ADVERTISEMENT

ದಿನ ಭವಿಷ್ಯ: ಕನ್ಯೆ ಬಗ್ಗೆ ಕೂಲಂಕಷವಾಗಿ ಯೋಚಿಸದೆ ಮದುವೆ ಮಾತುಕತೆ ಮಾಡದಿರಿ

15 ಮೇ 2024 ಬುಧವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಮೇ 2024, 23:36 IST
Last Updated 14 ಮೇ 2024, 23:36 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಶೈಕ್ಷಣಿಕ ಹಾಗೂ ಸಾಂಸಾರಿಕ ಪರೀಕ್ಷೆಗಳೆರಡರಲ್ಲೂ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಈಗಿನದ್ದಕ್ಕಿಂತ ಹೆಚ್ಚು ಅಗತ್ಯವಿದೆ. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ.
  • ವೃಷಭ
  • ವಯಸ್ಸು ಹಾಗೂ ಉತ್ಸಾಹ ಇರುವಾಗ ಮಾತ್ರ ಸಮಾಜ ಸೇವೆ ಮಾಡಬಹುದೆನ್ನುವುದನ್ನು ಗಮನದಲ್ಲಿಟ್ಟು ಸೇವೆ ಸಲ್ಲಿಸಿ. ತಂದೆ ತಾಯಿ ಸಂತೋಷವು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ.
  • ಮಿಥುನ
  • ಯಾರಿಂದಲೋ ಕೇಳಿಸಿಕೊಂಡ ವಾರ್ತೆಗಳನ್ನು ಹಬ್ಬಿಸುವ ಮೊದಲು ಆ ಸುದ್ದಿಯು ಸತ್ಯವೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಿರಿ. ವಾಹನದ ರಿಪೇರಿ ವಿಚಾರದಲ್ಲಿ ಅಧಿಕವಾದ ಖರ್ಚು ಸಂಭವಿಸಲಿದೆ.
  • ಕರ್ಕಾಟಕ
  • ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಲೋಪ ದೋಷವನ್ನು ಮಾಡದೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳು ಉದಾಸೀನ ಮಾಡದೆ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ. ಒಳ್ಳೆಯದಾಗುವುದು.
  • ಸಿಂಹ
  • ನಿವೃತ್ತಿ ಜೀವನವನ್ನು ಸುಖಕರವಾಗಿ ಕಳೆಯುವಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವ ಯೋಜನೆಯನ್ನು ಮಾಡುವಿರಿ. ಮನೆಯ ಜನರೊಂದಿಗೆ ಕಳೆದ ಸಮಯ ಅವಿಸ್ಮರಣೀಯ.
  • ಕನ್ಯಾ
  • ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡು ಪರಿಹಾರವನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳದಿರಿ. ಉದ್ಯೋಗದ ವಿಷಯದಲ್ಲಿ ಉತ್ತಮ ಅವಕಾಶಗಳು ಕೈತಪ್ಪುವ ಸಂದರ್ಭಗಳು ಎದುರಾಗಬಹುದು.
  • ತುಲಾ
  • ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹೆಚ್ಚಿನ ಪ್ರಯತ್ನದ ಅವಶ್ಯಕತೆಯ ಮನವರಿಕೆ ಆಗುತ್ತದೆ. ಸಿದ್ಧಿಸಿದ ಕಲೆಯನ್ನು ಹಣದ ಮುಖ ನೋಡಿ ಅನರ್ಥಕಾರಿಯನ್ನಾಗಿ ಮಾಡಿಕೊಳ್ಳಬೇಡಿ.
  • ವೃಶ್ಚಿಕ
  • ಕುಟುಂಬದವರ ಜತೆ ಕಳೆಯುವ ಪ್ರತಿ ಕ್ಷಣವೂ ನೆನಪಿಟ್ಟುಕೊಳ್ಳಬೇಕಾದಂತಹ ಸನ್ನಿವೇಶಗಳಾಗಿರುತ್ತದೆ. ಗೆಲುವು ಅತ್ಯಂತ ಸಮೀಪ ಇರುವುದು ಬಹಳ ದೂರ ಇದ್ದಂತೆ ಭಾಸವಾಗಿ ಬೇಸೆತ್ತು ಕೈಬಿಡದಿರಿ.
  • ಧನು
  • ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪುವಂಥ ಘಟನೆ ನಡೆದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನವಾಗುವುದು. ಅಧಿಕಾರಿ ವರ್ಗದವರಿಗೆ ಮುಂಬಡ್ತಿಯಂಥ ಕನಸುಗಳು ನೆರವೇರುವುದು. ಅತಿ ನಿದ್ರೆ ಒಳ್ಳೆಯದಲ್ಲ.
  • ಮಕರ
  • ಬದ್ಧವೈರಿಗಳ ಮನೆಯ ಕಷ್ಟವನ್ನು ನೋಡಿ ಮನಸ್ಸು ಕರಗಿ ಸಹಾಯ ಮಾಡುವ ಸಾಧ್ಯತೆಗಳಿವೆ. ಮನೆಯ ದುರಸ್ತಿ ಕಾರ್ಯಗಳು ಅಥವಾ ನೂತನ ಮನೆಯ ನಿರ್ಮಾಣವನ್ನು ಬೇಗ ಮುಗಿಸುವುದು ಸೂಕ್ತ.
  • ಕುಂಭ
  • ತಾಯಿಯ ಬ್ಯಾಂಕ್ ಹಾಗೂ ಕಚೇರಿ ಕೆಲಸಗಳು ನಿಮ್ಮ ಜವಾಬ್ದಾರಿಗೆ ಬರುವುದರಿಂದ ತಿರುಗಾಟ ಮಾಡಬೇಕಾಗುವುದು. ಮನಸ್ಸಿನಲ್ಲಿ ಏಕಾಗ್ರತೆಯಿಂದ ಶಿವನ ನಾಮ ಸ್ಮರಣೆ ಅಥವಾ ಧ್ಯಾನ ಮಾಡಿ.
  • ಮೀನ
  • ವರಾನ್ವೇಷಣೆಯ ಹಂತದಲ್ಲಿರುವ ಕನ್ಯೆಗೆ ಬಂದ ಸಂಬಂಧದ ಬಗ್ಗೆ ಕೂಲಂಕಷವಾಗಿ ಯೋಚಿಸದೆ ಮದುವೆ ಮಾತುಕತೆಯನ್ನು ಮಾಡದಿರಿ. ದುರ್ಲಭವಾದಂತಹ ವಸ್ತುಗಳ ಸಂಪಾದನೆಯಲ್ಲಿ ಹೆಚ್ಚು ಸಮಯ ಸವೆಸದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.