ADVERTISEMENT

ದಿನ ಭವಿಷ್ಯ: ಹುಸಿ ಜಾಹೀರಾತುಗಳಿಗೆ ಮಾರುಹೋಗದಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಸೆಪ್ಟೆಂಬರ್ 2025, 0:03 IST
Last Updated 14 ಸೆಪ್ಟೆಂಬರ್ 2025, 0:03 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹೂವಿನ ಗಿಡ ಮಾರಾಟಗಾರರಿಗೆ ಹೆಚ್ಚಿನ ಆದಾಯವಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಉತ್ತಮ. ಹುಸಿ ಜಾಹೀರಾತುಗಳಿಗೆ ಮಾರುಹೋಗದಿರಿ.
  • ವೃಷಭ
  • ನಿಮ್ಮ ಹಿಂದಿನ ಸೂತ್ರಧಾರನು ನಡೆಸುತ್ತಿರುವ ಕೈವಾಡವು ನಿಮಗೆ ಕಷ್ಟವಾಗುತ್ತಿದ್ದರು ಸಹ ಏನೂ ಮಾಡದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದಲ್ಲಿನ ಹಿಂದಿನ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿವೆ.
  • ಮಿಥುನ
  • ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತ. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುವಿರಿ. ಆಟಿಕೆ ವಸ್ತುಗಳ ಮಾರಾಟಗಾರರಿಗೆ ಶುಭದಿನ.
  • ಕರ್ಕಾಟಕ
  • ನೀವು ಭಾಗವಹಿಸುವ ಸಭೆಯಲ್ಲಿ ನಿಮ್ಮ ಪಾಂಡಿತ್ಯಕ್ಕೆ ತಕ್ಕ ಸ್ಥಾನಮಾನ ಸಿಗದಿರಬಹುದು. ನಿಮ್ಮ ಮನಗೆದ್ದ ಸಂಬಂಧ ಮನೆಯವರ ಮನಸ್ಸನ್ನೂ ಮುದಗೊಳಿಸುತ್ತದೆ. ಯಾವುದಕ್ಕೂ ಆತುರಬೇಡ.
  • ಸಿಂಹ
  • ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶಕರ ಸಲಹೆ ಪಡೆದು ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಶಸ್ತ್ರವೈದ್ಯರಿಗೆ ವೃತ್ತಿಗೆ ಸಂಬಂಧಿಸಿದಂತೆ ಸೌಲಭ್ಯಗಳು ಹೆಚ್ಚಲಿದೆ.
  • ಕನ್ಯಾ
  • ದೇಹಾಲಸ್ಯದಿಂದ ಹಲವು ದಿನಗಳಿಂದ ತಳ್ಳುತ್ತ ಬಂದಿದ್ದ ಕಾರ್ಯಗಳನ್ನು ಇನ್ನು ಮುಂದೆ ಹಾಕುವುದು ಒಳ್ಳೆಯದಲ್ಲ. ಪೋಷಕರ ಮಾತು ಮೀರಿ ಇಂದು ಪ್ರಯಾಣ ಕೈಗೊಳ್ಳಬೇಡಿ. ಆತ್ಮವಿಶ್ವಾಸದ ಕೊರತೆ ಕಾಣಿಸಬಹುದು.
  • ತುಲಾ
  • ಪ್ರತಿಯೊಂದು ವಿಷಯವನ್ನು ತುಂಬಾ ಗಹನವಾಗಿ ಚಿಂತಿಸುತ್ತಾ ಕುಳಿತಲ್ಲಿ ಎಲ್ಲಾ ವಿಷಯಗಳಲ್ಲೂ ದೋಷಗಳು ಕಂಡು ಬರುವವು. ಸ್ನೇಹಿತನ ವಿಷಯದಲ್ಲಿ ಈ ದಿನ ಹೆಚ್ಚಿನ ಆಸಕ್ತಿಯನ್ನು ವಹಿಸಲಿದ್ದೀರಿ.
  • ವೃಶ್ಚಿಕ
  • ಮಧುರವಾದ ನಿಮ್ಮ ಸಾಂತ್ವನ ನುಡಿಗಳು ಬೇಸರಗೊಂಡ ವ್ಯಕ್ತಿಗೆ ಆಸರೆಯಾಗುತ್ತದೆ. ಸಮಾಜ ಸೇವೆಯಲ್ಲಿ ಪುತ್ರರ ಘನತೆ ಗೌರವ ಹೆಚ್ಚಳವಾಗುವುದು. ಉಸಿರಾಟ ಸಂಬಂಧಿ ಸಮಸ್ಯೆಗಳಾಗಬಹುದು, ಜಾಗ್ರತೆ ವಹಿಸಿರಿ.
  • ಧನು
  • ಮಕ್ಕಳ ಅಗತ್ಯವನ್ನು ಪೂರೈಸುವುದರಲ್ಲಿ ಆಸಕ್ತರಾದ ನೀವು ಸಂಜೆ ಮಕ್ಕಳೊಂದಿಗೆ ತಿರುಗಾಟ ಮಾಡುವಿರಿ. ಕಷ್ಟಗಳಿಂದ ಮುಕ್ತರಾಗುವ ಸಂದರ್ಭ ದೇವತಾನುಗ್ರಹದಿಂದ ತುಂಬಾ ಸನಿಹದಲ್ಲಿದೆ.
  • ಮಕರ
  • ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಅಥವಾ ಬೇಡಿಕೆಯನ್ನು ಪೂರ್ಣಗೊಳಿಸಿ. ಕಾರ್ಮಿಕರು ಮನಸ್ಸಿನ ಆಲೋಚನೆಯಂತೆ ಮಾತನಾಡಿದಲ್ಲಿ ಬೇಕಾದ ಸೌಲಭ್ಯಗಳು ದೊರೆಯಲಿವೆ.
  • ಕುಂಭ
  • ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡರೆ ಉತ್ತಮ. ನಿಮ್ಮನ್ನು ಆಡಿಕೊಳ್ಳಲೆಂದೆ ಜನರಿರುವರು, ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು ನಿಮ್ಮ ಸಭ್ಯತೆಯೇ ಮುಖ್ಯ ಕಾರಣವಾಗುವುದು.
  • ಮೀನ
  • ನಿಮ್ಮ ನಿಯತ್ತಿನ ಮುಂದೆ ಯಾರ ಕುತಂತ್ರಗಳು ನಡೆಯುವುದಿಲ್ಲ. ಯೋಜನೆ ಸರಿಯಾಗಿದ್ದಲ್ಲಿ ಆದಾಯ ಹೆಚ್ಚಾಗಿರುತ್ತದೆ. ಕೇವಲ ಅದೃಷ್ಟವನ್ನೇ ನೆಚ್ಚಬೇಡಿ, ಅದೃಷ್ಟದ ಜೊತೆಯಲ್ಲಿ ಪರಿಶ್ರಮವೂ ಬೇಕಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.