುವ ಲಕ್ಷಣಗಳಿದ್ದರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಬೆನ್ನುನೋವು ಹೋಗಲಾಡಿಸಿಕೊಳ್ಳಲು ಯೋಗದಲ್ಲಿ ಆಸಕ್ತಿ ಮೂಡಲಿದೆ.
ಕನ್ಯಾ
ಕುಟುಂಬದಲ್ಲಿ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ನೀವಾಡಿದ ಮಾತುಗಳು ನಿಮಗೆ ಮುಳ್ಳಾಗಬಹುದು.
ತುಲಾ
ಪಾಲುದಾರಿಕೆ ವ್ಯವಹಾರದಿಂದ ಹೊರಬರುವ ಪ್ರಯತ್ನ ನಡೆಸಿ. ಆಶಾಭಾವನೆ, ವಿಶ್ವಾಸ ಹೆಚ್ಚಲಿದೆ. ಲೇವಾದೇವಿ ವ್ಯವಹಾರ ನಡೆಸುವವರಿಗೆ ಲಾಭ. ಕಮಿಷನ್ ಏಜೆಂಟರಿಗೆ ಯಶಸ್ವಿ ಅವಕಾಶಗಳು ಒದಗಲಿವೆ.
ವೃಶ್ಚಿಕ
ಉದರದಲ್ಲಿ ಹುಣ್ಣುಗಳು ಅಥವಾ ನೋವು ಉಂಟಾಗುವ ಸಾಧ್ಯತೆ ಇದೆ. ಹೊಸ ಯೋಜನೆಗೆ ಹೊಸ ರೂಪ ನೀಡಲು ಅವಕಾಶಗಳು ಎದುರಾಗಲಿವೆ. ಪ್ರೇರಣೆ ಮರುಕಳಿಸಲಿದೆ.
ಧನು
ಮುಖ್ಯ ಕೆಲಸಗಳತ್ತ ಗಮನಹರಿಸಿ. ವೃತ್ತಿರಂಗದಲ್ಲಿ ತಿಳಿವಳಿಕೆಯಂತೆ, ಆಸೆಯಂತೆಯೇ ನಡೆಯಿರಿ. ಇನ್ನೊಬ್ಬರ ಸಲಹೆ ಗುರಿಯನ್ನು, ಯಶಸ್ಸನ್ನು ಬದಲು ಮಾಡಬಹುದು.
ಮಕರ
ತಂದೆಯವರ ಮಾತುಗಳನ್ನು ವೇದವಾಕ್ಯ ಎಂದು ಪರಿಪಾಲಿಸುವುದರಿಂದ ಅಭಿವೃದ್ಧಿಯ ಪಥದಲ್ಲಿ ಸಾಗುವಿರಿ. ಕೋರ್ಟ್ ಕಚೇರಿಯ ಕೆಲಸ ಅಲೆದಾಟವನ್ನು ಮಾಡಿಸುವುದು. ಆರೋಗ್ಯದ ಬಗ್ಗೆ ಗಮನ ಹರಿಸಿ.
ಕುಂಭ
ಹತ್ತಿ ಬಟ್ಟೆಗಳ ತಯಾರಕರಿಗೆ ಬೇಡಿಕೆ ಇರಲಿದೆ. ಬ್ಯಾಂಕ್ ಸಂಬಂಧಿಸಿದ ಉದ್ಯೋಗದವರ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನ ವಿಫಲವಾಗಬಹುದು. ಸಿನೆಮಾ ರಂಗದವರಿಗೆ ಆರ್ಥಿಕವಾಗಿ ಲಾಭ.
ಮೀನ
ವೃತ್ತಿ ಸಂಬಂಧಿತ ಯೋಜನೆಗಳಿಗೆ ಗುರಿಗಳನ್ನು ರೂಪಿಸಿಕೊಳ್ಳುವುದರ ಬಗ್ಗೆ ಹಿರಿಯ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಿರಿ. ಸಾರಿಗೆ ವ್ಯವಹಾರ ನಡೆಸುವವರಿಗೆ ಆದಾಯ-ಖರ್ಚು ಸಮನಾಗಿರುತ್ತದೆ.