ADVERTISEMENT

ದಿನ ಭವಿಷ್ಯ: ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಸೆಪ್ಟೆಂಬರ್ 2025, 18:30 IST
Last Updated 22 ಸೆಪ್ಟೆಂಬರ್ 2025, 18:30 IST
   
ಮೇಷ
  • ಅಪೇಕ್ಷೆ ಪಟ್ಟಿದ್ದ ಹೊಸ ಉದ್ಯೋಗವನ್ನು ಸಂಪಾದಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮೂಲಕ ಯಶಸ್ಸು ಗಳಿಸುವಿರಿ. ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಕಾರ್ಯಗಳು ಹೆಚ್ಚಲಿವೆ.
  • ವೃಷಭ
  • ತಾಂತ್ರಿಕ ವಿದ್ಯಾರ್ಥಿಗಳು ಪರಿಶ್ರಮ ಪಡಬೇಕಾಗುವುದು. ಮನೆಯಲ್ಲಿ ಮದುವೆ ಸಮಾರಂಭಗಳು ನಿಗದಿಯಾಗುವ ಸಾಧ್ಯತೆ ಇದೆ. ಜೀವನದಲ್ಲಿನ ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಬಹುದು.
  • ಮಿಥುನ
  • ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿ ಹಾಕದೆ ಅವರಿಂದ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳಿ. ಕಲಾವಿದರಿಗೆ ಹಾಗೂ ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣಗಳು ಸಿಗಲಿವೆ.
  • ಕರ್ಕಾಟಕ
  • ಚೋರಭೀತಿ ಇರುವುದರಿಂದ ವ್ಯವಹಾರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಬಗ್ಗೆ ಗಮನವಹಿಸಿ. ಏಕಾಗ್ರತೆ ಹಾಗೂ ಧ್ಯಾನದಿಂದ ಮಾನಸಿಕವಾಗಿ ಸದೃಢರಾಗುವಿರಿ.
  • ಸಿಂಹ
  • ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಕಹಿಘಟನೆ ನಡೆಯಬಹುದು. ಇತ್ತೀಚಿನ ದಿನದಲ್ಲಿ ಬದಲಾವಣೆಗೊಂಡ ಔಷಧಿ ದೇಹಕ್ಕೆ ಹೊಂದಿಕೊಳ್ಳುವುದೋ, ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಿರಿ.
  • ಕನ್ಯಾ
  • ವರಿಷ್ಠ ಅಧಿಕಾರಿಗಳಿಗೆ ವಿಶೇಷ ಅಧಿಕಾರಗಳು ಪ್ರಾಪ್ತವಾಗಲಿವೆ. ಸಂಸ್ಕಾರದ ಕೊರತೆಯಿಂದಾಗಿ ಮಕ್ಕಳು ದಾರಿ ತಪ್ಪಬಹುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಸುತ್ತಾಟವಿರುವುದು.
  • ತುಲಾ
  • ತಡವಾದ ಹಾಗೂ ಬಾಕಿಯುಳಿದ ಕಾರ್ಯಕ್ಕೆ ಇಂದು ಹೊಸ ಜೀವ ಬರುವುದು. ಹೊಸ ಆಲೋಚನೆಗಳು ಹೊಳೆಯುತ್ತವೆ. ನಿಮ್ಮೆದುರಿಗಿರುವ ಅವಕಾಶವನ್ನು ಕಳೆದುಕೊಳ್ಳಬಾರದು. ವಿಮಾ ಏಜೆಂಟರಿಗೆ ಒಳ್ಳೆಯ ದಿನ.
  • ವೃಶ್ಚಿಕ
  • ವಿದ್ಯಾರ್ಥಿಗಳು ಕಡೆಯ ಕ್ಷಣದಲ್ಲಿ ಮಾಡಿದ ಪ್ರಯತ್ನಕ್ಕೆ ಒಳ್ಳೆಯ ಅಂಕ ಪಡೆಯಬಹುದು. ಸ್ವಂತ ಕೆಲಸಕ್ಕೆ ಸಮಯ ಮೀಸಲಿಡುವುದು ಉತ್ತಮ. ಪರಸ್ಥಳದಿಂದ ಪ್ರಮುಖ ಸುದ್ದಿ ತಲುಪುತ್ತದೆ.
  • ಧನು
  • ಕಫ ಪ್ರಕೃತಿಯ ದೇಹ ಹೊಂದಿರುವ ನಿಮಗೆ ಉಸಿರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದಲ್ಲಿ ಏರು-ಪೇರು ಅನುಭವಕ್ಕೆ ಬರಲಿದೆ. ಕ್ರೀಡಾಪಟುಗಳಿಗೆ ಇಂದಿನ ಪಂದ್ಯದಲ್ಲಿ ಕೊನೆಕ್ಷಣದ ಜಯ ಪ್ರಾಪ್ತಿಯಾಗುವುದು.
  • ಮಕರ
  • ಪ್ರಯೋಜನ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವರು. ಹಣಕಾಸಿನ ವ್ಯಾಮೋಹ ಹೆಚ್ಚಾಗಿ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಭೂ ವ್ಯವಹಾರದಲ್ಲಿ ಆದಾಯ ಇರಲಿದೆ.
  • ಕುಂಭ
  • ಶೀಘ್ರಕೋಪಿಗಳಾಗುವ ವ್ಯಕ್ತಿತ್ವಕ್ಕೆ ಬದಲಾವಣೆಯ ಗಾಳಿ ಬೀಸಲಿದೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗರೂಕತೆ ಮುಖ್ಯವಾಗುವುದು. ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳಿರಿ.
  • ಮೀನ
  • ಷೇರು ವ್ಯವಹಾರಗಳು ನಿನ್ನೆಯ ನಷ್ಟವನ್ನು ಹೋಗಲಾಡಿಸಿ ಕೂಡಿ ಬರುವುವು. ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವ ಅಗತ್ಯವಾಗಿರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.